ಬೆಂಗಳೂರು: ಜಾಗತಿಕ ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹಿಮ ಪರ್ವತ ಕರಗುತ್ತಿರುವುದು ಗೊತ್ತಿರುವ ಸಂಗತಿ. ಇದು ಇಲ್ಲಿ ಹಿಮದಲ್ಲೇ ಬದುಕುತ್ತಿರುವ ಹಿಮ ಕರಡಿಗಳ ಆಹಾರ ಲಭ್ಯತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಾ?

ಇಲ್ಲ ಎನ್ನುತ್ತಿದೆ ನಾರ್ವೆ ದ್ವೀಪ ಸಮೂಹದಲ್ಲಿ 27 ವರ್ಷದಿಂದ ನಡೆದಿರುವ ಸಂಶೋಧನೆ.

ನಾರ್ವೆಯ ಸ್ವಲ್ಬಾರ್ಡ್ ಮತ್ತು ಉತ್ತರ ಧ್ರುವದಲ್ಲಿ ನಡೆದ ಸಂಶೋಧನೆಯಿಂದ ಈ ಭಾಗದ ಹಿಮ ಕರಡಿಗಳು ತಮ್ಮ ಉಳಿವಿಗೆ ಹೊಸ ಹೊಸ ಆಹಾರವನ್ನು ಹುಡುಕಿಕೊಂಡಿವೆ.ಅವು ವಾಸಿಸುವ ಸಮುದ್ರದಲ್ಲಿ ಹಿಮ ಕರಗುತ್ತಿದ್ದರೂ, ಅವುಗಳ ತೂಕ ಮತ್ತು ಕೊಬ್ಬಿನ ಪ್ರಮಾಣವೂ 27 ವರ್ಷಗಳಿಂದ ಹೆಚ್ಚಾಗಿದೆ. ಸಂಶೋಧಕರಲ್ಲಿ ಇದು ಅಚ್ಚರಿಯನ್ನು ಮೂಡಿಸಿದೆ.

'ಸಂಶೋಧನೆ ಆರಂಭಿಸಿದ ವರ್ಷಗಳಲ್ಲಿ ಹಿಮ ಕರಗಿ ಆಹಾರದ ಕೊರತೆ ಉಂಟಾಗುತ್ತದೆ. ಹಿಮ ಕರಡಿಗಳು ತೂಕ ಕಳೆದುಕೊಂಡು ತೆಳ್ಳಗಾಗುತ್ತವೆ. ಇದರ ಜೊತೆಯಲ್ಲಿ ಅವುಗಳ ಸಂತಾನೋತ್ಪತಿಯ ಮೇಲೂ ಕೆಟ್ಟ ಪರಿಣಾಮ ಬೀರಬಹುದು ಎಂದು ಅಂದಾಜಿಸಿದ್ದೆವು. ಆದರೆ ನಮ್ಮ ಊಹೆ ತಪ್ಪಾಯಿತು. ಹಿಮವಿಲ್ಲದ ದಿನಗಳು ನೂರಕ್ಕಿಂತ ಹೆಚ್ಚಾದರೂ ಸ್ವಲ್ಬಾರ್ಡ್ ಹಿಮ ಕರಡಿಗಳ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲಿಲ್ಲ‘ ಎಂದು ನಾರ್ವೇಜಿಯನ್ ಪೋಲಾರ್ ಬೇರ್ ಇನ್ಸ್ಟಿಟ್ಯೂಟ್ನ ಹಿರಿಯ ವಿಜ್ಞಾನಿ ಜಾನ್ ಆರ್ಸ್ ಹೇಳಿದ್ದಾರೆ.

ಇದಕ್ಕೆ ಏನು ಕಾರಣವೆಂದರೆ ಈ ಕರಡಿಗಳು ನಮ್ಮ ಆಹಾರ ಪದ್ದತಿಯನ್ನೇ ಬದಲಿಸಿಕೊಂಡಿವೆ. ಇವು ನೀರಿನಲ್ಲಿ ವಾಸಿಸುವ ಸೀಲ್ನಂತಹ ಜೀವಿಗಳ ಜೊತೆಯಲ್ಲಿ ನೆಲದ ಮೇಲಿರುವ ಜಿಂಕೆ ಜಾತಿಯ ಪ್ರಾಣಿ ಮತ್ತು ವಾಲ್ರಸ್ಗಳನ್ನು ತಿನ್ನುತ್ತಿವೆ. ಸಂರಕ್ಷಣೆಯ ಫಲವಾಗಿ ಈ ಪ್ರಾಣಿಗಳ ಸಂತತಿ ಹೆಚ್ಚಾಗುತ್ತಿವೆ. ಇವನ್ನು ಭೇಟೆಯಾಡುತ್ತಿವೆ ಜೊತೆಯಲ್ಲಿ ಪಕ್ಷಿಗಳ ಮೊಟ್ಟೆಯನ್ನು ತಿನ್ನುತ್ತಿವೆ.

ಆಹಾರ ಯಥೇಚ್ಚವಾಗಿ ಸಿಕ್ಕ ಕಾರಣದಿಂದ ನಾರ್ವೆ ಸುತ್ತ ಕಂಡುಬರುವ ಹಿಮ ಕರಡಿಗಳ ದೇಹದ ತೂಕ ಹೆಚ್ಚಾಗುತ್ತಿದೆ.

2000 ಇಸವಿಯಿಂದ ಈಚೆಗೆ ಆರ್ಟಿಕ್ ಪ್ರದೇಶದಲ್ಲಿ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆ ಮತ್ತು ಹಿಮ ಕರಗುವಿಕೆ ದುಪ್ಪಟ್ಟಾಗಿದೆ. ಈ ಪ್ರಕ್ರಿಯೆ ಮತ್ತಷ್ಟು ತೀವ್ರವಾದರೆ ಹಿಮ ಕರಡಿಗಳ ತೂಕದಲ್ಲಿ ಬದಲಾವಣೆ ಆಗಬಹುದು. ಇದಕ್ಕೆ 10–20 ವರ್ಷ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಅಧ್ಯಯನ ಉಳಿದ ಹಿಮ ಪ್ರದೇಶದ ಕರಡಿಗಳ ಮೇಲಾಗಿಲ್ಲ ಎಂದೂ ಹೇಳಿದ್ದಾರೆ.
.ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO.ರೀಲ್ಸ್ಗಾಗಿ ಯುವಕರ ಹುಚ್ಚಾಟ ನೋಡಿ ದಂಗಾದ ಹೈದರಾಬಾದ್ ಪೊಲೀಸ್ ಕಮಿಷನರ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.