ಜಾತಿಗಣತಿ ನಡೆಸಬೇಕು ಎನ್ನುವ ಬೇಡಿಕೆಯು ನಗರ ನಕ್ಸಲ್ ಯೋಚನೆಯಾಗಿದೆ.
ನರೇಂದ್ರ ಮೋದಿ, ಪ್ರಧಾನಿ (2024ರ ಚುನಾವಣೆಗೂ ಮುನ್ನ ನಡೆದ ಮಾಧ್ಯಮ ಸಂದರ್ಶನದಲ್ಲಿ ನೀಡಿದ ಹೇಳಿಕೆ)
ನಮ್ಮನ್ನು ಒಡೆದರೆ, ನಾವು ನಾಶವಾಗುತ್ತೇವೆ (ಬಟೇಂಗೇ ತೋ ಕಾಟೇಂಗೆ). ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದೇವಲ್ಲಾ. ಅಲ್ಲಿ ಆಗಿರುವ ತಪ್ಪು ಇಲ್ಲಿ ಆಗಬಾರದು. ನಾವೆಲ್ಲಾ ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ.
ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ (2024ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನೀಡಿದ ಹೇಳಿಕೆ)
ಈ ಅವೈಜ್ಞಾನಿಕ ಜಾತಿ ಗಣತಿಯು ಹಿಂದೂಗಳನ್ನು ವಿಭಜಿಸುವುದು ಬಿಟ್ಟು ಬೇರೇನೂ ಮಾಡದು.. #ಒಡೆದುಆಳುವನೀತಿ #ಸ್ಕ್ಯಾಂಗ್ರೆಸ್ #ಹಿಂದೂವಿರೋಧಿಕಾಂಗ್ರೆಸ್ #ಬೋಗಸ್‌ಜಾತಿಗಣತಿ
ಬಿಜೆಪಿ ಕರ್ನಾಟಕ, (ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕ 2025ರ ಏ.12ರಂದು ಎಕ್ಸ್‌ನಲ್ಲಿ ಮಾಡಿದ ಟ್ವೀಟ್)