ಅಡುಗೆ ಮಾಡಲು ಮಾಲಿನ್ಯಕಾರಕ ಇಂಧನಗಳನ್ನು (ಸೌದೆ, ಸೆಗಣಿ, ಇದ್ದಿಲು ಇತ್ಯಾದಿ) ಬಳಸುವುದರಿಂದ ಮನೆಗಳಲ್ಲಿ ವಾಯು ಮಾಲಿನ್ಯ (ಎಚ್‌ಎಪಿ) ಹೆಚ್ಚಾಗುತ್ತಿದ್ದು, ಇದು ಮಹಿಳೆಯರ ಗ್ರಹಿಕೆ ಸಾಮರ್ಥ್ಯವೂ ಸೇರಿದಂತೆ ಅವರ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದೆ. ಘನ ಇಂಧನಗಳಲ್ಲದೆ ಮಣ್ಣಿನ ಒಲೆಗಳು, ಕಳಪೆ ಅಡುಗೆ ಎಣ್ಣೆ ಬಳಕೆಯಿಂದಲೂ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ವರದಿ ಹೇಳಿದೆ