ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನೆಡಲು ಭಾರತ ಸಜ್ಜಾಗುತ್ತಿದೆ. ದೇಶದ ಮೊದಲ ವಾಣಿಜ್ಯ ಉದ್ದೇಶದ ಭೂಶಾಖ ವಿದ್ಯುತ್ ಸ್ಥಾವರದ ಆರಂಭ ಸನ್ನಿಹಿತವಾಗಿದೆ. ಬಿಸಿನೀರ ಬುಗ್ಗೆಗಳಿಗೆ ಹೆಸರುವಾಸಿಯಾಗಿರುವ ಲಡಾಖ್‌ನ ಪುಗಾ ಕಣಿವೆಯಲ್ಲಿ ಭೂಶಾಖ ವಿದ್ಯುತ್ ಸ್ಥಾವರಕ್ಕಾಗಿ ಕೊಳವೆ ಬಾವಿ ಕೊರೆಯುವ ಪ್ರಕ್ರಿಯೆ ಕೊನೆ ಹಂತ ತಲುಪಿದೆ. ಭೂಶಾಖವನ್ನು ಬಳಸಿಕೊಂಡು ವರ್ಷದ ಎಲ್ಲ ದಿನಗಳಲ್ಲೂ ಪರಿಸರಸ್ನೇಹಿಯಾದ ವಿದ್ಯುತ್ ಉತ್ಪಾದಿಸುವ ದಿನ ದೂರವಿಲ್ಲ ಎಂದು ಈ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಒಎನ್‌ಜಿಸಿ ಹೇಳಿದೆ
ಪ್ರಯೋಜನ ಏನು?
ಭೂಶಾಖದಿಂದ ತಯಾರಿಸುವ ವಿದ್ಯುತ್ ಪರಿಸರ ಸ್ನೇಹಿ. ನವೀಕರಿಸಬಹುದಾದ್ದು. ಭೂಮಿಯ ಆಳದಲ್ಲಿರುವ ಬಿಸಿನೀರನ್ನು ಬಳಸಿ ವರ್ಷದ 365 ದಿನವೂ ವಿದ್ಯುತ್ ಉತ್ಪಾದಿಸಬಹುದು. ಸ್ಥಾವರವು ಹೆಚ್ಚು ಇಂಗಾಲವನ್ನು ಉಗುಳುವುದಿಲ್ಲ. ಹೀಗಾಗಿ ಪರಿಸರದ ಮೇಲಿನ ಹಾನಿ ಕಡಿಮೆ. ಭೂಮಿಯ ಆಳದಲ್ಲಿರುವ ಶಾಖವನ್ನು ಬಳಸುವುದರಿಂದ ಭೂಮಿಯಲ್ಲಿ ಮಳೆ, ಚಳಿ ಸೇರಿದಂತೆ ವಾತಾವರಣದ ತಾಪಮಾನ ಯಾವ ರೀತಿ ಇದ್ದರೂ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸ್ಥಾವರ ನಿರ್ಮಾಣಕ್ಕೆ ಕಡಿಮೆ ಜಾಗ ಸಾಕು. ವಿದ್ಯುತ್ ಉತ್ಪಾದನೆಯ ವೆಚ್ಚವೂ ಕಡಿಮೆ.
ಭೂಶಾಖದಿಂದ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶಗಳು
ವಿದ್ಯುತ್ ಉಪಾದನೆ ಹೇಗೆ?
ಇದೇ ಮೊದಲಲ್ಲ
ಲಡಾಖ್‌ನಲ್ಲಿ ನಿರ್ಮಾಣವಾಗುತ್ತಿರುವುದು ದೇಶದ ಮೊದಲ ಭೂಶಾಖ ವಿದ್ಯುತ್ ಸ್ಥಾವರವೇನಲ್ಲ. ತೆಲಂಗಾಣದ ಭದ್ರಾದ್ರಿ ಕೋತ್ತಗುಡೆಂ ಜಿಲ್ಲೆಯ ಮಣುಗೂರು ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲರೀಸ್ ಕಲ್ಲಿದ್ದಲು ಕಂಪನಿಯು 20 ಕಿಲೊ ವಾಟ್ ಸಾಮರ್ಥ್ಯದ ಭೂಶಾಖ ವಿದ್ಯುತ್ ಸ್ಥಾವರವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ