ಪ್ರತಿಷ್ಠಿತ ಚೆಸ್ ವಿಶ್ವಕಪ್ ನವೆಂಬರ್ ಒಂದರಿಂದ ಗೋವಾದಲ್ಲಿ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಉದಯಿಸಿರುವ ಭಾರತದ ಆಟಗಾರರಿಗೆ ಈ ಟೂರ್ನಿ ಮಹತ್ವದ್ದು. ಇಲ್ಲಿ ಮೊದಲ ಮೂರರಲ್ಲಿ ಸ್ಥಾನ ಪಡೆದರೆ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಅವಕಾಶ ಪಡೆಯಬಹುದು. ವಿಶ್ವ ಚಾಂಪಿಯನ್‌ಷಿಪ್‌ಗೆ ಸವಾಲು ಹಾಕುವ ಆಟಗಾರರನ್ನು ನಿರ್ಧರಿಸುವ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲು ಇಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.