ಜೀವಿತಾವಧಿ ವಿಸ್ತರಿಸುವ ಚರ್ಚೆ ಹೊಸತೇನೂ ಅಲ್ಲ. ಆದರೆ ಅಂದುಕೊಂಡಷ್ಟು ಸುಲಭವೂ ಅಲ್ಲ. ಆದರೆ ಷಿ ಮತ್ತು ಪುಟಿನ್ ನಡುವಿನ ಈ ಸಂಭಾಷಣೆ ಒಂದಷ್ಟು ಚರ್ಚೆಯನ್ನಂತೂ ಹುಟ್ಟುಹಾಕಿದೆ.

ಮೆಲ್ಬರ್ನ್: ಚೀನಾ ಭೇಟಿಯ ಸಂದರ್ಭದಲ್ಲಿ ಬೀಜಿಂಗ್ನಲ್ಲಿ ಸೇನಾ ಗೌರವ ಸ್ವೀಕರಿಸುವಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿಂಗ್ಪಿಂಗ್ ಅವರ ನಡುವೆ ನಡೆದ ಅಮರತ್ವದ ಚರ್ಚೆ ಈಗ ಬಹು ಚರ್ಚಿತ ವಿಷಯವಾಗಿದೆ.

ಜೈವಿಕತಂತ್ರಜ್ಞಾನವನ್ನು ಅಮರತ್ವಕ್ಕೆ ಬಳಸುವುದು ಹೇಗೆ ಎಂಬ ವಿಷಯ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಅದರಲ್ಲೂ ಪದೇಪದೆ ಅಂಗಾಂಗ ಕಸಿಗೆ ಒಳಪಡುವುದರಿಂದ ಶಾಶ್ವತವಾಗಿ ಚಿರಯೌವನ ಪಡೆಯಬಹುದು ಎಂಬುದು ಪುಟಿನ್ ಸಲಹೆಯಾಗಿತ್ತು.

ಜೀವಿತಾವಧಿ ವಿಸ್ತರಿಸುವ ಚರ್ಚೆ ಹೊಸತೇನೂ ಅಲ್ಲ. ಆದರೆ ಅಂದುಕೊಂಡಷ್ಟು ಸುಲಭವೂ ಅಲ್ಲ. ಆದರೆ ಉಭಯ ನಾಯಕರ ಈ ಸಂಭಾಷಣೆ ಒಂದಷ್ಟು ಚರ್ಚೆಯನ್ನಂತೂ ಹುಟ್ಟುಹಾಕಿದೆ.

ಅಂಗಾಂಗ ಕಸಿ ಅಮರತ್ವ ನೀಡಬಲ್ಲದೇ?

ಪುಟಿನ್ ಸಲಹೆಯಂತೆ ಅಂಗಾಂಗ ಕಸಿಯಿಂದ ಅಮರತ್ವ ಸಾಧ್ಯವಿಲ್ಲ ಎಂಬುದು ವಾಸ್ತವಕ್ಕೆ ದೂರವಾದ ಮಾತು. ಕಸಿಗೆ ಬಳಸುವ ಅಂಗಾಂಗವಾದರೂ ಎಲ್ಲಿಂದ ಲಭ್ಯ? ಏಕೆಂದರೆ ಕಸಿ ಮಾಡಬಹುದಾದ ಅಂಗಾಂಗವು ಅತ್ಯಂತ ವಿರಳವಾದ ವೈದ್ಯಕೀಯ ಸಂಪನ್ಮೂಲವಾಗಿದೆ. ಆದರೆ ಈಗಾಗಲೇ ವಯಸ್ಸಾಗಿರುವವರ ಜೀವಿತಾವಧಿ ವಿಸ್ತರಿಸುವ ಸಲುವಾಗಿ ಅತ್ಯಮೂಲ್ಯವಾದ ಅಂಗಗಳನ್ನು ಬಳಸಿದರೆ, ಕಸಿಯ ನಿರೀಕ್ಷೆಯಲ್ಲಿರುವ ಯುವಜನರಿಗೆ ಬದುಕುವ ಆಸೆಯೇ ಕಮರಿದಂತಾಗಲಿದೆ ಎನ್ನುವುದು ತಜ್ಞರ ವಾದ.

ಪುಟಿನ್ ಅವರ ವಾದವು ಪ್ರಯೋಗಾಲಯದಲ್ಲಿ ಆಕರಕೋಶ ಬಳಸಿ ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾದ ಅಂಗಾಂಗಗಳ ಕುರಿತಾದರೆ, ಅದು ಇಂಥ ಸಮಸ್ಯೆ ಸೃಷ್ಟಿಸುವುದಿಲ್ಲ. ಆದರೆ ವಿಜ್ಞಾನಿಗಳು ಮನುಷ್ಯರ ಅಂಗಾಂಶವನ್ನು ಬಳಸಿ ಕಸಿ ಮಾಡಬಹುದಾದ ಅಂಗಾಂಗಳನ್ನು ಸಿದ್ಧಪಡಿಸಿದರೂ, ಅದು ಸದ್ಯ ಇರುವ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ.

ಒಂದೊಮ್ಮೆ ಬೇಡಿಕೆಗಿಂತಲೂ ಹೆಚ್ಚು ಕೃತಕ ಅಂಗಾಂಗಗಳನ್ನು ಪ್ರಯೋಗಾಲದಲ್ಲಿ ಸಿದ್ಧಪಡಿಸಿದರೂ, ದೇಹದ ಸಾಮಾನ್ಯ ಸ್ಥಿತಿಸ್ಥಾಪಕತ್ವ ಕ್ಷೀಣಿಸುತ್ತಲೇ ಇರುತ್ತದೆ. ಅಂಗಾಂಗ ಕಸಿಗಾಗಿ ನಿರಂತರವಾಗಿ ನಡೆಯುವ ಶಸ್ತ್ರಚಿಕಿತ್ಸೆಯೂ ಇದನ್ನು ಇನ್ನಷ್ಟು ಹೆಚ್ಚಿಸುತ್ತದೆ.

ದೇಹದ ಯಾವುದೇ ಅಂಗವನ್ನು ಬದಲಿಸಿದರೂ, ವಯಸ್ಸಾಗುವ ಮಿದುಳು ನಮ್ಮ ದೇಹಕ್ಕೆ ಆ ಸಂದೇಶವನ್ನು ರವಾನಿಸುತ್ತಲೇ ಇರುತ್ತದೆ. ಯಾವುದೇ ದೇಹದಿಂದ ಮೂತ್ರಪಿಂಡ ಅಥವಾ ಯಕೃತ್ ಅನ್ನು ಪಡೆದು ಜೋಡಿಸಿಕೊಳ್ಳಬಹುದು. ಆದರೆ ಮಿದುಳು ಬದಲಿಸುವುದು ಅಸಾಧ್ಯ. ಒಂದೊಮ್ಮೆ ಮಿದುಳನ್ನೂ ಕಸಿ ಮಾಡಿಸಿದರೆ ಆಗ ಆ ದೇಹದಲ್ಲಿರುವವರು ಅವರಾಗಿರುವುದಿಲ್ಲ ಎಂಬುದು ತಜ್ಞರು ಅಭಿಪ್ರಾಯ.

ಜೀವಿತಾವಧಿ ಹೆಚ್ಚಿಸಲು ಇವೆ ಇನ್ನಷ್ಟು ಉತ್ತಮ ಮಾರ್ಗಗಳು

ಕೋತಿ, ಇಲಿ ಮತ್ತು ನುಸಿಗಳಿಗೆ ಕೆಲ ಔಷಧ, ಆನುವಂಶಿಕ ಬದಲಾವಣೆ, ಆಹಾರದಲ್ಲಿನ ಬದಲಾವಣೆ ಮತ್ತು ಜೀವಕೋಶಗಳಲ್ಲಿ ಬದಲಾವಣೆ ತರುವ ಮೂಲಕ ಅವುಗಳ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆದರೆ ಪ್ರಣಿಗಳ ಮೇಲೆ ನಡೆಸಲಾದ ಸಂಶೋಧನೆಯನ್ನು ಮನುಷ್ಯರಲ್ಲಿ ನಡೆಸುವುದು ಕಷ್ಟಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ.

ವಯಸ್ಸಾಗುವ ಪ್ರಕ್ರಿಯೆ ವಿರುದ್ಧ ಕಾರ್ಯಾಚರಣೆ ನಡೆಸುವ ಯೋಜನೆಯೊಂದನ್ನು 2024ರಲ್ಲಿ ಪುಟಿನ್ ಆರಂಭಿಸಿದ್ದರು. ಹಾಗಿದ್ದರೆ ಈ ವಿಷಯದಲ್ಲಿ ಹೊಸ ವೈಜ್ಞಾನಿಕ ಆವಿಷ್ಕಾರ ರಷ್ಯಾದಿಂದಲ ಬರಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಜೀವಿತಾವಧಿ ಹೆಚ್ಚಿಸುವ ಅಥವಾ ಅಮರತ್ವ ಸಾಧಿಸುವ ಸಂಶೋಧನೆಯಲ್ಲಿ ಪುಟಿನ್ ಒಬ್ಬರೇ ಇಲ್ಲ. ಇಂಥದ್ದೊಂದು ಆವಿಷ್ಕಾರ ಜಗತ್ತಿನ ಯಾವ ರಾಷ್ಟ್ರದಿಂದಲಾದರೂ ಆಗಬಹುದು. ಆದರೆ ಪಶ್ಚಿಮದಲ್ಲಿ ಈ ಕುರಿತು ಹೆಚ್ಚು ಸಂಶೋಧನೆಗಳು ನಡೆದಿರುವುದಂತೂ ಸತ್ಯ.

ವಯಸ್ಸಾಗುವುದನ್ನು ನಿಯಂತ್ರಿಸುವುದರಿಂದ ಹಲವು ಲಾಭಗಳಿವೆ

ವಯಸ್ಸಾಗುವುದನ್ನು ನಿಯಂತ್ರಿಸುವುದರಿಂದ ಹಲವು ಲಾಭಗಳಿವೆ. ಏಕೆಂದರೆ ವಯಸ್ಸಾಗುತ್ತಾ ಹಲವು ಗಂಭೀರ ಸ್ವರೂಪದ ಕಾಯಿಲೆಗಳು ಕಾಡುತ್ತವೆ. ವಯಸ್ಸಾಗುವುದನ್ನು ನಿಯಂತ್ರಿಸಿದರೆ ಜನರು ಆರೋಗ್ಯವಂತರಾಗಿರುತ್ತಾರೆ.

ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಮತ್ತು ಮರೆಗುಳಿತನವನ್ನು ತಡೆಯಬಹುದು.

ದೀರ್ಘಾವಧಿಗೆ ಬುದಕುವುದು ನೈತಿಕವೇ?

ದೇಶದ ಜನರ ಆರೋಗ್ಯದ ಕುರಿತು ಚಿಂತಿಸುವ ಬದಲು ತಮ್ಮ ಜೀವಿತಾವಧಿ ಹೆಚ್ಚಿಸಲು ಪುಟಿನ್ ಮತ್ತು ಷಿ ಚರ್ಚೆ ನಡೆಸಿರಬಹುದು. ಆದರೆ ದೀರ್ಘಾವಧಿಗೆ ಬದುಕುವುದನ್ನು ಬಯಸುವುದು ತಪ್ಪೇ?

ಹಲವರು ಸಾವಿಗೆ ಹೆದರುತ್ತಾರೆ. ಇದು ಸಾಮಾನ್ಯ ಮತ್ತು ಅರ್ಥಮಾಡಿಕೊಳ್ಳಬಹುದು. ಜೀವನದ ಹಲವು ಉತ್ತಮ ಸಂಗತಿಗಳನ್ನು ಸಾವು ನುಂಗಿ ಹಾಕುತ್ತದೆ. ಸಾವು ಎಂಬ ಪದವೇ ಭಯಭೀತರನ್ನಾಗಿಸುತ್ತದೆ. 1900ರ ನಂತರದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಜೀವಿತಾವಧಿಯು 30 ವರ್ಷಗಳಷ್ಟು ಹೆಚ್ಚಾಗಿದೆ. ಇದು ಇನ್ನಷ್ಟು ಸುಧಾರಣೆಯಾದರೂ ಉತ್ತಮ. ಆದರೆ ಇಲ್ಲಿರುವ ನೈತಿಕ ಕಾಳಜಿ ಎಂದರೆ ಜೀವಿತಾವಧಿ ಹೆಚ್ಚಳದಿಂದ ಸಾಮಾಜಿಕ ನಿಶ್ಚಲತೆ ಉಂಟಾಗುವ ಸಾಧ್ಯತೆಗಳಿವೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸಾದಂತೆಲ್ಲಾ ನಮ್ಮ ಆಲೋಚನೆಗಳು ಹೆಚ್ಚು ನಿಷ್ಠುರವಾಗುತ್ತಾ ಸಾಗುತ್ತದೆ. ಆದರೆ ಯುವ ಮನಸ್ಸುಗಳು ಸದಾ ಹೊಸತನಕ್ಕೆ ಹಾತೊರೆಯುತ್ತವೆ. ಹಾಲು ಒಬ್ಬ ಸಂಗೀತಗಾರ 150 ವರ್ಷಗಳ ನಂತರವೂ ಗೀತ ಸಂಯೋಜನೆ ಮಾಡುತ್ತಿದ್ದರೆ, ಆಯಾ ಕಾಲದ ಯುವ ಸಂಗೀತಗಾರರಿಗೆ ಅವಕಾಶವೇ ಸಿಗದೇ ಹೋಗಬಹುದು.

ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಸೇರಿದಂತೆ 21ನೇ ಶತಮಾನದಲ್ಲಿ ಹಲವು ಹೊಸ ಸವಾಲುಗಳು ಎದುರಾಗಿವೆ. ಜೀವಿತಾವಧಿ ಹೆಚ್ಚಾದರೆ 2150ರಲ್ಲೂ ಕೆಲ ರಾಷ್ಟ್ರಗಳ ಅಧ್ಯಕ್ಷರು ಅವರೇ ಮುಂದುವರಿಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಆದರೆ ಜೀವಿತಾವಧಿ ತಗ್ಗಿಸುವ ಮತ್ತು ಆರೋಗ್ಯವಂತ ಜೀವನ ಸಾಧಿಸುವ ತಂತ್ರಜ್ಞಾನಗಳು ಅಗತ್ಯ. ತಂತ್ರಜ್ಞಾನ ಎಷ್ಟೇ ಒಳ್ಳೆಯ ಉದ್ದೇಶ ಹೊಂದಿದ್ದರೂ, ಕೆಟ್ಟ ಪರಿಣಾಮಗಳನ್ನೂ ಹೊಂದಿರುತ್ತವೆ ಎಂಬುದನ್ನೂ ಮರೆಯವಂತಿಲ್ಲ. ಒಂದೊಮ್ಮೆ ಜೀವಿತಾವಧಿ ಹೆಚ್ಚಾದಲ್ಲಿ ಸಮಾಜವನ್ನು ಸ್ಥಿರತೆಯಿಂದ ಪಾರು ಮಾಡುವುದು ಹೇಗೆ ಎಂಬುದರತ್ತಲೂ ಆಲೋಚಿಸುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.