ಅನಿರೀಕ್ಷಿತ ಚುಂಬನ, ಪ್ರೇಮ ನಿವೇದನೆ, ತಿರಸ್ಕಾರದ ನೋವು, ಹಾಸ್ಯದ ಹೊನಲು ಹೀಗೆ ಕ್ರೀಡಾಂಗಣ, ಸಂಗೀತ ಕಾರ್ಯಕ್ರಮಗಳಲ್ಲಿ ‘ಕಿಸ್ ಕ್ಯಾಮೆರಾ’ ಸೆರೆಹಿಡಿದ ದೃಶ್ಯಗಳ ಬೃಹತ್ ಪರದೆ ಮೇಲೆ ಮೂಡಿದಾಗ ತುಂಬಿದ ಸಭೆಯಲ್ಲಿ ಉಕ್ಕುವ ಸಡಗರ, ಅಪಾರ ಕರತಾಡನ ಇಲ್ಲವೇ ಅಚ್ಚರಿಯ ‘ಹೂಂ‘ಕರಿಕೆ ವಾತಾವರಣವನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಆದರೆ ಅದೇ ಕ್ಯಾಮೆರಾ ಸೆರೆಹಿಡಿದ ಕಂಪನಿಯ ಸಿಇಒ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನಡುವಿನ ಪ್ರಣಯ ದೃಶ್ಯ ಈಗ ಇಬ್ಬರಿಗೂ ಸಂಕಟ ತಂದಿದೆ. ಜತೆಗೆ ಎಚ್ಚರಕೆ ಗಂಟೆಯಾಗಿದೆ.

ಅಮೆರಿಕ ಹಾಗೂ ಕೆನಡಾಗಳಲ್ಲಿ ‘ಕಿಸ್ ಕ್ಯಾಮ್’ ತೀರಾ ಜನಪ್ರಿಯ. ಇದು ಭಾರತದಲ್ಲಿ ನಡೆಯುವ ಐಪಿಎಲ್ ಪಂದ್ಯದ ವೇಳೆಯೂ ಇಂಥ ಕೆಲ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಉದಾಹರಣೆಗಳಿವೆ. ಟೈಂ ಔಟ್ ಸಂದರ್ಭದಲ್ಲಿ ಆಟಗಾರರು ಪಾನೀಯ ಸ್ವೀಕರಿಸುವ ಸಂದರ್ಭದಲ್ಲಿ, ಕ್ಯಾಮೆರಾಗಳು ಸದ್ದಿಲ್ಲದೆ ಇಂಥ ವಿಭಿನ್ನ ದೃಶ್ಯಗಳಿಗಾಗಿ ಕಣ್ಣಿಟ್ಟಿರುತ್ತವೆ. ಅವು ಸಿಕ್ಕೊಡನೆ, ಆವರಣದಲ್ಲಿರುವ ಬೃಹತ್ ಪರದೆ ಮೇಲೆ ಬಿತ್ತರಿಸುತ್ತವೆ. ಕೆಲವೆಡೆ ಇವುಗಳಿಗೆ ಪ್ರಯಣ ಗೀತೆಯ ಹಿಮ್ಮೇಳವೂ ಇರುತ್ತದೆ ಅಥವಾ ನಿರೂಪಕರ ಕೀಟಲೆಯ ಮಾತುಗಳೂ ಪ್ರತಿಧ್ವನಿಸಬಹುದು.

‘ಕಿಸ್ ಕ್ಯಾಮ್’ ಆರಂಭವಾಗಿದ್ದು ಹೇಗೆ?

1980ರ ಸುಮಾರಿಗೆ ಕ್ಯಾಲಿಫೋರ್ನಿಯಾದಲ್ಲಿ ಈ ಪದ್ಧತಿ ಆರಂಭವಾಯಿತು. ಬೇಸ್ಬಾಲ್ ಆಟದ ನಡುವಿನ ಗಂಭೀರ ಮೌನವನ್ನು ಮುರಿಯಲು ಈ ತಂತ್ರವನ್ನು ಬಳಸಲಾಯಿತು. ತಮಾಷೆಗಾಗಿ ಆರಂಭಗೊಂಡಿದ್ದು, ನಂತರ ಅಭಿಮಾನಿಗಳ ಅಚ್ಚುಮೆಚ್ಚಿನದಾಯಿತು. ಇಂಥ ಬೃಹತ್ ವೇದಿಕೆಗಳಲ್ಲಿ ‘ಕಿಸ್ ಕ್ಯಾಮ್’ ಇರಲೇಬೇಕು ಎಂಬ ಹಕ್ಕೊತ್ತಾಯವೂ ನಡೆದವು.

ಇದು ಹೇಗೆ ಕೆಲಸ ಮಾಡುತ್ತದೆ?

ನೂರಾರು ಜನರು ಸೇರಿರುವ ಸ್ಥಳದಲ್ಲಿ ಅತ್ಯಧಿಕ ಗುಣಮಟ್ಟದ ಕ್ಯಾಮೆರಾ ಮೂಲಕ ವಿಶಿಷ್ಟವಾದ ಜೋಡಿಯನ್ನು ಹುಡುಕುತ್ತಾರೆ. ಅವರನ್ನೇ ಕೆಲ ಸಮಯದವರೆಗೂ ಸೆರೆಹಿಡಿಯುವ ಇವರು, ಅದರಲ್ಲಿನ ರೋಮಾಂಚನ ದೃಶ್ಯವನ್ನು ಆಯ್ಕೆ ಮಾಡಿ ಪ್ರಸಾರ ಮಾಡುತ್ತಾರೆ. ಹೆಚ್ಚಿನದಾಗಿ ಇವರು ಜೋಡಿಯನ್ನೇ ಹುಡುಕುತ್ತಾರೆ. ಆಸ್ಟ್ರೊನೊಮರ್ ಕಂಪನಿಯ ಸಿಇಒ ಆ್ಯಂಡಿ ಬೇರಾನ್ ಮತ್ತು ಕ್ರಿಸ್ಟಿನ್ ಕ್ಯಾಬೊಟ್ ಅವರ ಪ್ರಣಯ ದೃಶ್ಯ ಬಹಿರಂಗಗೊಂಡಿದ್ದೂ ಇದೇ ಮಾದರಿಯಲ್ಲೇ.

ಕಿಸ್ ಕ್ಯಾಮ್ಗೆ ಇತ್ತೀಚಿನ ದಿನಗಳಲ್ಲೊಂದು ಹೊಸ ಸೇರ್ಪಡೆ ಎಂದರೆ, ಸೆರೆಹಿಡಿದ ದೃಶ್ಯದ ಆ್ಯನಿಮೇಷನ್ ಸಿದ್ಧಪಡಿಸಿ ಅದೇ ಬೃಹತ್ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನು ಕಂಡ ಸಭಿಕರು, ಆ ಜೋಡಿಗೆ ಮತ್ತೊಮ್ಮೆ ಅದನ್ನು ಪುನರಾವರ್ತಿಸಲು ಒತ್ತಾಯಿಸುತ್ತಾರೆ ಇಲ್ಲವೇ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ. ಒಂದೊಮ್ಮೆ ನಿರಾಕರಿಸಿದರೆ, ಅದೇ ದೃಶ್ಯ ಮತ್ತೆ ಮತ್ತೆ ಪ್ರಸಾರವಾಗುತ್ತದೆ.

‘ಕಿಸ್ ಕ್ಯಾಮ್’ ಯಾರನ್ನು ಆಯ್ಕೆ ಮಾಡುತ್ತದೆ?

ಪ್ರಣಯ ಜೋಡಿಗಳೇ ‘ಕಿಸ್ ಕ್ಯಾಮ್’ನ ಅಚ್ಚುಮೆಚ್ಚು. ಕೆಲವು ಸಂದರ್ಭಗಳಲ್ಲಿ ಸ್ನೇಹಿತರು, ಸೋದರ–ಸೋದರಿಯರು, ಸಂಬಂಧಿಕರು, ಅಪರಿಚಿತರು ಹೀಗೆ ಆ ಸಂದರ್ಭಕ್ಕೆ ಯಾರು ಸೂಕ್ತವೋ ಅವರೇ ಆ ಬೃಹತ್ ಪರದೆಯಲ್ಲಿ ರಾರಾಜಿಸುತ್ತಾರೆ. ಇಲ್ಲಿ ಪ್ರಸಾರವಾಗು ದೃಶ್ಯಗಳು ಸಂತಸ ಉಕ್ಕಿಸಬಹುದು, ಮುಜುಗರ ಉಂಟು ಮಾಡಬಹುದು ಅಥವಾ ಅನಿರೀಕ್ಷಿತವೂ ಆಗಿರಬಹುದು. ಆದರೆ ಒಟ್ಟಾರೆ ಉದ್ದೇಶ ಮನರಂಜನೆಯೇ ಆಗಿರುತ್ತದೆ.

ಇದಕ್ಕೇಕೆ ಅಷ್ಟೊಂದು ಬೇಡಿಕೆ?

ಗಂಭೀರ ಸ್ವರೂಪದ ಅಥವಾ ತೀರಾ ಪೈಪೋಟಿಯಿಂದ ತುಂಬಿರುವ ಪಂದ್ಯದದಲ್ಲಿನ ಆ ನಿಶಬ್ಧವನ್ನು ಮುರಿಯಲು ‘ಕಿಸ್ ಕ್ಯಾಮ್’ ಬಳಸಲಾಗುತ್ತದೆ. ಹಾಸ್ಯದ ಹೊನಲು, ಪ್ರಣಯದ ದೃಶ್ಯಗಳು, ಪೂರ್ವನಿರ್ಧಾರಿತವಲ್ಲದ ಅಚ್ಚರಿಗಳನ್ನು ತುಂಬಿದ ಸ್ವಾಭಾವಿಕ ಮತ್ತು ಆ ಕ್ಷಣದಲ್ಲಿ ಪ್ರೇಕ್ಷಕರ ಭಾವನೆಗಳನ್ನು ಸೆರೆಹಿಡಿದು ಬಿತ್ತರಿಸುವ ಮನರಂಜನೆಯ ಭಾಗ. ಇದು ಕ್ರೀಡಾಂಗಣದಲ್ಲಿ, ಮನೆಯಲ್ಲೇ ಟಿ.ವಿ. ವೀಕ್ಷಿಸುವವರಿಗೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿರುವವರಿಗೂ ಇದು ಉತ್ತಮ ಮನರಂಜನಾ ಸರಕು.

ಇಂಥ ದೃಶ್ಯಗಳು ಹರಿದಾಡುವುದು ಹೇಗೆ?

‘ಕಿಸ್ ಕ್ಯಾಮ್’ ಸೆರೆಹಿಡಿದ ಹಲವು ದೃಶ್ಯಗಳಲ್ಲಿ ಕೆಲವು ಮಾತ್ರ ವ್ಯಾಪಕವಾಗಿ ಹರಿದಾಡುತ್ತವೆ. ಇದಕ್ಕೊಂದು ಇತ್ತೀಚಿನ ಉದಾಹರಣೆ ಎಂದರೆ ಕೋಲ್ಡ್ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ಸಿಇಒ ಮತ್ತು ಎಚ್ಆರ್ ಮುಖ್ಯಸ್ಥೆಯ ದೃಶ್ಯ ಬೃಹತ್ ಪರದೆಯಲ್ಲಿ ಬಿತ್ತರಗೊಂಡಿದ್ದು. ಕ್ಯಾಮೆರಾದಲ್ಲಿ ದಾಖಲಾಗಿದ್ದು ಪರದೆ ಮೇಲೆ ಮೂಡುತ್ತಿದ್ದಂತೆ ಇಬ್ಬರೂ, ಅವಿತುಕೊಂಡಿದ್ದು ಆನ್ಲೈನ್ನಲ್ಲಿ ಸಂಚಲನ ಮೂಡಿಸಿತು. ಒಪ್ಪಿಗೆ, ಖಾಸಗಿತನ ಮತ್ತು ಆ ಕ್ಷಣ ಸುತ್ತ ಪ್ರಶ್ನೆಗಳು ಮೂಡಿದವು.

ಆದರೆ ಈ ಘಟನೆಯಿಂದ ಮುಜುಗರಕ್ಕೊಳಗಾದ ಕಂಪನಿಯು ಬೇರಾನ್ ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಿದೆ. ಘಟನೆ ನಂತರ ಕೃತಕ ಬುದ್ಧಿಮತ್ತೆ ಆಧರಿಸಿದ ಕೆಲ ಜನಪ್ರಿಯ ಮತ್ತು ಇಂದಿಗೂ ಒಂದಾಗದ ಜೋಡಿಗಳ ಇಂಥ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

‘ಕಿಸ್ ಕ್ಯಾಮ್’ನಿಂದ ಎದ್ದಿರುವ ವಿವಾದಗಳು

‘ಕಿಸ್ ಕ್ಯಾಮ್’ನ ಬಹುತೇಕ ದೃಶ್ಯಗಳು ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿರುವುದಿಲ್ಲ. ಆದರೂ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ವ್ಯಕ್ತಿಯ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ಚಿತ್ರ ಪ್ರಸಾರ ಮಾಡುವುದು, ಸಂಬಂಧಿಕರು ಅಥವಾ ಸಹೋದ್ಯೋಗಿಗಳ ಖಾಸಗಿತನ ಬಹಿರಂಗಗೊಂಡ ದುರಂತಗಳೂ ಸೇರಿವೆ. ಇಂಥ ಅಸೂಕ್ಷ್ಮ ಸನ್ನಿವೇಶಗಳು ಇಂದು ನಿಧಾನವಾಗಿ ಬದಲಾಗುತ್ತಿವೆ. ಇತ್ತೀಚೆಗೆ ಕ್ಯಾಮೆರಾಮೆನ್ಗಳು ಹೆಚ್ಚು ಜಾಗರೂಕರಾಗಿರುತ್ತಾರೆ. ಸಮಸ್ಯೆಯಾಗಬಹುದಾದ ಜೋಡಿಗಳನ್ನು ಕೈಬಿಡುತ್ತಾರೆ. ತಮ್ಮ ದೃಶ್ಯ ಪ್ರದರ್ಶಿಸಲು ಒಪ್ಪಿಕೊಂಡು ಬಂದವರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಬೃಹತ್ ಕ್ಯಾಮೆರಾ ಮಾತ್ರವಲ್ಲ. ಇತ್ತೀಚೆಗೆ ಪಕ್ಕದಲ್ಲಿರುವವರ ಪುಟ್ಟ ಮೊಬೈಲ್ ಕ್ಯಾಮೆರಾ ಕೂಡಾ ಸುತ್ತಲಿನ ದೃಶ್ಯಗಳನ್ನು ಶೋಧಿಸುತ್ತಲೇ ಇರುತ್ತದೆ. ತುಸುವೇ ಮೈಮರೆತರೂ ಅದು ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುವುದು ಗ್ಯಾರಂಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.