ನೆರೆ ದೇಶಗಳೊಂದಿಗೆ ಭಾರತ ಗಡಿ ವಿವಾದ ಹೊಂದಿರುವುದು ಇಂದು ನಿನ್ನೆಯ ವಿಚಾರವಲ್ಲ.ಪಾಕಿಸ್ತಾನ, ಚೀನಾ ಜೊತೆಗಿನ ಗಡಿ ಸಮಸ್ಯೆ ಬಹಳ ಹಿಂದಿನಿಂದಲೂ ಚರ್ಚೆಯಲ್ಲಿದೆ. ಆದರೆ ಇದೀಗ ನೇಪಾಳವೂ ಕ್ಯಾತೆ ತೆಗೆದಿರುವುದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.

ನೇಪಾಳದ ಜೊತೆಗಿನ ಗಡಿ ವಿವಾದ ಸುದೀರ್ಘ ಇತಿಹಾಸ ಹೊಂದಿದ್ದರೂ ತೀರಾ ಮುನ್ನೆಲೆಗೆ ಬಂದು ಇತ್ತೀಚಿನ ದಿನಗಳಲ್ಲಿ. ಸುಮಾರು ಆರು ತಿಂಗಳ ಹಿಂದೆ ಉತ್ತರಾಖಂಡ-ನೇಪಾಳ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿಯನ್ನು ಭಾರತವು ತನ್ನ ವ್ಯಾಪ್ತಿಯಲ್ಲಿ ಸೇರಿಸಿ ಪರಿಷ್ಕೃತ ಭೂಪಟ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ನೇಪಾಳವು ಲಿಪುಲೇಖ್ ಪಾಸ್ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಗಡಿಯೊಳಗೆ ಸೇರಿಸಿ ಪರಿಷ್ಕೃತ ನಕಾಶೆಬಿಡುಗಡೆ ಮಾಡಿತ್ತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ನೇಪಾಳ ಲಿಪುಲೇಖ್ ಪಾಸ್, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಭೂಪಟದಲ್ಲಿ ಸೇರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನೂ ಸಂಸತ್ತಿನಲ್ಲಿ ಮಂಡಿಸಿದೆ.

ಕಾಳಿ ನದಿ ಮತ್ತು ಗಡಿ ವಿವಾದ: 372 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕಾಲಾಪಾನಿ 1962ರಿಂದಲೂ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಿಯಂತ್ರಣದಲ್ಲಿದೆ. ಒಟ್ಟಾರೆಯಾಗಿ ಭಾರತವು ನೇಪಾಳದ ಜತೆ ಸುಮಾರು 1,758 ಕಿಲೋಮೀಟರ್ ಉದ್ದದ ಗಡಿ ಹೊಂದಿದೆ. ಕಾಲಾಪಾನಿ ಉತ್ತರಾಖಂಡದ ಪಿತೋರಗಡ ಜಿಲ್ಲೆಯ ಪ್ರದೇಶ ಎಂದು ಭಾರತ ಪ್ರತಿಪಾದಿಸುತ್ತಿದ್ದರೆ, ಅದು ತನಗೆ ಸೇರಿದ ಧಾರಾಚುಲಾ ಜಿಲ್ಲೆಯ ಭಾಗವೆಂದು ನೇಪಾಳ ವಾದಿಸುತ್ತಿದೆ. ಕಾಲಾಪಾನಿ ಕಣಿವೆಯು ಸದ್ಯ ಟಿಬೆಟ್‌ನ ಪ್ರಾಚೀನ ಯಾತ್ರಾಸ್ಥಳವಾದ ಕೈಲಾಸ ಮಾನಸ ಸರೋವರಕ್ಕೆ ತೆರಳುವ ಭಾರತೀಯ ಮಾರ್ಗದಲ್ಲಿ ಬರುತ್ತದೆ.

ಇದನ್ನೂ ಓದಿ:ಭಾರತದ ಭೂಪ್ರದೇಶಗಳನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆ ಮಂಡಿಸಿದ ನೇಪಾಳ

ಕ್ರಿ.ಶ. 1816ರಲ್ಲಿ ನೇಪಾಳ ಮತ್ತು ಬ್ರಿಟಿಷ್ ಅಧೀನದಲ್ಲಿದ್ದ ಭಾರತ ‘ಸುಗೌಲಿ’ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಪ್ರಕಾರ ಕಾಳಿ ನದಿಯ ಪಶ್ಚಿಮದ ಭಾಗ ಭಾರತಕ್ಕೆ ಸೇರಿದ್ದಾಗಿದೆ. ಕಾಲಾಪಾನಿ ಮೂಲಕ ಹಾದುಹೋಗುವ ಕಾಳಿ ನದಿಯ ಮೂಲ ಯಾವುದು ಎಂಬ ಬಗ್ಗೆ ಒಪ್ಪಂದದಲ್ಲಿ ಖಚಿತ ಉಲ್ಲೇಖ ಇಲ್ಲ. ಇದುವೇ ವಿವಾದಕ್ಕೆ ಮೂಲ ಕಾರಣ. ವಿವಿಧ ಉಪನದಿಗಳುಳ್ಳ ಕಾಳಿನದಿ ಹಲವು ಪ್ರದೇಶಗಳಲ್ಲಿ ಹರಿಯುತ್ತದೆ. ‘ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತಿರುವುದು ಕಾಳಿ ನದಿಯ ಮೂಲ. ಹೀಗಾಗಿ ಆ ಪ್ರದೇಶ ತನಗೇ ಸೇರಿದ್ದು’ ಎಂಬುದು ನೇಪಾಳದ ವಾದ. ಆದರೆ, ಕಾಲಾಪಾನಿಯ ಪೂರ್ವಕ್ಕೆ ಇರುವುದೇ ಗಡಿ. ಹೀಗಾಗಿ ಕಾಲಾಪಾನಿ ತನಗೇ ಸೇರಿದ್ದು ಎಂಬುದು ಭಾರತದ ವಾದ.

ಇನ್ನೊಂದು ವಿವಾದಿತ ಪ್ರದೇಶ ಲಿಪುಲೇಖ್ ಪಾಸ್. ಇದು ಭೌಗೋಳಿಕವಾಗಿ ಕಾಲಾಪಾನಿಗಿಂತ ಮೇಲ್ಭಾಗದಲ್ಲಿ ಬರುತ್ತದೆ. ಇದು ಉತ್ತರಾಖಂಡ-ನೇಪಾಳ ಗಡಿಯಲ್ಲಿರುವ ಪರ್ವತ ಮಾರ್ಗವಾಗಿದೆ. ವ್ಯಾಪಾರ ಮತ್ತು ತೀರ್ಥಯಾತ್ರೆಗಾಗಿ ಪ್ರಾಚೀನ ಕಾಲದಿಂದಲೂ ಇದನ್ನು ಭಾರತೀಯರು ಮಾರ್ಗವಾಗಿ ಬಳಸುತ್ತಿದ್ದರು. 1962ರ ಭಾರತ-ಚೀನಾ ಯುದ್ಧದ ನಂತರ ಈ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ನೇಪಾಳ ಹಕ್ಕು ಪ್ರತಿಪಾದಿಸುತ್ತಿರುವ ಇನ್ನೊಂದು ಪ್ರದೇಶ ಲಿಂಪಿಯಾಧೂರಾ. ಇದು ಲಿಪುಲೇಖ್ ಪಾಸ್‌ನ ವಾಯವ್ಯಕ್ಕಿದೆ. ಈ ಪ್ರದೇಶ ಕಾಳಿ ನದಿಯ ಮೂಲ ಎಂದು ನೇಪಾಳ ಪ್ರತಿಪಾದಿಸುತ್ತಿದೆ. ಕಾಲಾಪಾನಿ ಮತ್ತು ಲಿಪುಲೇಖ್ ಕೂಡ ಕಾಳಿನದಿಯ ಪೂರ್ವಕ್ಕೆ ಇರುವುದರಿಂದ ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳ ಹೇಳುತ್ತಿದೆ.

ಕಾಲಾಪಾನಿ ಭಾರತಕ್ಕೆ ಯಾಕೆ ಮುಖ್ಯ?: ಉತ್ತರಾಖಂಡ-ನೇಪಾಳ ಗಡಿಪ್ರದೇಶದಲ್ಲಿ 800 ಕಿಲೋಮೀಟರ್ ಉದ್ದಕ್ಕೆ ಹರಡಿರುವ ಕಾಲಾಪಾನಿಯು ಚೀನಾದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಭಾರತಕ್ಕೆ ಮುಖ್ಯವಾಗಿದೆ. 2000ನೇ ಇಸವಿಯಲ್ಲಿ ನೇಪಾಳದ ಆಗಿನ ಪ್ರಧಾನಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲಾ ನವದೆಹಲಿಗೆ ಭೇಟಿ ನೀಡಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಕಾಲಾಪಾನಿ ಗಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಆದರೆ ನಂತರ ಆ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. 2014ರಲ್ಲಿ ಉಭಯ ರಾಷ್ಟ್ರಗಳು ಮತ್ತೆ ಗಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದಾದ ಕೆಲವು ಸಮಯದ ಬಳಿಕ, 2015ರಲ್ಲಿ ಲಿಪುಲೇಖ್ ಪಾಸ್‌ನಲ್ಲಿ ವಾಣಿಜ್ಯ ವಹಿವಾಟು ಉತ್ತೇಜನಕ್ಕೆ ಚೀನಾ ಮತ್ತು ಭಾರತ ಒಪ್ಪಂದ ಮಾಡಿಕೊಂಡದ್ದು ನೇಪಾಳದ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಇದಕ್ಕೆ ಪ್ರತಿಭಟನೆಯನ್ನೂ ನೇಪಾಳ ವ್ಯಕ್ತಪಡಿಸಿತ್ತು.

ಉಲ್ಬಣಿಸಿದ ಬಿಕ್ಕಟ್ಟು: 2019ರ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪುನಾರಚನೆ ಬಳಿಕ ಭಾರತ ಹೊಸ ನಕಾಶೆಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಕಾಲಾಪಾನಿ ಸೇರಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೇಪಾಳ ಗಡಿ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆಸುವ ಸಲಹೆ ನೀಡಿತು. ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಆದಷ್ಟು ಬೇಗನೆ ಮಾತುಕತೆ ನಡೆಸಬೇಕು ಎಂದು ಭಾರತವನ್ನು ಕೋರಿತು. ಆದರೆ, ನೇಪಾಳದ ವಾದವನ್ನು ಭಾರತವು ಪುರಸ್ಕರಿಸಿಲ್ಲ. ಬದಲಿಗೆ, ‘ಹೊಸ ನಕ್ಷೆಯು ಭಾರತದ ಸಾರ್ವಭೌಮ ಪ್ರದೇಶವನ್ನು ನಿಖರವಾಗಿ ಗುರುತಿಸಿದೆ’ ಎಂದು ಹೇಳಿತು.

ಇದನ್ನೂ ಓದಿ:ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಪುಲೇಖ್ ಪಾಸ್‌ನಲ್ಲಿ ಭಾರತ ನಿರ್ಮಿಸಿರುವ 80 ಕಿಲೋಮೀಟರ್ ಉದ್ದದ ರಸ್ತೆಯನ್ನು ಉದ್ಘಾಟಿಸಿದರು. ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಈ ರಸ್ತೆಯನ್ನು ನಿರ್ಮಿಸಿದೆ. ಈ ಬೆಳವಣಿಗೆಗಳಿಗೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತು. ತನ್ನ ಭೂಪ್ರದೇಶದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ಆರೋಪಿಸಿತು. ಬಳಿಕ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿದ ನೇಪಾಳ, ವಿವಾದಿತ ಪ್ರದೇಶಗಳನ್ನು ಅದರಲ್ಲಿ ಸೇರಿಸಿತು. ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಮಾಡಿದೆ. ಇದಕ್ಕೆ ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ಬೆಂಬಲವನ್ನು ಪಡೆದುಕೊಂಡಿದೆ.

ಚೀನಾ ಕುಮ್ಮಕ್ಕು ಕಾರಣವೇ?: ನೇಪಾಳದಲ್ಲಿ 2017ರಲ್ಲಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ‘ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ’ ಅಧಿಕಾರಕ್ಕೇರಿದೆ. ಪ್ರಬಲ ರಾಷ್ಟ್ರೀಯವಾದಿ ಪಕ್ಷ ಎಂದೇ ಗುರುತಿಸಿಕೊಂಡಿರುವ ‘ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ’ ಚೀನಾದ ಕಡೆಗೆ ಸ್ವಲ್ಪ ವಾಲಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಚೀನಾವು ನೇಪಾಳದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತದ ಜತೆಗಿನ ಗಡಿ ವಿವಾದವೂ ಉಲ್ಬಣಗೊಂಡಿದ್ದು, ಇದಕ್ಕೆ ಚೀನಾ ಕುಮ್ಮಕ್ಕು ನೀಡುತ್ತಿದೆ ಎನ್ನಲಾಗಿದೆ. ಭಾರತದ ಜತೆಗಿನ ಗಡಿ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಜನವರಿಯಲ್ಲಿ ನೇಪಾಳದ ಸಿಎನ್‌ಪಿ– ಕ್ರಾಂತಿಕಾರಿ ಮಾವೊವಾದಿ ಪಕ್ಷವು ಭಾರತದ ವಿರುದ್ಧ ಪ್ರತಿಭಟನೆಯನ್ನೂ ಆರಂಭಿಸಿತ್ತು ಎಂಬುದು ಗಮನಾರ್ಹ.

ಇದನ್ನೂ ಓದಿ:ಚೀನಾ, ಇಟಲಿಗಿಂತ ಭಾರತದ ವೈರಸ್ ಅಪಾಯಕಾರಿ: ನೇಪಾಳ ಪ್ರಧಾನಿ ಕೆ.ಪಿ. ಓಲಿ

ಇತ್ತೀಚಿನ ದಿನಗಳಲ್ಲಿ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಭಾರತದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶಭರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚೀನಾ, ಇಟಲಿಗಿಂತ ಭಾರತದ ವೈರಸ್ ಅಪಾಯಕಾರಿ ಎಂದು ಇತ್ತೀಚೆಗೆ ಸಂಸತ್‌ನಲ್ಲಿ ಹೇಳಿದ್ದ ಅವರು, ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಖ್ ಪಾಸ್’ ಪ್ರದೇಶಗಳನ್ನು ಮರಳಿ ಪಡೆದೇ ತೀರುತ್ತೇವೆ ಎಂದೂ ಹೇಳಿದ್ದರು.

ನರವಾಣೆಯೂ ಮಾಡಿದ್ರು ಆರೋಪ: ಗಡಿಗೆ ಸಂಬಂಧಿಸಿದ ನೇಪಾಳದ ಚಟುವಟಿಕೆಗಳಲ್ಲಿ ಚೀನಾ ಕುಮ್ಮಕ್ಕಿರುವ ಬಗ್ಗೆ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಸಹ ಪರೋಕ್ಷವಾಗಿ ಆರೋಪ ಮಾಡಿದ್ದರು. ನೇಪಾಳವು ಯಾರದೋ ಆಜ್ಞೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದರು.

ವಿವಾದದ ಮುಖ್ಯಾಂಶಗಳು

* ಟಿಬೆಟ್‌ನಲ್ಲಿರುವ ಕೈಲಾಸ–ಮಾನಸ ಸರೋವರ ಯಾತ್ರೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಪುಲೇಖ್ ಪಾಸ್‌ಗೆ ಸಂಬಂಧಿಸಿದ ವಿವಾದ ಇದಾಗಿದೆ

* ಲಿಪುಲೇಖ್ ಪಾಸ್‌ನ ಮೂರ್ವ ದಿಕ್ಕಿಗೆ ಕಾಲಾಪಾನಿ ಇದೆ. ಉತ್ತರಕ್ಕೆ ಟಿಬೆಟ್ ಇದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಭಾರತವಿದೆ

* ಇದು ಭಾರತದ ಗಡಿಯಲ್ಲಿದೆ. ಭಾರತದ ಪ್ರತಿಪಾದನೆಯನ್ನು ಚೀನಾ ಸಹ ಒಪ್ಪಿದೆ. ಹೀಗಾಗಿ ಈ ಪಾಸ್‌ನ ಮೂಲಕ ಭಾರತೀಯರು ಟಿಬೆಟ್ ಪ್ರವೇಶಿಸಲು ಅವಕಾಶ ನೀಡಿದೆ

* ಉತ್ತರಾಖಂಡದ ಧಾರಾಚುಲಾದಿಂದ ಲಿಪುಲೇಖ್ ಪಾಸ್‌ಗೆ ಈವರೆಗೆ ಕಾಲ್ನಡಿಗೆ ಹಾದಿ ಮಾತ್ರ ಇತ್ತು. ಕೇಂದ್ರ ಸರ್ಕಾರ ಇಲ್ಲಿ ರಸ್ತೆ ನಿರ್ಮಿಸಿದೆ. ಈಚೆಗಷ್ಟೇ ಈ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು.

* ಈ ರಸ್ತೆಯ ಉದ್ಘಾಟನೆಯ ನಂತರ ಲಿಪುಲೇಖ್ ಪಾಸ್‌ನ ದಕ್ಷಿಣ ಭಾಗವೂ ನಮ್ಮದು ಎಂದು ನೇಪಾಳ ಪ್ರತಿಪಾದಿಸಿತ್ತು. ಆನಂತರ ನೇಪಾಳದ ನೂತನ ನಕ್ಷೆಯನ್ನು ರೂಪಿಸಲು ಮುಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.