ಬುಧವಾರ, ಡಿಸೆಂಬರ್ 1, 2021
22 °C

ಫ್ಯಾಕ್ಟ್‌ಚೆಕ್ | ಬ್ರಾಹ್ಮಣರೆಂದು ಹೇಳಿಕೊಳ್ಳುವ ಇಂದಿರಾ ಮೀನು ತಿಂದಿದ್ದಾರೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಆಹಾರ ಸೇವಿಸುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಬ್ರಾಹ್ಮಣರೆಂದು ಹೇಳಿಕೊಳ್ಳುವ ಇಂದಿರಾ ಮೀನು ತಿನ್ನುತ್ತಿದ್ದಾರೆ’ ಎಂದು ಈ ಫೋಟೊ ಪೋಸ್ಟ್‌ ಮಾಡಿರುವವರು ಪ್ರತಿಪಾದಿಸಿದ್ದಾರೆ. ಬಹುತೇಕರು ಹಂಚಿಕೊಂಡಿರುವ ಫೋಟೊದಲ್ಲಿ ‘ದತ್ತಾತ್ರೇಯ ಬ್ರಾಹ್ಮಣ ರಾಹುಲ್‌ ಗಾಂಧಿಯ ಅಜ್ಜಿ ಮೀನು ತಿನ್ನುತ್ತಿದ್ದಾರೆ. ನಕಲಿ ಗಾಂಧಿ, ಅಸಲಿ ಮುಸ್ಲಿಂ’ ಎಂಬ ಅಡಿ ಬರಹವಿದೆ. 

ಇದು ತಿರುಚಿರುವ ಫೋಟೊ ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವರದಿ ಮಾಡಿದೆ. ಜೊತೆಗೆ ಮೂಲ ಫೋಟೊವನ್ನೂ ಪೋಸ್ಟ್ ಮಾಡಿದೆ. ಇಂದಿರಾ ತಿನ್ನುತ್ತಿರುವುದು ಮೀನು ಅಲ್ಲ, ಅದು ಮೆಕ್ಕೆಜೋಳ ಎಂದು ಹೇಳಿದೆ. ಈ ಫೋಟೊ ತೆಗೆದಿರುವುದು ಖ್ಯಾತ ಛಾಯಾಚಿತ್ರಗ್ರಾಹಕ ಶ್ರೀಧರ್‌ ನಾಯ್ಡು. ಅವರು ನಿಧನರಾದ ವೇಳೆ, 2017ರ ಸೆ.25ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಈ ಫೋಟೊ ಪ್ರಕಟವಾಗಿತ್ತು. ಮೂಲ ಫೋಟೊದಲ್ಲಿ ಇಂದಿರಾ ತಿನ್ನುತ್ತಿರುವುದು ಮೆಕ್ಕೆಜೋಳ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು