ಗುರುವಾರ , ಮಾರ್ಚ್ 4, 2021
17 °C

ಫ್ಯಾಕ್ಟ್‌ಚೆಕ್: ಬಡಮಕ್ಕಳ ಎದುರು ಪುಷ್ಕಳ ಭೋಜನ ಮಾಡಿದರೇ ಗ್ರೆಟಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲಿನ ಕಿಟಕಿಯ ಹೊರಭಾಗದಲ್ಲಿ ಊಟ ಮಾಡಿ ಎಷ್ಟೋ ದಿನಗಳಾಗಿರುವಂತೆ ಕಾಣುತ್ತಿರುವ ಮಕ್ಕಳು. ರೈಲಿನ ಬೋಗಿಯೊಳಗೆ ಪುಷ್ಕಳ ಭೋಜನ ಮಾಡುತ್ತಿರುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥುನ್‌ಬರ್ಗ್. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಭಾರತದಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಟೂಲ್‌ಕಿಟ್ ಹಂಚಿಕೊಂಡಿದ್ದ ಗ್ರೆಟಾ ಅವರನ್ನು ಸಾಮಾಜಿಕ ಜಾಲತಾಣ ಬಳಕೆದಾರರು ‘ನಕಲಿ ಹೋರಾಟಗಾರ್ತಿ’ ಎಂದು ಛೇಡಿಸುತ್ತಿದ್ದಾರೆ.

ಈ ಚಿತ್ರವನ್ನು ತಿರಚಲಾಗಿದೆ ಎಂಬ ಮಾಹಿತಿಯನ್ನು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಡೆನ್ಮಾರ್ಕ್‌ನಲ್ಲಿ ರೈಲಿನಲ್ಲಿ ಹೋಗುತ್ತಿರುವಾಗ ತೆಗೆದ ಚಿತ್ರವನ್ನು ಸ್ವತಃ ಗ್ರೆಟಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಚಲಿಸುತ್ತಿರುವ ರೈಲಿನ ಕಿಟಿಕಿಯ ಹೊರಗಡೆ ಅರಣ್ಯ ಇರುವ ದೃಶ್ಯವು ಮೂಲ ಚಿತ್ರದಲ್ಲಿದೆ. ಆದರೆ ತಿರುಚಲಾದ ಚಿತ್ರದಲ್ಲಿರುವ ಬಡಮಕ್ಕಳ ದೃಶ್ಯವು ಆಫ್ರಿಕಾಕ್ಕೆ ಸಂಬಂಧಿಸಿದ್ದು. 2007ರಲ್ಲಿ ರಾಯಿಟರ್ಸ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಮಕ್ಕಳ ಚಿತ್ರ ಬಳಕೆಯಾಗಿದೆ ಎಂದು ವೆಬ್‌ಸೈಟ್ ವಿವರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು