ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ‘ಲಾಲ್ಸಿಂಗ್ ಛಡ್ಡಾ’ ಚಿತ್ರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ. ಚಿತ್ರವನ್ನು ಪ್ರದರ್ಶಿಸಬಾರದು ಎಂದು ಆಗ್ರಹಿಸಿ ಸಿಖ್ ತಾಲಮೇಲ್ ಸಂಘಟನೆ ಸದಸ್ಯರು ಪಂಜಾಬ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಸೂಚಿಸುವ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ‘ಭಾರತದಲ್ಲಿ ಇರಲು ಭಯವಾಗುತ್ತಿದೆ ಎಂದಿದ್ದ ಹಿಂದೂ ವಿರೋಧಿ ಅಮೀರ್ ಖಾನ್ ಚಿತ್ರವನ್ನು ನಿಷೇಧಿಸಬೇಕು’ ಎಂದು ಕೆಲವು ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ.

ಚಿತ್ರದ ಮೂಲವನ್ನು ಪರಿಶೀಲನೆ ನಡೆಸಿದ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ವೇದಿಕೆ, ಈ ಪ್ರದರ್ಶನ ನಡೆದಿರುವುದು ಚಿತ್ರದ ಪರವಾಗಿ ಎಂದು ಮಾಹಿತಿ ನೀಡಿದೆ. ಜಲಂಧರ್ನಲ್ಲಿ ನಡೆದಿದ್ದ ಪ್ರದರ್ಶನದ ಬಗ್ಗೆ ಹಲವು ಪತ್ರಿಕೆಗಳು ಆಗಸ್ಟ್ 12ರಂದು ವರದಿ ಮಾಡಿದ್ದವು. ಸಿನಿಮಾ ಪ್ರದರ್ಶನ ವಿರೋಧಿಸಿರುವ ಸ್ಥಳೀಯ ಶಿವಸೇನಾ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿ ಸಂಘಟನೆ ಸದಸ್ಯರು ಪ್ರದರ್ಶನ ನಡೆಸಿದ್ದರು. ಆದರೆ, ಸಿನಿಮಾವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವೆಬ್ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.