ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಕ್ಷ: Whoನಲ್ಲಿ ಅಧ್ಯಕ್ಷ ಹುದ್ದೆ ಇಲ್ಲ

Last Updated 26 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ವೈರಸ್ ಜಗವ್ಯಾಪಿಯಾಗಿರುವ ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಅವರಿಗೆ ಅಭಿನಂದನೆಗಳು’ ಎಂಬ ಪೋಸ್ಟರ್ ಟ್ವಿಟರ್‌ನಲ್ಲಿ ಸಾಕಷ್ಟು ಷೇರ್ ಆಗುತ್ತಿದೆ. ಮೋದಿ ಅವರು ಕೈಮುಗಿದು ಧನ್ಯವಾದ ಹೇಳುತ್ತಿರುವ ಭಂಗಿಯ ಚಿತ್ರಗಳನ್ನು ಪೋಸ್ಟರ್‌ ಗ್ರಾಫಿಕ್ಸ್‌ಗೆ ಬಳಸಿಕೊಳ್ಳಲಾಗಿದೆ. ಸಾವಿರಾರು ಲೈಕ್ ಹಾಗೂ ಕಮೆಂಟ್‌ ಬರುತ್ತಿವೆ.

ವಾಸ್ತವದಲ್ಲಿ, ಡಬ್ಲ್ಯುಎಚ್‌ಒನಲ್ಲಿ ಅಧ್ಯಕ್ಷ ಎಂಬ ಹುದ್ದೆಯೇ ಇಲ್ಲ. ಇಲ್ಲಿನ ಅತ್ಯುನ್ನತ ಹುದ್ದೆ ಮಹಾ ನಿರ್ದೇಶಕ. ಈ ಹುದ್ದೆಯಲ್ಲಿ ಇಥಿಯೋಪಿಯಾದ ಟೆಡ್ರೋಸ್ ಅಧಾನೊಮ್ ಘೆಬ್ರೆಯಸಸ್ ಎಂಬುವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯು ಹೆಲ್ತ್ ಅಸೆಂಬ್ಲಿ ಮತ್ತು ಕಾರ್ಯಕಾರಿ ಮಂಡಳಿ ಎಂಬ ಎರಡು ಆಡಳಿತ ಮಂಡಳಿಗಳನ್ನು ಹೊಂದಿದೆ. ಸಮಿತಿಗಳಿಗೆ ಆರೋಗ್ಯ ಕ್ಷೇತ್ರದ ತಜ್ಞರನ್ನು ನೇಮಿಸಲಾಗುತ್ತದೆ. ಭಾರತದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಕಾರ್ಯಕಾರಿ ಸಮಿತಿ ಮುಖ್ಯಸ್ಥರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಹೆಲ್ತ್ ಅಸೆಂಬ್ಲಿ ರೂಪಿಸಿದ ನಿರ್ಣಯಗಳನ್ನು ಸಮಿತಿ ಕಾರ್ಯಗತಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT