ಗುರುವಾರ , ಏಪ್ರಿಲ್ 2, 2020
19 °C

ಆಹಾರ ಕಲಬೆರಕೆ ತಡೆಗೆ ಏನಾಗಬೇಕಿದೆ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಆರೋಗ್ಯದ ದೃಷ್ಟಿಯಿಂದ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇಂದು ಆಹಾರದ ಕಲಬೆರಕೆಯನ್ನು ನಾವು ತಡೆಯಲೇಬೇಕಾಗಿದೆ. ಅದಕ್ಕೆ ಹಲವು ಕ್ರಮಗಳನ್ನು ತಜ್ಞರು, ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. 

-ಭಾರತ ಬಹು ಆಹಾರ ಸಂಸ್ಕೃತಿಯ ದೇಶ. ಇದರ ಮೂಲ ತಿರುಳು ಪೌಷ್ಟಿಕತೆ. ಸದ್ಯ ದೇಶದ ಆಹಾರ ಸಂಸ್ಕೃತಿಗೆ ಧಕ್ಕೆಯಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿ ಉಳಿಯದೇ ಯಾವ ಕಾನೂನುಗಳೂ ಕಲಬೆರಕೆಯನ್ನು ತಡೆಯಲಾರವು ಎಂಬುದು ತಜ್ಞರ ಮಾತು.

-ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗಬೇಕು. ಕೃಷಿ ಪದ್ಧತಿಯಲ್ಲೂ ಬದಲಾಗಬೇಕು. 
-ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಬಲವರ್ಧನೆಯಾಗಬೇಕು. ಆರೋಗ್ಯ ಇಲಾಖೆ ಅಧೀನದಿಂದ ಬೇಪರ್ಟ್ಟು ಸ್ವತಂತ್ರ ಇಲಾಖೆಯಾಗಬೇಕು. 

-ಕೇಂದ್ರ ಬಜೆಟ್‌ನಲ್ಲಿ ಆಹಾರ ಸುರಕ್ಷತೆಗೆ ₹130 ರಿಂದ ₹150 ಕೋಟಿ ಅನುದಾನ ನೀಡಲಾಗುತ್ತಿದೆ. ಅಮೆರಿಕ ಆಹಾರ ಸುರಕ್ಷತಾ ಕಾರ್ಯಗಳಿಗೆ ₹10 ಸಾವಿರ ಕೋಟಿ ವ್ಯಯಿಸುತ್ತಿದೆ. ಆಹಾರ ಸುರಕ್ಷತೆಯ ವಿಚಾರವನ್ನು ನಮ್ಮ ಸರ್ಕಾರಗಳು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಚ್ಚಿನ ಅನುದಾನ ನೀಡಬೇಕು.

-ಆಹಾರ ಕಲಬೆರಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. 

-ಆಹಾರ ಸುರಕ್ಷತಾಧಿಕಾರಿಗಳನ್ನು ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ನೇಮಿಸುವ, ಅವರಿಗೆ ಆಹಾರ ಸುರಕ್ಷತೆಯ ಕುರಿತು ತರಬೇತಿ ನೀಡಬೇಕು. 

-ಪ್ರಯೋಗಾಲಯಗಳಿಗೆ ಸುಸಜ್ಜಿತ ಸೌಕರ್ಯ, ಸವಲತ್ತು, ಯಂತ್ರೋಪಕರಣಗಳನ್ನು ನೀಡಬೇಕು.

-ವಿದೇಶದಲ್ಲಿ ಆಹಾರ ಪದಾರ್ಥಗಳನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾರುಕಟ್ಟೆಗೆ ಬರುವ ಆಹಾರ ಪದಾರ್ಥಗಳಿಗೆ ಮೇಲುಸ್ತುವಾರಿಯೇ ಇಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು