ವಾರಾಂತ್ಯ ಬಂದರೆ ಸಾಕು ಅನೇಕರು ಮನೆಯಲ್ಲಿಯೇ ಮಾಂಸಹಾರ ಮಾಡಿ ಸೇವಿಸಬೇಕೆಂದು ಪ್ಲಾನ್ ಮಾಡುವುದು ಸಹಜ. ಆದರೆ, ಪ್ರತೀ ಬಾರಿ ಒಂದೇ ರೀತಿಯ ಚಿಕನ್ ಖಾದ್ಯ ಮಾಡಿ ಬೇಸರವಾಗಿದ್ದರೆ ನಾವಿಂದು ನಿಮಗಾಗಿ ಸುಲಭವಾಗಿ ಮೊಘಲ್ ಶೈಲಿಯ ಚಿಕನ್ ಕುರ್ಮಾವನ್ನು ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.

ಚಿಕನ್ ಕುರ್ಮಾವು ಚಪಾತಿ, ಅನ್ನ ಅಥವಾ ಘೀ ರೈಸ್ಗೂ ಹೊಂದಾಣಿಕೆಯಾಗುತ್ತದೆ. ಆದ್ದರಿಂದ ಭಾನುವಾರದಂದು ಮನೆಯಲ್ಲಿ ಈ ವಿಶೇಷ ಚಿಕನ್ ಕುರ್ಮಾವನ್ನು ಮಾಡಿ ಸವಿಯಬಹುದು.
.ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ.
ಚಿಕನ್ ಕುರ್ಮಾ ಮಾಡಲು ಬೇಕಾಗುವ ಸಾಮಗ್ರಿಗಳು:

ಚಿಕನ್

ಈರುಳ್ಳಿ

ಟೊಮೆಟೊ

ಮೊಸರು

ಖಾರದ ಪುಡಿ

ತೆಂಗಿನ ತುರಿ

ಶುಂಠಿ ಬೆಳ್ಳುಳ್ಳಿ ಪೇಸ್ಟ್

ಕೊತ್ತಂಬರಿ ಸೊಪ್ಪು

ಎಣ್ಣೆ

ಜೀರಿಗೆ ಪುಡಿ

ಗರಂ ಮಸಾಲಾ

ಅರಿಶಿಣ ಪುಡಿ

ಹಸಿ ಮೆಣಸು

ಉಪ್ಪು

.ರೆಸಿಪಿ | ಟೀ, ಕಾಫಿ ಜೊತೆ ಕರುಂ ಕುರುಂ ಕೋಡುಬಳೆ: ಮನೆಯಲ್ಲಿ ಹೀಗೆ ಮಾಡಿಕೊಳ್ಳಿ.
ಚಿಕನ್ ಕುರ್ಮಾ ತಯಾರಿಸುವ ವಿಧಾನ:

ಮೊದಲು ಚಿಕನ್ ಅನ್ನು ಸ್ವಚ್ಛವಾಗಿ ತೊಳೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಬಳಿಕ ಚಿಕನ್ ತುಂಡುಗಳಿಗೆ ಉಪ್ಪು, ಅರಿಶಿಣ, ಮೊಸರು ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಜೊತೆ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ನೆನೆಯಲು ಬಿಡಿ.

ಬಳಿಕ ಬಾಣಲಿಯನ್ನು ಒಲೆ ಮೇಲೆ ಇಟ್ಟು 5 ಚಮಚ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಬೇಯಿಸಿಕೊಳ್ಳಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವು ಹಾಗೂ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೊವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.

ಬಳಿಕ ತೆಂಗಿನ ತುರಿ ಸೇರಿಸಿ. ನಂತರ ನೆನೆಯಲು ಮಿಶ್ರಣ ಮಾಡಿಟ್ಟುಕೊಂಡಿದ್ದ ಚಿಕನ್ ಅನ್ನು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಗರಂ ಮಸಾಲ, ಖಾರದಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ. ಅಗತ್ಯವಿದ್ದರೆ ಒಂದು ಲೋಟ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಒಂದು ಹಿಡಿ ಕೊತ್ತಂಬರಿ ಸೊಪ್ಪು ಹಾಕಿ. ಈಗ ಬಿಸಿ ಬಿಸಿ ಚಿಕನ್ ಕುರ್ಮಾ ಸವಿಯಲು ಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.