ಒಂದೇ ರೀತಿಯ ಪಲಾವ್ ತಿಂದು ಬೋರು ಆಗಿದ್ದರೆ, ಮಶ್ರೂಮ್ ಬಿರಿಯಾನಿ ಒಂದು ಬಾರಿ ಪ್ರಯತ್ನಿಸಿ. ಸುಲಭವಾಗಿ ಬಹುಬೇಗನೆ ಮಶ್ರೂಮ್ ಬಿರಿಯಾನಿ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮಶ್ರೂಮ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು

ಮಶ್ರೂಮ್ –1/2 ಕಪ್

ಪುದೀನಾ ಸೊಪ್ಪು– ಅರ್ಧ ಕಪ್

ಕೊತ್ತಂಬರಿ ಸೊಪ್ಪು – ಅರ್ಧ ಕಪ್

ಹಸಿರು ಮೆಣಸಿನಕಾಯಿ– 5/6

ಶುಂಠಿ ಬೆಳ್ಳುಳ್ಳಿ ಪೇಸ್ಟ್– 1ಚಮಚ

ಗರಂ ಮಸಾಲಾ–(ಚಕ್ಕೆ, ಲವಂಗ, ಪಲಾವ್ ಸೊಪ್ಪು)

ಅರಿಶಿಣ ಅರ್ಧ ಚಮಚ

ನಿಂಬೆ ರಸ– ಅರ್ಧ ಚಮಚ

ಅಡುಗೆ ಎಣ್ಣೆ– ಅಗತ್ಯಕ್ಕೆ ತಕ್ಕಷ್ಟು

ಈರುಳ್ಳಿ–1/2

ಟೊಮೊಟೊ 1/2

ಅಕ್ಕಿ ಒಂದು ಪಾವ್( ಅಳತೆ ಲೆಕ್ಕದಲ್ಲಿ)

ದನಿಯಾ ಪುಡಿ –ಅರ್ಧ ಚಮಚ

ಉಪ್ಪು– ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ: ಮೊದಲು ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಅರಿಶಿಣ ಪುಡಿ ಹಾಕಿ ಅಣಬೆಯನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳಿ. ನಂತರ ಈರುಳ್ಳಿ, ಟೊಮೊಟೊ, 1–2 ಹಸಿರುಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ

ನಂತರ ಒಂದು ಮಿಕ್ಸಿ ಜಾರಿಗೆ, ತೊಳೆದು ಸ್ವಚ್ಛಗೊಳಿಸಿಕೊಂಡ ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿಯನ್ನು ಸೇರಿಸಿ ರುಬ್ಬಿಕೊಳ್ಳಿ.

ನಂತರ ಒಂದು ಬಾಣಲೆಗೆ 2/3 ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಟೊಮೊಟೊ, ಹಸಿರುಮೆಣಸಿನಕಾಯಿ, ಹಾಗೂ ಚಕ್ಕೆ, ಲವಂಗ, ಪಲಾವ್ ಎಲೆ, ಹಾಗೂ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ಚಚ್ಛಗೊಳಿಸಿಕೊಂಡ ಅಣೆಬೆಯನ್ನು ಹಾಗೂ ರುಬ್ಬಿಕೊಂಡ ಮಸಾಲೆ ಹಾಗೂ ಅಗತ್ಯಕ್ಕೆ ತಕ್ಕಷ್ಟುಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಅಕ್ಕಿಯನ್ನು ತೊಳೆದು ಹಾಕಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ನೀರು (2–3) ಲೋಟ ಹಾಕಿ ಬೇಯಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.