ಜಾಗತಿಕ ಆಹಾರಗಳ ಕುರಿತು ಮಾಹಿತಿ ನೀಡುವ ಆನ್ಲೈನ್ ವಿಶ್ವಕೋಶವಾದ ಟೇಸ್ಟ್ ಅಟ್ಲಾಸ್ 2025–2026ನೇ ಸಾಲಿನಲ್ಲಿ ವಿಶ್ವದ ಅತ್ಯುತ್ತಮ ಆಹಾರಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 100 ತಿಂಡಿಗಳು ಸ್ಥಾನ ಪಡೆದುಕೊಂಡಿದ್ದು, ಭಾರತದ ಎರಡು ಪ್ರಮುಖ ತಿನಿಸುಗಳು ಸ್ಥಾನ ಪಡೆದುಕೊಂಡಿವೆ. ಕುಲ್ಫಿ ಮತ್ತು ಫಿರ್ನಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ತಿಂಡಿಗಳಾಗಿವೆ.

ಕುಲ್ಫಿ:

ಕುಲ್ಫಿ ಈ ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿದೆ. ಕುಲ್ಫಿ ಎಂದಾಕ್ಷಣ ಎಲ್ಲರಿಗೂ ಬಾಲ್ಯದ ನೆನಪಾಗುತ್ತದೆ. ಬಾಲ್ಯದಲ್ಲಿದ್ದಾಗ ಕುಲ್ಫಿ ಮಾರಾಟಗಾರು ಹಳ್ಳಿ ಹಳ್ಳಿಗೆ ಬರುತ್ತಿದ್ದರು. ಬೇಸಿಗೆಯಲ್ಲಿ ಇದರ ಮಾರಾಟ ಹೆಚ್ಚು. ಎಲ್ಲಾ ವಯಸ್ಸಿನವರೂ ಇಷ್ಟಪಟ್ಟು ಕುಲ್ಪಿ ಸವಿಯುತ್ತಾರೆ.

ಇದರ ಮೂಲ ದೆಹಲಿಯಾಗಿದ್ದು, ಕೆನೆಭರಿತ ಹಾಲಿನಿಂದ ತಯಾರಿಸಲಾಗುತ್ತದೆ. ಐಸ್ ಕ್ರೀಮ್ಗೆ ಹೋಲಿಸಿದರೆ ಕುಲ್ಫಿ ಹೆಚ್ಚು ಗಟ್ಟಿಯಾಗಿರುತ್ತದೆ. ಆದ್ದರಿಂದ ನಿಧಾನವಾಗಿ ಕರಗುತ್ತದೆ. ಕೆನೆಭರಿತ ಹಾಲಿನಲ್ಲಿ ತಯಾರಿಸಲಾದ ಕುಲ್ಪಿ ಹಲವಾರು ಪ್ಲೇವರ್ಗಳಲ್ಲಿ ಲಭ್ಯವಿದೆ. ಸಮೃದ್ಧವಾಗಿರುತ್ತದೆ. ಪಿಸ್ತಾ, ಮಾವು, ಏಲಕ್ಕಿ, ಗುಲಾಬಿ, ಚಾಕೊಲೇಟ್ನಂತಹ ವಿವಿಧ ರುಚಿಗಳಿಗೆ ಹೆಸರುವಾಸಿಯಾಗಿದೆ.

ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಸಕ್ಕರೆ, ಕೇಸರಿ ಹಾಗೂ ಏಲಕ್ಕಿ ಸೇರಿಸಲಾಗುತ್ತದೆ. ನಂತರ ಬಾದಾಮಿ ಸೇರಿದಂತೆ ವಿವಿಧ ಒಣ ಹಣ್ಣುಗಳನ್ನು ಸೇರಿಸಿ ಫ್ರೀಜ್ ಮಾಡುವ ಮೂಲಕ ಕುಲ್ಪಿಯನ್ನು ತಯಾರಿಸಲಾಗುತ್ತದೆ.

ಫಿರ್ನಿ

ವಿಶ್ವದ ಅತ್ತುತ್ತಮ ತಿಂಡಿಗಳ ಪೈಕಿ ಫಿರ್ನಿ 60ನೇ ಸ್ಥಾನ ಪಡೆದಿದೆ. ನೆನೆಸಿದ ಅಕ್ಕಿಯನ್ನು ಒರಟಾಗಿ ರುಬ್ಬಿ, ಹಾಲು, ಸಕ್ಕರೆ, ಏಲಕ್ಕಿ ಹಾಗೂ ಕೇಸರಿ ಸೇರಿಸಿ ಚೆನ್ನಾಗಿ ಬೇಯಿಸಿ, ಗಂಟಾಗದಂತೆ ನಿಧಾನವಾಗಿ ಕದಡುತ್ತಾ, ಬಳಿಕ ಒಣ ಹಣ್ಣುಗಳನ್ನು ಕತ್ತರಿಸಿ ಫಿರ್ನಿ ಮೇಲೆ ಉದುರಿಸಿ ತಯಾರಿಸಲಾಗುತ್ತದೆ.

ಉತ್ತರ ಭಾರತದ ಸಿಹಿ ಖಾದ್ಯವಾದ ಫಿರ್ನಿಯನ್ನು ಮದುವೆ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಇದು ಮೊಘಲ್ ಕಾಲದ ಸಿಹಿ ತಿನಿಸಾಗಿದ್ದು, ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಟರ್ಕಿಯ ಸಿಹಿತಿಂಡಿ ‘ಅಂಟಕ್ಯಾ ಕುನೆಫೆಸಿ’ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.