ಬುಧವಾರ, ಏಪ್ರಿಲ್ 21, 2021
31 °C

ರೆಸಿಪಿ: ಮಸಾಲೆ ಚಿಕನ್ ಸೂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸಾಲೆ ಚಿಕನ್ ಸೂಪ್‌

ಬೇಕಾಗುವ ಸಾಮಗ್ರಿಗಳು: ಬೆಣ್ಣೆ ಅಥವಾ ಆಲಿವ್‌ ಎಣ್ಣೆ – 1 ಟೇಬಲ್ ಚಮಚ, ಈರುಳ್ಳಿ – 1 ಚಿಕ್ಕದು (ಚಿಕ್ಕದಾಗಿ ಹೆಚ್ಚಿದ್ದು), ಬೆಳ್ಳುಳ್ಳಿ – 4 ಎಸಳು (ಜಜ್ಜಿದ್ದು), ಹಸಿಮೆಣಸು – 1 (ತೆಳ್ಳಗೆ ಸೀಳಿಕೊಂಡಿದ್ದು), ಕ್ಯಾರೆಟ್‌ (ಸಿಪ್ಪೆ ತೆಗೆದು ಸೀಳಿಕೊಂಡಿದ್ದು) – 1/2 ಕಪ್‌, ಕೊತ್ತಂಬರಿ ಸೊಪ್ಪು – 1/4 ಕಪ್‌ (ಸಣ್ಣಕ್ಕೆ ಹೆಚ್ಚಿಕೊಂಡಿದ್ದು), ಚಿಕನ್ ಸ್ಟಾಕ್‌ – 1 ಲೀಟರ್‌, ಬೇಯಿಸಿದ ಚಿಕನ್ – 2 ಕಪ್‌, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಸ್ವಲ್ಪ

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯೊಂದಕ್ಕೆ ಆಲಿವ್‌ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕ್ಯಾರೆಟ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ 10 ನಿಮಿಷಗಳ ಕಾಲ ಹುರಿದುಕೊಳ್ಳಿ. ಅದಕ್ಕೆ ಚಿಕನ್ ಸ್ಟಾಕ್ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಅದಕ್ಕೆ ಬೇಯಿಸಿದ ಚಿಕನ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಮತ್ತೆ ಚೆನ್ನಾಗಿ ಕುದಿಸಿ. ಅದನ್ನು ಬಿಸಿಯಿದ್ದಾಗಲೇ ಕಪ್‌ಗೆ ಹಾಕಿ ಅದರ ಮೇಲೆ ಕ್ರೀಮ್ ಹಾಕಿ ನಂತರ ಸೀಳಿಕೊಂಡ ಹಸಿಮೆಣಸು, ಕೊತ್ತಂಬರಿ ಸೊಪ್ಪು ಅಲಂಕರಿಸಿ ಕುಡಿಯಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.