ಸಾಧಕರಿಗೂ ಇತ್ತು ಸಮಸ್ಯೆ!
ಐನ್‌ಸ್ಟೈನ್, ವಾಲ್ಟ್ ಡಿಸ್ನಿ, ಮೈಕೇಲ್ ಫ್ಲೆಪ್ಸ್ – ಇಂತಹ ಹಲವರು ಸಾಧಕರು ಎಡಿಎಚ್‌ಡಿ ಸಮಸ್ಯೆಯಿಂದ ಬಳಲಿದವರೇ. ಆದರೆ ಅವರು ಅದರಿಂದ ಹೊರಬಂದು ಸಾಧನೆ ಮಾಡಿ, ಪ್ರಸಿದ್ಧರಾದರು. ಹೀಗಾಗಿ ಈ ಸಮಸ್ಯೆಯೇ ಒಂದು ದೋಷವಲ್ಲ; ಬದಲಾಗಿ ಇದು ಮಿದುಳು ವಿಭಿನ್ನವಾಗಿ ಕೆಲಸ ಮಾಡುವ ರೀತಿ – ಎಂದು ಸಕಾರಾತ್ಮಕವಾಗಿ ಆಲೋಚಿಸಬೇಕು. ಆ ಮೂಲಕ ಎಡಿಎಚ್‌ಡಿ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ಮುರಿಯಬೇಕು; ಈ ಸಮಸ್ಯೆಯನ್ನು ವಾಸ್ತವದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಸಮಾಜವನ್ನು ನಿರ್ಮಿಸಬೇಕು. ಸಹಾನುಭೂತಿ, ಸರಿಯಾದ ಜ್ಞಾನ ಮತ್ತು ಸಕ್ರಿಯ ಬೆಂಬಲದಿಂದ, ಎಡಿಎಚ್‌ಡಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ಣ ಸಾಮರ್ಥ್ಯದಿಂದ ಎಲ್ಲರಂತೆಯೇ ಸಹಜ ಜೀವನವನ್ನು ನಡೆಸಬಹುದಾಗಿದೆ.