ನವದೆಹಲಿ: ಭಾರತದ ಹೆಣ್ಣುಮಕ್ಕಳ ಋತುಚಕ್ರ ಆರಂಭದ ಮೇಲೆ ಹವಾಮಾನ ಬದಲಾವಣೆ ಗಮನಾರ್ಹ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಆದ್ರತೆ ಇರುವ ಪ್ರದೇಶದಲ್ಲಿರುವ ಹೆಣ್ಣುಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ, ಉಷ್ಣತೆ ಹೆಚ್ಚಿರುವ ಪ್ರದೇಶದಲ್ಲಿನ ಹೆಣ್ಣುಮಕ್ಕಳು ತಡವಾಗಿ ಋತುಮತಿಯರಾಗುತ್ತಾರೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿರುವ ಸಂಶೋಧನಾ ಸಂಸ್ಥೆ ಮತ್ತು ಉತ್ತರ ದಕ್ಷಿಣ ವಿಶ್ವವಿದ್ಯಾಲಯ ಜಂಟಿಯಾಗಿ 1992–93 ಮತ್ತು 2019–21 ಅವಧಿಯ ಅಂಕಿ ಅಂಶಗಳನ್ನು ಅಧ್ಯಯನ ಮಾಡಿದೆ. ಈ ಅಧ್ಯಯನಕ್ಕೆ ಜನಸಂಖ್ಯಾ ಮತ್ತು ಆರೋಗ್ಯ ಸಮೀಕ್ಷೆ ಮೂಲಕ ಅಂಕಿಅಂಶ ಕಲೆ ಹಾಕಲಾಗಿದ್ದು, ನಾಸಾದ ಹವಾಮಾನ ಬದಲಾವಣೆಯ ಅಂಕಿ ಅಂಶಗಳನ್ನೂ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
.ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು.
1992 ರಿಂದ 23,000 ಕ್ಕೂ ಹೆಚ್ಚು ಮತ್ತು 2019 ರಿಂದ 45,300 ಪ್ರತಿಕ್ರಿಯೆಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಈ ವಿಶ್ಲೇಷಣೆಯ ಫಲಿತಾಂಶವನ್ನು ಪಿಎಲ್ಒಎಸ್ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟಿಸಲಾಗಿದ್ದು, ಭಾರತದಲ್ಲಿನ ಬಹುತೇಕ ರಾಜ್ಯಗಳಲ್ಲಿ ಹೆಣ್ಣುಮಕ್ಕಳು ಅತಿ ಸಣ್ಣವಯಸ್ಸಿನಲ್ಲೇ ಋತುಮತಿಯರಾಗುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಹುಡುಗಿಯರಲ್ಲಿ ಋತುಚಕ್ರ ವಿಳಂಬವಾಗುತ್ತಿರುವುದು ಕಂಡುಬಂದಿದೆ.
.ಮುಟ್ಟು ಮುಟ್ಟೆಂದೇಕೆ..?.
‘ಈ ಅಧ್ಯಯನವು 1992 ರಿಂದ 2019 ರವರೆಗಿನ ಕಾಲು ಶತಮಾನದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಋತುಚಕ್ರದ ವಯಸ್ಸಿನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪರಿಶೀಲಿಸಲಾಗಿದೆ. ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಅಂಶಗಳು ಋತುಚಕ್ರದ ಸಮಯವನ್ನು ಹೇಗೆ ರೂಪಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಅಧ್ಯಯನ ಹೊಂದಿದೆ’ ಎಂದು ಲೇಖಕರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಹೆಣ್ಣುಮಕ್ಕಳಲ್ಲಿ ಋತುಮತಿಯಾಗುವ ವಯಸ್ಸು ಬದಲಾಗುತ್ತಿದೆ. ಅದರಲ್ಲೂ 20ನೇ ಶತಮಾನದ ಎರಡನೇ ಭಾಗದಲ್ಲಿ ಸಣ್ಣ ವಯಸ್ಸಿನಲ್ಲಿ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.
.ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?.
ಈ ಹಿಂದಿನ ಅಧ್ಯಯನಗಳಲ್ಲಿ ಹವಾಮಾನ ಬದಲಾವಣೆಗಳಿಂದ ಅಂದರೆ, ವಾಯು ಮಾಲಿನ್ಯ, ಬಿಎಂಐನಂತಹ ಸ್ಥೂಲಕಾಯತೆ ಸಮಸ್ಯೆಗಳಿಂದಾಗಿ ಋತುಮತಿಯಾಗುವ ವಯಸ್ಸಿನಲ್ಲಿ ಬದಲಾವಣೆಯಾಗುತ್ತದೆ ಎನ್ನಲಾಗಿತ್ತು.

ಈಗ ನಡೆಸಿದ ಅಧ್ಯಯನದಲ್ಲಿ ವಾತಾವರಣದಲ್ಲಿ ಹೆಚ್ಚುತ್ತಿರುವ ಆರ್ದ್ರತೆಯು ಆರೋಗ್ಯ ಪರಿಸ್ಥಿತಿಗಳನ್ನು ಬದಲಾಯಿಸುವ ಮೂಲಕ ಮುಟ್ಟಿನ ವಯಸ್ಸನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿರುವುದಾಗಿ ಲೇಖಕರು ಹೇಳಿದ್ದಾರೆ.
.ಅನಿಯಮಿತ ಋತುಚಕ್ರ ವೈವಿಧ್ಯ.
ಮಹಾರಾಷ್ಟ್ರದಲ್ಲಿ ಹೆಣ್ಣುಮಕ್ಕಳು ಉಷ್ಣತೆಗೆ ಹೆಚ್ಚು ತೆರೆದುಕೊಳ್ಳುತ್ತಾರೆ, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಹಾರ್ಮೋನುಗಳ ಮೇಲೆ ಪರಿಣಾಮ ಬೀರಲಿದ್ದು, ಋತುಮತಿಯಾಗುವುದು ವಿಳಂಬವಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಅದಾಗ್ಯೂ ಹವಾಮಾನ ಬದಲಾವಣೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ನಿರಂತರ ಮೇಲ್ವಿಚಾರಣೆ ಅಗತ್ಯ. ಪರಿಸರ ಬದಲಾವಣೆಗಳು ಋತುಚಕ್ರದ ಸಮಯದ ಮೇಲೆ ಬೀರುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಗ್ಗಿಸಲು ಇದು ಅತ್ಯಗತ್ಯ ಎಂದಿದ್ದಾರೆ.
.ಋತುಚಕ್ರ ಬೇಡ ಮೌಢ್ಯ.ಸ್ಪಂದನ ಅಂಕಣ: ಮುಟ್ಟು ಮುಂದೂಡುವುದು ಅಪಾಯವೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.