ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೆಡಿಟರೇನಿಯನ್ ಡಯಟ್’ ಅನುಸರಿಸುವ ಮಹಿಳೆಯರಿಗೆ ಸಿಹಿ ಸುದ್ದಿ ಇದು

ಮೆಡಿಟರೇನಿಯನ್ ಡಯಟ್ ಅನುಸರಿಸುವ ಮಹಿಳೆಯರ ಕುರಿತು ‘ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಶಿಯೇಷನ್’ (JAMA) ಪ್ರಕಟಿಸಿರುವ ಅಧ್ಯಯನ
Published 3 ಜೂನ್ 2024, 14:47 IST
Last Updated 3 ಜೂನ್ 2024, 14:47 IST
ಅಕ್ಷರ ಗಾತ್ರ

ನವದೆಹಲಿ: ‘ಮೆಡಿಟರೇನಿಯನ್ ಡಯಟ್’ ಅನುಸರಿಸುವ ಮಹಿಳೆಯರಲ್ಲಿ ಅಕಾಲಿಕವಾಗಿ ಸಾಯುವ ಪ್ರಮಾಣ ಶೇ 23 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ.

‘ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಶಿಯೇಷನ್’ (JAMA) ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಈ ವಿಷಯ ತಿಳಿದು ಬಂದಿದೆ.

ವಿಶೇಷವೆಂದರೆ ಈ ಅಧ್ಯಯನವು 25 ವರ್ಷಗಳಿಂದ 25 ಸಾವಿರ ಮಹಿಳೆಯರನ್ನು ಅಭ್ಯಸಿಸಿ ವರದಿ ಸಿದ್ದಪಡಿಸಿದೆ.

ಡಯಟ್‌ನಲ್ಲಿ ನಿಯಮಿತವಾಗಿ ಸೊಪ್ಪು, ತರಕಾರಿ, ಹಣ್ಣು, ಒಣ ಹಣ್ಣು, ಧಾನ್ಯಗಳು, ಮೊಟ್ಟೆ, ಹಾಗೂ ವಿರಳವಾಗಿ ಮೀನು, ಚಿಕನ್ ಮತ್ತು ತುಂಬಾ ವಿರಳವಾಗಿ ತಕ್ಕಮಟ್ಟಿಗೆ ಮಾತ್ರ ಸಿಹಿ ಪದಾರ್ಥವನ್ನು ಹೊಂದುವುದನ್ನು ಮೆಡಿಟರೇನಿಯನ್ ಡಯಟ್ ಎಂದು ಕರೆಯಲಾಗುತ್ತದೆ.

ನಮ್ಮ ಅಧ್ಯಯನವು ಸಾರ್ವಜನಿಕ ಆರೋಗ್ಯದ ಒಳನೋಟದ ಮೇಲೆ ಗಮನಾರ್ಹವಾದ ಬೆಳಕು ಚೆಲ್ಲುತ್ತದೆ. ಮೆಡಿಟರೇನಿಯನ್ ಡಯಟ್ ಅನುಸರಿಸುವ ಮೂಲಕ ಚಯಾಪಚಯ ಅಸ್ವಸ್ಥತೆಗಳಾದ (metabolic disorders) ಸ್ಥೂಲಕಾಯ, ಡಯಾಬೀಟಿಸ್, ಕೊಲೆಸ್ಟ್ರಾಲ್‌, ಇನ್ಸುಲಿನ್ ಪ್ರತಿರೋಧತೆಯನ್ನು ಹೊಡೆದು ಹಾಕಬಹುದು ಎಂಬುದನ್ನು ನಿಖರವಾಗಿ ಕಂಡುಕೊಳ್ಳಲಾಗಿದೆ ಎಂದು ಅಮೆರಿಕದ ಬಿಗ್‌ಹ್ಯಾಮ್ ಮಹಿಳಾ ಆಸ್ಪತ್ರೆಯ ಹಿರಿಯ ವೈಧ್ಯ ಶಫ್ತಕ್ ಅಹ್ಮದ್ ತಿಳಿಸಿದ್ದಾರೆ.

ಈ ಪದ್ಧತಿ ಅನುಸರಿಸುವುದರಿಂದ ಮಹಿಳೆಯರಲ್ಲಿ ಕ್ಯಾನ್ಸರ್ ಬರುವುದನ್ನೂ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.

45 ವರ್ಷ ವಯಸ್ಸಿನೊಳಗಿನ 25,315 ಅಮೆರಿಕದ ಶಿಕ್ಷಿತ ಮಹಿಳೆಯರನ್ನು 25 ವರ್ಷ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದಕ್ಕಾಗಿ ಎಲ್ಲರಿಗೂ ಆರೋಗ್ಯದ ಎಸ್‌ಒಪಿಯನ್ನು ನಿರಂತರವಾಗಿ ಪಾಲಿಸಲಾಗಿತ್ತು. ಮೆಡಿಟರೇನಿಯನ್ ಡಯಟ್ ಅನುಸರಿಸುತ್ತಿದ್ದ ಈ ಮಹಿಳೆಯರಲ್ಲಿ ಅಕಾಲಿಕವಾಗಿ ಸಾಯುವ ಪ್ರಮಾಣ ಶೇ 23 ರಷ್ಟು ಕಡಿಮೆಯಾಗಿದೆ ಎಂದು ಶಫ್ತಕ್ ಅಹ್ಮದ್ ವರದಿಯಲ್ಲಿ ತಿಳಿಸಿದ್ದಾರೆ.

ಮೆಡಿಟರೇನಿಯನ್ ಆಹಾರದ ಆರೋಗ್ಯ ಪ್ರಯೋಜನಗಳನ್ನು ವೈದ್ಯಕೀಯ ವೃತ್ತಿಪರರು ಗುರುತಿಸಿದ್ದಾರೆ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT