ಪ್ರಸ್ತುತ ಜಾಗತಿಕ ಒತ್ತಡವು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಕೆಲಸದ ಒತ್ತಡ, ಕುಟುಂಬದ ಹೊಣೆಗಾರಿಕೆ, ಹಣಕಾಸಿನ ಚಿಂತೆ, ತಂತ್ರಜ್ಞಾನ ಬಳಕೆ ಹಾಗೂ ಸಾಮಾಜಿಕ ಹೋಲಿಕೆ ಇವು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಒತ್ತಡವನ್ನು ಉಂಟುಮಾಡುತ್ತಿವೆ. ಈ ಒತ್ತಡವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು ಎಂದು ಮನಃಶಾಸ್ತ್ರ ಹೇಳುತ್ತದೆ.
.ಆಟಗಾರರು ಮಾನಸಿಕವಾಗಿ ಸಮರ್ಥರಾಗಿರಬೇಕು: ಮನಃಶಾಸ್ತ್ರ ತಜ್ಞೆ ಡಾ.ಚೈತನ್ಯಾ.
ಜಾಗತಿಕ ಒತ್ತಡವನ್ನು ನಿಭಾಯಿಸುವುದು ಹೇಗೆ?

ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ಯಾವ ಸಮಸ್ಯೆಯನ್ನಾದರೂ ಧೈರ್ಯದಿಂದ ಮತ್ತು ಸಕಾರಾತ್ಮಕವಾಗಿ ಎದುರಿಸಿ.

ಸಮಯ ನಿರ್ವಹಣೆ ಮಾಡಿರಿ: ಕೆಲಸ, ವಿಶ್ರಾಂತಿ ಮತ್ತು ಮನರಂಜನೆಗೆ ಸಮನಾಗಿ ಸಮಯ ಹಂಚಿಕೊಳ್ಳಿ. ಇದು ಸಮತೋಲನ ಕಾಪಾಡಲು ಸಹಕಾರಿ.

ಯೋಗ ಮತ್ತು ಧ್ಯಾನ: ಪ್ರತಿದಿನ ಯೋಗ ಅಥವಾ ಧ್ಯಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.

ಪರಸ್ಪರರೊಂದಿಗೆ ವಿಷಯ ಹಂಚಿಕೊಳ್ಳಿ: ಆತಂಕ ಅಥವಾ ಒತ್ತಡವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ.

ಆರೋಗ್ಯಕರ ಆಹಾರ ಮತ್ತು ನಿದ್ರೆ: ಸಮತೋಲನದ ಆಹಾರ ಮತ್ತು ಸಮಯಕ್ಕೆ ಸರಿಯಾದ ನಿದ್ರೆಯಿಂದ ದೇಹ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆಳವಾದ ಉಸಿರಾಟ: ಕೆಲವು ನಿಮಿಷಗಳ ಕಾಲ ನಿಧಾನವಾಗಿ ಉಸಿರಾಡುವುದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವುದು : ದೊಡ್ಡ ಸಮಸ್ಯೆಗಳನ್ನು ಬೇರೆ ಬೇರೆ ಹಂತಗಳಲ್ಲಿ ವಿಭಜಿಸಿ ಪರಿಹರಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಸ್ವಯಂ ಪ್ರೋತ್ಸಾಹ: ನಿಮ್ಮ ಸಾಧನೆಗಳನ್ನು ಮೆಚ್ಚಿಕೊಳ್ಳಿ ಮತ್ತು ಸಕಾರಾತ್ಮಕ ಸ್ವಬಲವನ್ನು ಬೆಳೆಸಿಕೊಳ್ಳಿ.

ತಜ್ಞರ ಸಹಾಯ ಪಡೆಯಿರಿ: ಒತ್ತಡ ಹೆಚ್ಚಾದರೆ ಮನೋವೈದ್ಯ ಅಥವಾ ಸಲಹೆಗಾರರ ಸಹಾಯ ಪಡೆಯುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.