ಶಾರೀರಿಕ ಆರೋಗ್ಯದಂತೆಯೇ, ಮಾನಸಿಕ ಆರೋಗ್ಯವೂ ನಿರಂತರ ಶ್ರದ್ಧೆ ಮತ್ತು ಪೋಷಣೆಯ ಅಗತ್ಯವಿರುವ ವಿಷಯ. ‘ಇದು ತಾನೇ ಸರಿಯಾಗುತ್ತದೆ’ ಎಂದು ಬಿಟ್ಟುಬಿಡುವುದು ಅಪಾಯಕಾರಿ.

ಅವಳು ನಿಟ್ಟುಸಿರು ಬಿಟ್ಟಳು. ಗಾಢವಾದ ಆ ಭಾವನೆ ಮತ್ತೆ ಮುಸುಕಿತು. ಬೆಳಿಗ್ಗೆ ಎದ್ದು, ಮೈಮುರಿದು ಹಾಸಿಗೆಯನ್ನು ತೊರೆದವಳೇ ಚಹಾ ಮಾಡುವಷ್ಟರಲ್ಲಿ ಅವಳ ದೇಹ ಸೋತಂತಾಯಿತು. ಮತ್ತೊಂದು ನಿರಾಸೆಯ ದಿನದ ಆರಂಭ.

‘ಇಂದು ಏನೂ ಮಾಡಲು ಮನಸ್ಸಿಲ್ಲ’ ಎಂದುಕೊಂಡರೂ, ಬೆಲೆಯಿಲ್ಲದ ಜವಾಬ್ದಾರಿಗಳ ಸಾಲು ಅವಳನ್ನು ಕಾಯುತ್ತಿತ್ತು.

ನಿಮಗೂ ಈ ಅನುಭವ ಪರಿಚಿತವೇ?

ಅನೇಕ ಮಹಿಳೆಯರು ಅನುಭವಿಸುವ ಈ ಸ್ಥಿತಿಯು, ಕೇವಲ ಸಾಮಾನ್ಯ ಆಯಾಸವಲ್ಲ. ಇದು ಅವರ ಜೀವನವನ್ನು ಕತ್ತಲೆಯಂತೆ ಆವರಿಸಿಕೊಳ್ಳುವ ನಿರಂತರ ದಣಿವು ಮತ್ತು ಜೀವನದಲ್ಲಿ ಉತ್ಸಾಹದ ಕೊರತೆಯ ಗಂಭೀರ ಸೂಚನೆಯಾಗಿದೆ.

ಉತ್ಸಾಹಹೀನತೆ ಹಲವು ಕಾರಣಗಳಿಂದ ಉಂಟಾಗಬಹುದು. ಹಾರ್ಮೋನ್ಗಳ ಏರುಪೇರು, ನಿದ್ರಾಹೀನತೆ, ನಿರಂತರ ಒತ್ತಡ, ಅಸಮತೋಲಿತ ಆಹಾರ, ಶಾರೀರಿಕ ಚಟುವಟಿಕೆಯ ಕೊರತೆ, ವಿಟಮಿನ್ ‘ಡಿ’ ಕೊರತೆ ಮತ್ತು ಸಾಮಾಜಿಕ ಸಂಪರ್ಕಗಳ ಕೊರತೆ ಪ್ರಮುಖವಾಗಿವೆ. ಸಂಶೋಧನೆಯು ಅನಿದ್ರೆ ಮತ್ತು ಉತ್ಸಾಹಹೀನತೆಯ ನಡುವೆ ಅವಿಭಾಜ್ಯ ಸಂಬಂಧವನ್ನು ಸ್ಪಷ್ಟವಾಗಿ ದೃಢಪಡಿಸಿದೆ - ಒಂದರ ಅಸಮತೋಲನ ಇನ್ನೊಂದರ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಅಧ್ಯಯನದ ಪ್ರಕಾರ, ನಮ್ಮ ದೇಹದಲ್ಲಿನ ನರಸಂವಹನಕಾರಿಗಳಾದ ಸೆರೊಟೊನಿನ್, ಡೋಪಮೈನ್, ಆಕ್ಸಿಟೋಸಿನ್, ಮತ್ತು ಎಂಡಾರ್ಫಿನ್ಗಳು ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತವೆ. ‘ಡಾಕ್ಟರ್, ಯಾವಾಗಲೂ ನಮ್ಮ ಅಶುಭ ವಿಚಾರಗಳನ್ನೇ ಯೋಚಿಸುತ್ತೇನೆ’ ಎಂದು ಶರ್ಮಿಳಾ ಹೇಳಿದಳು.

‘ನಿಮ್ಮ ಆಹಾರ ಕ್ರಮವನ್ನು ತಿಳಿಸಿ’ ಎಂದು ಕೇಳಿದಾಗ, ಅವಳು ಮಧ್ಯಾಹ್ನದ ಊಟವನ್ನು ಸಂಪೂರ್ಣ ಬಿಟ್ಟಿರುವುದು ತಿಳಿಯಿತು.

ಶರ್ಮಿಳಾ, ಮಧ್ಯಾಹ್ನದ ಊಟ ಬಿಟ್ಟಿರುವುದರಿಂದ ರಕ್ತದ ಸಕ್ಕರೆಮಟ್ಟದಲ್ಲಿ ಏರುಪೇರಾಗುತ್ತಿದೆ. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಿ, ನಕಾರಾತ್ಮಕ ಯೋಚನೆಗಳಿಗೆ ಕಾರಣವಾಗುತ್ತಿದೆ. ದಯವಿಟ್ಟು ನಿಯಮಿತವಾಗಿ ಮಧ್ಯಾಹ್ನದ ಊಟ ಮಾಡಿ ಎಂದು ಸಲಹೆ ನೀಡಿದೆ ಆಹಾರ ಮತ್ತು ಮನಸ್ಥಿತಿಯ ನಡುವಿನ ಸಂಬಂಧ ಅತ್ಯಂತ ಶಕ್ತಿಶಾಲಿ ಮತ್ತು ಗಹನವಾದುದು. ಒಮೇಗಾ-3 ಫ್ಯಾಟಿ ಆಮ್ಲಗಳು, ವಿಟಮಿನ್ ಬಿ12, ಮ್ಯಾಗ್ನೀಸಿಯಮ್, ಮತ್ತು ಟ್ರಿಪ್ಟೋಫಾನ್ ಗಳನ್ನು ಹೊಂದಿರುವ ಆಹಾರಗಳು ಮನಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತವೆ.

ಸಮುದ್ರದ ಮೀನು, ಬಾದಾಮಿ, ಅಕ್ಕಿ, ಬಾಳೆಹಣ್ಣು, ಕಾಳುಮೆಣಸು, ಬೀಜಗಳು, ಅಡಿಕೆ, ಮಜ್ಜಿಗೆ, ಹಸಿ ತರಕಾರಿಗಳು, ಡಾರ್ಕ್ ಚಾಕ್ಲೇಟ್, ಮತ್ತು ಶುಂಠಿಯ ಜೊತೆಗೆ, ಅವಕಾಡೊ, ಪಾಲಕ್, ರಾಗಿ, ಜೇನುತುಪ್ಪ, ಗ್ರೀನ್ ಟೀ, ಮತ್ತು ದಾಳಿಂಬೆ ಹಣ್ಣುಗಳು ಸಹ ಮನಸ್ಥಿತಿಯನ್ನು ಹೆಚ್ಚಿಸುವ ಅಮೂಲ್ಯ ಆಹಾರಗಳಾಗಿವೆ. ಈ ಪೌಷ್ಟಿಕಾಂಶ-ಸಮೃದ್ಧ ಆಹಾರಗಳು ಮಿದುಳಿನಲ್ಲಿ ಸೆರೊಟೊನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಯನ್ನು ಉತ್ತೇಜಿಸಿ, ನಮ್ಮ ದೈನಂದಿನ ಜೀವನದಲ್ಲಿ ಸಕಾರಾತ್ಮಕ ಭಾವನೆಗಳನ್ನು ವೃದ್ಧಿಸುತ್ತವೆ. ಕೇವಲ ಆಹಾರವಷ್ಟೇ ಅಲ್ಲ, ಆಯುರ್ವೇದವು ಸೂಚಿಸುವ ದಿನಚರಿಗಳೂ ಉತ್ಸಾಹವನ್ನು ಹೆಚ್ಚಿಸುತ್ತವೆ.

‘ನಾನು ತಿಳಿಬೆಳಗಿನಲ್ಲಿ ಕೊಳದಲ್ಲಿ ತೇಲುವ ತಾವರೆಯಂತೆ ಇರುತ್ತೇನೆ, ಆದರೆ ಸಂಜೆಯಾಗುತ್ತಿದ್ದಂತೆ ಮನಸ್ಸು ಸೋತುಹೋಗುತ್ತದೆ’ ಎನ್ನುವ ವಿಜಯಾಗೆ ಬೆಳಗಿನಲ್ಲಿ ಅಭ್ಯಂಗ (ತೈಲಾಭ್ಯಂಗ), ನಂತರ ಬೆಚ್ಚಗಿನ ನೀರಿನಿಂದ ಸ್ನಾನ, ಸೂರ್ಯನಮಸ್ಕಾರ, ಮತ್ತು ಅನುಲೋಮ-ವಿಲೋಮ ಪ್ರಾಣಾಯಾಮವನ್ನು ಸೂಚಿಸಿದೆ. ಮೂರು ತಿಂಗಳುಗಳಲ್ಲಿ, ಆಕೆಯ ಉತ್ಸಾಹ ಮತ್ತು ಶಕ್ತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂತು. ನಮ್ಮ ದೇಹದ ಇನ್ನೊಂದು ಮುಖ್ಯವಾದ ಭಾಗವೆಂದರೆ ಸೂಕ್ಷ್ಮಜೀವಿಗಳು ತುಂಬಿರುವ ಕರುಳಾಗಿದೆ. ಹಲ್ಲಿನಲ್ಲಿರುವಂತೆಯೇ, ಕರುಳಿನಲ್ಲೂ ಸಹ ಹಲವಾರು ಸಂಪರ್ಕಗಳನ್ನು ಹೊಂದಿರುವ ಜಟಿಲ ನರಮಂಡಲವಿದೆ. ಈ ನರಮಂಡಲವನ್ನು ‘ಎರಡನೇ ಮಿದುಳು’ ಎಂದು ಕರೆಯಲಾಗುತ್ತದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಮನಸ್ಥಿತಿಯನ್ನು ನಿಯಂತ್ರಿಸುವ ನರಸಂವಹನಕಾರಿಗಳನ್ನು ಉತ್ಪಾದಿಸುತ್ತವೆ. ಪ್ರೋಬಯೋಟಿಕ್ ಆಹಾರಗಳಾದ ಮಜ್ಜಿಗೆ, ಗಂಜಿ, ಕಾಂಜಿ, ಮತ್ತು ಇಡ್ಲಿ-ದೋಸೆ ಹಿಟ್ಟಿನಂತಹ ನೈಸರ್ಗಿಕವಾಗಿ ಹುಳಿಮಾಡಿದ ಆಹಾರಗಳು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿವೆ.

ಒತ್ತಡ ಮತ್ತು ಭಾವನಾತ್ಮಕ ಅಡೆತಡೆಗಳನ್ನು ನಿರ್ವಹಿಸುವುದು ಉತ್ಸಾಹವನ್ನು ಉಳಿಸಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ. ‘ಡಾಕ್ಟರ್, ನಾನು ಎಷ್ಟೇ ಪ್ರಯತ್ನಿಸಿದರೂ, ನನ್ನ ಮನಸ್ಸು ಸುಮ್ಮನಿರುವುದಿಲ್ಲ’ ಎಂದು ಹೇಳಿದ ನಿಯತಿಗೆ ನಾನು ಧ್ಯಾನದ ಸರಳ ವಿಧಾನವನ್ನು ಕಲಿಸಿದೆ. ದಿನಕ್ಕೆ ಕೇವಲ ಇಪ್ಪತ್ತು ನಿಮಿಷಗಳ ಧ್ಯಾನವು ಆಕೆಯ ಒತ್ತಡವನ್ನು ಕಡಿಮೆ ಮಾಡಿತು. ನಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನಲ್ಲಿ ಬರುವುದು ಸಹಜ, ಆದರೆ ಯಾವ ವಿಚಾರಗಳಿಗೆ ಗಮನ ನೀಡಬೇಕು ಎಂಬುದರಲ್ಲೇ ನಮ್ಮ ಶಕ್ತಿ ಅಡಗಿದೆ.

‘ಪ್ರತಿದಿನ ರಾತ್ರಿ ಮಲಗುವ ಮುನ್ನ ನನಗೆ ಕೃತಜ್ಞತಾ ಪಟ್ಟಿಯನ್ನು ಬರೆಯಲು ಕಲಿಸಿದ್ದಕ್ಕೆ ಧನ್ಯವಾದಗಳು. ನನ್ನ ಜೀವನದಲ್ಲಿನ ಸಣ್ಣಪುಟ್ಟ ಆಶೀರ್ವಾದಗಳನ್ನು ನೋಡಲು ಅದು ನನಗೆ ಸಹಾಯ ಮಾಡಿದೆ’ ಎಂದು ಅನುಪಮಾ ಹೇಳಿದಳು. ಕೃತಜ್ಞತೆಯು ಸಕಾರಾತ್ಮಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮೂಲಭೂತವಾಗಿ ಮಿದುಳಿನ ರಾಸಾಯನಿಕತೆಯನ್ನು ಬದಲಾಯಿಸುತ್ತದೆ. ಜೀವನದ ನದಿಯಲ್ಲಿ ಕೇವಲ ತೇಲುತ್ತಿರುವುದು ಮತ್ತು ಇತರರನ್ನು ದಡ ಸೇರಿಸುವುದು ಮಾತ್ರ ಸಾಲದು. ನಿಮ್ಮ ಸ್ವಂತ ಪಯಣದಲ್ಲಿ, ಪ್ರವಾಹಗಳನ್ನು ಎದುರಿಸಲು ಮತ್ತು ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಈಜಲು ಧೈರ್ಯ ಬೇಕು. ನದಿಯ ಪ್ರವಾಹವು ಎಷ್ಟೇ ಭೀಕರವಾಗಿದ್ದರೂ, ಅದರ ಪ್ರವಾಹದ ವಿರುದ್ಧ ನಿಲ್ಲುವ ಶಕ್ತಿ ಪ್ರತಿ ಮಹಿಳೆಯಲ್ಲೂ ಅಡಗಿದೆ. ಸಕಾರಾತ್ಮಕ ಬದಲಾವಣೆಯ ಶಕ್ತಿ ನಿಮ್ಮಲ್ಲಿದೆ. ನಿಮ್ಮೊಳಗಿನ ಉತ್ಸಾಹವನ್ನು ಹುಡುಕಿ, ಇಂದಿನಿಂದಲೇ ಕ್ರಿಯಾಶೀಲರಾಗಿ. ಜೀವನದ ಸವಾಲುಗಳನ್ನು ಮೀರಿ ನಿಲ್ಲಿ, ನಿಮ್ಮ ಅಂತರಂಗದ ಜ್ಯೋತಿಯನ್ನು ಬೆಳಗಿಸಿ. ಜ್ಯೋತಿ ಬೆಳಗಿದಾಗ, ಕತ್ತಲು ಕೂಡ ದಾರಿಯಾಗುತ್ತದೆ.

ಒತ್ತಡ ಕಡಿಮೆಯಾಗಲು..

ಹಸಿರು ಔಷಧಿ: ಪ್ರತಿದಿನ 20 ನಿಮಿಷಗಳನ್ನು ಪ್ರಕೃತಿಯಲ್ಲಿ ಕಳೆಯಿರಿ - ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಶೇ 15 ರಷ್ಟು ಕಡಿಮೆಗೊಳಿಸುತ್ತದೆ.

ಸಂಪರ್ಕದ ಶಕ್ತಿ: ನಿಮ್ಮ ಪ್ರೀತಿಪಾತ್ರರಿಗೆ ಫೋನ್ ಮಾಡಲು 5 ನಿಮಿಷಗಳನ್ನು ಮೀಸಲಿಡಿ - ಸಾಮಾಜಿಕ ಸಂಪರ್ಕವು ಆನಂದದ ಹಾರ್ಮೋನ್ಗಳನ್ನು ತಕ್ಷಣ ಬಿಡುಗಡೆ ಮಾಡುತ್ತದೆ.

ನಗೆ ಯೋಗ: ಪ್ರತಿದಿನ ಬೆಳಿಗ್ಗೆ ಕೃತಕವಾಗಿ ನಗಲು ಪ್ರಾರಂಭಿಸಿ - ಇದು ಕೆಲವೇ ನಿಮಿಷಗಳಲ್ಲಿ ನೈಜ ನಗುವಾಗಿ ಪರಿವರ್ತನೆಯಾಗಿ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಉತ್ಸಾಹ ಹೆಚ್ಚಿಸಲು ಕೆಲವು ತಂತ್ರಗಳು

*‘4-7-8 ಉಸಿರಾಟ ತಂತ್ರ’ – ನಾಲ್ಕು ಎಣಿಕೆಗೆ ಉಸಿರೆಳೆದುಕೊಳ್ಳಿ, ಏಳು ಎಣಿಕೆಗೆ ಉಸಿರನ್ನು ಹಿಡಿದುಕೊಳ್ಳಿ, ಮತ್ತು ಎಂಟು ಎಣಿಕೆಗೆ ಉಸಿರನ್ನು ಬಿಡಿ. ಇದು ತಕ್ಷಣ ಒತ್ತಡವನ್ನು ಕಡಿಮೆಗೊಳಿಸುತ್ತದೆ.

*‘20-20-20 ನಿಯಮ’ – ಪ್ರತಿ 20 ನಿಮಿಷಕ್ಕೊಮ್ಮೆ, 20 ಸೆಕೆಂಡುಗಳ ಕಾಲ, 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಿ. ಇದು ಸ್ಕ್ರೀನ್ ಒತ್ತಡವನ್ನು ಕಡಿಮೆಗೊಳಿಸುತ್ತದೆ.

*‘ಬ್ರೈನ್ ಡಂಪ್’ – ಮಲಗುವ ಮುನ್ನ ನಿಮ್ಮ ತಲೆಯಲ್ಲಿರುವ ಎಲ್ಲಾ ವಿಚಾರಗಳನ್ನು ಒಂದು ಹಾಳೆಯ ಮೇಲೆ ಬರೆಯಿರಿ. ಇದು ನಿದ್ರೆಯನ್ನು ಸುಧಾರಿಸುತ್ತದೆ.

*‘ಕ್ಯಾಫೀನ್ ಕಟ್-ಆಫ್’ – ಮಧ್ಯಾಹ್ನ 2 ಗಂಟೆಯ ನಂತರ ಕಾಫಿ, ಚಹಾ ಕುಡಿಯುವುದನ್ನು ತಪ್ಪಿಸಿ. ಇದು ರಾತ್ರಿಯ ನಿದ್ರೆಯನ್ನು ಸುಧಾರಿಸುತ್ತದೆ.

*‘3-3-3 ತಂತ್ರ’ – ನೀವು ಆತಂಕಗೊಂಡಾಗ, ಮೂರು ವಸ್ತುಗಳನ್ನು ನೋಡಿ, ಮೂರು ಶಬ್ದಗಳನ್ನು ಕೇಳಿ, ಮತ್ತು ನಿಮ್ಮ ದೇಹದ ಮೂರು ಭಾಗಗಳನ್ನು ಚಲಿಸಿ. ಇದು ನಿಮ್ಮನ್ನು ತಕ್ಷಣವೇ ವರ್ತಮಾನಕ್ಕೆ ತರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.