ಇನ್ನೇನು ಚಳಿಗಾಲ ಆರಂಭವಾಗಲಿದೆ. ಈ ಅವಧಿಯಲ್ಲಿ ಮುಖದ ತ್ವಚೆಯ ಅಂದ ಕೆಡುವುದು ಸಾಮಾನ್ಯ. ಇದಕ್ಕೆ ಚಳಿಗಾಲ ಮಾತ್ರ ಕಾರಣವಲ್ಲ. ಈ ಕಾಲದಲ್ಲಿನ ನಮ್ಮ ಆಹಾರಕ್ರಮ, ಜೀವನಶೈಲಿಯಂತಹ ಪ್ರಕ್ರಿಯೆಗಳೂ ಚರ್ಮದ ಆರೋಗ್ಯವನ್ನು ಅವಲಂಬಿಸಿವೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ಸೂಚಿಸಿರುವಮಾರ್ಗಗಳನ್ನು ಅನುಸರಿಸುವುದು ಅಗತ್ಯ. ಈ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಮುಖವನ್ನು ಸ್ವಚ್ಛ ಮಾಡಿಕೊಳ್ಳಿ

ಚಳಿಗಾಲದಲ್ಲಿ ಮುಖದ ಚರ್ಮ ಒಣಗಿ ಸೀಳುತ್ತದೆ. ಆ ಕಾರಣದಿಂದ ನಮ್ಮ ಸೌಂದರ್ಯವು ಕೆಡುತ್ತದೆ. ಈ ಸಮಯದಲ್ಲಿ ಮುಖದ ಮೇಲಿನ ಎಣ್ಣೆ ಅಂಶ, ಕೊಳೆಯನ್ನು ಆಗಾಗ್ಗೆ ಸ್ವಚ್ಛ ಮಾಡುತ್ತಿರಬೇಕು. ಮಾಯಿಶ್ವರೈಸರ್ ಅಂಶ ಇರುವ ಸೋಪ್ ಬಳಸಬೇಕು. ಚರ್ಮಕ್ಕೆ ಹಾನಿ ಮಾಡುವ ಸ್ಕ್ರಬ್ ಬಳಸಬಾರದು. ಇದರಿಂದ ತ್ವಚೆಯುಇನ್ನಷ್ಟು ಕೆಡಬಹುದು. ಎಣ್ಣೆಯಂಶವನ್ನು ಹೋಗಲಾಡಿಸಲು ಸೌಮ್ಯವಾದ ಕ್ಲೆನ್ಸರ್ ಬಳಕೆ ಉತ್ತಮ.

ಎಕ್ಸ್‌ಫೋಲಿಯೇಷನ್

ಅಂದದ, ಹೊಳೆಯುವ ತ್ವಚೆ ನಿಮ್ಮದಾಗಬೇಕು ಎಂದರೆ ಎಕ್ಸ್‌ಫೋಲಿಯೇಷನ್ ಅಗತ್ಯವಾಗಿದೆ. ಚರ್ಮ ಒಣಗಿದಂತೆ, ಶುಷ್ಕವಾಗಿ ಕಾಣಿಸಲು ಹೊರ ಪದರಗಳ ಮೇಲೆ ಸತ್ತ ಜೀವಕೋಶಗಳ ಶೇಖರಣೆಯಾಗುವುದು ಮುಖ್ಯ ಕಾರಣವಾಗಿದೆ. ಎಕ್ಸ್‌ಫೋಲಿಯೇಷನ್‌ನಿಂದ ಚರ್ಮದ ಮೇಲಿನ ಸತ್ತ ಪದರಗಳನ್ನು(ಡೆಡ್ ಲೇಯರ್) ತೊಡೆದು ಹಾಕಬಹುದು. ಅಲ್ಲದೇ ಇದರಿಂದ ಚರ್ಮವು ನಯವಾಗಿ ಆರೋಗ್ಯ ಪೂರ್ಣವಾಗಿರುತ್ತದೆ. ವಾರದಲ್ಲಿ ಎರಡು ಬಾರಿ ಎಕ್ಸ್‌ಫೋಲಿಯೇಷನ್ ಮಾಡಬೇಕು.

ಬಿಸಿಲಲ್ಲಿ ಓಡಾಟ ಬೇಡ

ಚಳಿಗಾಲದಲ್ಲಿ ಹಗಲು ಹೊತ್ತು ಕೆಲವೊಮ್ಮೆ ತೀಕ್ಷ್ಣ ಬಿಸಿಲು ಹೆಚ್ಚಿರುತ್ತದೆ. ಆದರೆ ಚಳಿ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಉರಿಬಿಸಿಲಿನಲ್ಲಿ ಹೊರಗಡೆ ಓಡಾಡಬಾರದು. ಅದರಲ್ಲೂ 11 ಗಂಟೆಯಿಂದ 3 ಗಂಟೆವರೆಗೆ ಬಿಸಿಲಿನ ತಾಪ ಹೆಚ್ಚಿರುವ ಕಾರಣಕ್ಕೆ ಹೊರಗಡೆ ಓಡಾಟಕ್ಕೆ ಆದಷ್ಟು ಬ್ರೇಕ್ ಹಾಕಬೇಕು. ಚಳಿಗಾಲದಲ್ಲೂ ಸನ್‌ಬರ್ನ್, ಟ್ಯಾನ್‌ನಂತಹ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಇದರಿಂದ ಒಣ ಚರ್ಮದ ಸಮಸ್ಯೆಯೂ ಹೆಚ್ಚುತ್ತದೆ. ಚಳಿಗಾಲದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯುವುದು ಅವಶ್ಯವಾಗಿದೆ. ನೀರು ಕುಡಿದಷ್ಟೂ ಚರ್ಮ ತೇವಾಂಶಭರಿತವಾಗಿರುತ್ತದೆ. ಹಗಲಿನ ವೇಳೆ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ.

ಆಹಾರ ಕ್ರಮ

ಯಾವುದೇ ಕಾಲವಾಗಿರಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಮ್ಮ ಆಹಾರಕ್ರಮ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಚರ್ಮದ ಕಾಂತಿ ಹೆಚ್ಚಲು ಚಳಿಗಾಲದಲ್ಲಿ ಹಣ್ಣಿನ ರಸ, ಸೊಪ್ಪು, ತರಕಾರಿಯನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಕ್ಯಾರೆಟ್, ಬೀನ್ಸ್, ಬಟಾಣಿ, ಟೊಮೆಟೊ ಹಣ್ಣಿನ ಸೇವನೆ ಅಗತ್ಯ. ಇದರೊಂದಿಗೆ ಪೋಷಕಾಂಶವಿರುವ ಆಹಾರವನ್ನೂ ಸೇವಿಸಿ.

ಮಾಯಿಶ್ಚರೈಸರ್ ಬಳಕೆ

ಚಳಿಗಾಲದಲ್ಲಿ ಚರ್ಮದ ಕಾಂತಿ ಉಳಿಸಿಕೊಳ್ಳಲು ಮಾಯಿಶ್ಚರೈಸರ್‌ಗಳ ಬಳಕೆ ಅವಶ್ಯ. ಪ್ರತಿದಿನ ಬೆಳಿಗ್ಗೆ ತಪ್ಪದೇ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ತುಟಿಗೆ ಲಿಮ್‌ಬಾಮ್ ಬಳಸುವುದನ್ನು ಮರೆಯದಿರಿ.

ತೈಲ ಚಿಕಿತ್ಸೆ

ಸ್ನಾನಕ್ಕೂ ಮೊದಲು ಬಿಸಿ ಮಾಡಿದ ತೆಂಗಿನೆಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದು ತುಂಬಾ ಮುಖ್ಯ. ಇದರಿಂದ ಚರ್ಮ ಒಣಗುವುದನ್ನು ತಪ್ಪಿಸಬಹುದು ಹಾಗೂ ಸಿಪ್ಪೆ ಏಳುವುದು ಕಡಿಮೆಯಾಗುತ್ತದೆ. ಕೆನೆಯುಳ್ಳ ಸೋಪ್ ಅನ್ನು ಬಳಸುವುದರಿಂದ ಚರ್ಮಕ್ಕೆ ಬೇಕಾಗುವ ಪೂರಕ ತೇವಾಂಶವನ್ನು ಅದು ಒದಗಿಸುತ್ತದೆ. ಹಿಮಗಾಳಿಗೆ ಹೊರ ಹೋಗುವ ಹಾಗಿದ್ದರೆ ಸ್ನಾನ ಮಾಡಿದ ಅಥವಾ ಮುಖ ತೊಳೆದ ಅರ್ಧ ಗಂಟೆ ನಂತರ ಹೊರಡಿ. ತಾಪಮಾನದ ಬದಲಾವಣೆಯೂ ಚರ್ಮ ಕಳೆಗಟ್ಟಲು ಕಾರಣವಾಗಬಹುದು. ಹಾಗಾಗಿ ಹೊರಗಿನಿಂದ ಬಂದ ಕೂಡಲೇ ತಣ್ಣೀರಿನಿಂದ ಮುಖ ತೊಳೆಯುವುದನ್ನು ಮರೆಯದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.