ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಧಗೆಗೆ ತ್ವಚೆಯ ಆರೈಕೆ

Last Updated 27 ಮಾರ್ಚ್ 2021, 3:30 IST
ಅಕ್ಷರ ಗಾತ್ರ

ಬೇಸಿಗೆ ಕಾಲ ಆರಂಭವಾಗಿ ಕೆಲದಿನಗಳು ಕಳೆದಿವೆ. ಈ ವರ್ಷ ಬಿಸಿಲ ಧಗೆ ಕೊಂಚ ಹೆಚ್ಚೇ ಇದೆ ಎನ್ನಬಹುದು. ಇದರೊಂದಿಗೆ ಬೇಸಿಗೆ ಬಂದಾಕ್ಷಣ ಸನ್‌ಬರ್ನ್‌, ಟ್ಯಾನ್‌, ದದ್ದು ಹಾಗೂ ತುರಿಕೆಯಂತಹ ಚರ್ಮದ ಸಮಸ್ಯೆಗಳು ಸಾಮಾನ್ಯ.

ಡಾ. ಪ್ರಿಯಾಂಕ ರೆಡ್ಡಿ
ಡಾ. ಪ್ರಿಯಾಂಕ ರೆಡ್ಡಿ

ಈ ಸಮಸ್ಯೆಗಳಿಗೆ ಕಾರಣವೇನು? ಪರಿಹಾರವೇನು? ಹಾಗೂ ಚರ್ಮದ ಆರೋಗ್ಯ ರಕ್ಷಣೆಗೆ ಡಯೆಟ್ ಪಾಲನೆ ಹೇಗೆ ಎಂಬೆಲ್ಲಾ ವಿಷಯದ ಬಗ್ಗೆ ಮಾತನಾಡಿದ್ದಾರೆ ಬೆಂಗಳೂರಿನ ಚರ್ಮವೈದ್ಯೆ ಡಾ. ಪ್ರಿಯಾಂಕ ರೆಡ್ಡಿ.

ಬೇಸಿಗೆಯಲ್ಲಿ ಕಾಣಿಸುವ ಸಾಮಾನ್ಯ ಚರ್ಮದ ಸಮಸ್ಯೆಗಳು ಹಾಗೂ ಅವುಗಳಿಗೆ ಕಾರಣಗಳು?

ಬೇಸಿಗೆಯಲ್ಲಿ ಬೆವರುವುದು ಜಾಸ್ತಿ ಆದ ಕಾರಣ ಅಲರ್ಜಿ, ಮೊಡವೆ ಹಾಗೂ ರೋಮದ ಬುಡದ ಫಾಲಿಕಲ್‌ಗಳಲ್ಲಿ ಸೋಂಕು ಉಂಟಾಗುವುದು ಮುಂತಾದ ಸಮಸ್ಯೆಗಳು ಹೆಚ್ಚು ಕಾಣಿಸುತ್ತವೆ. ಅದರಲ್ಲೂ ಕಂಕುಳಿನ ಕೆಳಗೆ, ಸ್ತನದ ಕೆಳಗೆ, ತೊಡೆ ಸಂದಿ ಸೇರಿದಂತೆ ಬೆವರು ನಿಲ್ಲುವ ಜಾಗದಲ್ಲಿ ಹೆಚ್ಚು ಸಮಸ್ಯೆ ಕಾಣಿಸುತ್ತದೆ. ಅದರೊಂದಿಗೆ ಸೂರ್ಯನ ಕಿರಣಗಳು ನೇರವಾಗಿ ಕೂದಲು ಹಾಗೂ ಚರ್ಮಕ್ಕೆ ತಾಗುವುದರಿಂದ ಸನ್‌ ಬರ್ನ್‌, ಟ್ಯಾನ್‌ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಚರ್ಮದ ಕಾಳಜಿ ಹೇಗೆ?

ಕಾಳಜಿ ಎಂದರೆ ಮುಖ ಅಥವಾ ಚರ್ಮದ ಮೇಲೆ ಬಗೆ ಬಗೆಯ ಕ್ರೀಮ್‌ಗಳನ್ನು ಹಚ್ಚುವುದು ಎಂದು ಅರ್ಥವಲ್ಲ. ಕಾಳಜಿ ಎಂಬುದು ಇಡೀ ದೇಹಪ್ರಕೃತಿಯನ್ನು ಅವಲಂಬಿಸಿರುತ್ತದೆ. ಚರ್ಮದ ಆರೋಗ್ಯವು ನಮ್ಮ ಜೀವನಶೈಲಿ, ಆಹಾರಕ್ರಮ ಎಲ್ಲವನ್ನೂ ಅವಲಂಬಿಸಿದೆ. ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ದೇಹದಲ್ಲಿ ಬೆವರಿನ ಅಂಶ ನಿಲ್ಲದಂತೆ ನೋಡಿಕೊಳ್ಳಬೇಕು. ಅದರಲ್ಲೂ ಜಿಮ್‌, ವ್ಯಾಯಾಮದಂತಹ ಚಟುವಟಿಕೆಯ ನಂತರ ತಕ್ಷಣಕ್ಕೆ ಸ್ನಾನ ಮಾಡಬೇಕು. ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಒದ್ದೆ ಹತ್ತಿಬಟ್ಟೆಯಿಂದ ಮೈ ಒರೆಸಿಕೊಳ್ಳಬೇಕು.

ಸಮಸ್ಯೆ ನಿವಾರಣೆಗೆ ಮನೆಮದ್ದುಗಳು?

ಚರ್ಮವನ್ನು ಸಮಸ್ಯೆ ಕಾಡದಂತೆ ಕಾಪಾಡಿಕೊಳ್ಳಲು ಪ್ರತಿನಿತ್ಯ ಲೋಳೆಸರ ತಿರುಳನ್ನು ಹಚ್ಚಿಕೊಳ್ಳಬೇಕು. ಅಂಗಡಿಯಲ್ಲಿ ಡಬ್ಬಿಗಳಲ್ಲಿ ಸಿಗುವ ಲೋಳೆಸರಕ್ಕಿಂತ ಕಾಂಡದಿಂದ ಸಿಗುವ ತಾಜಾ ತಿರುಳನ್ನು ಬಳಸುವುದು ಉತ್ತಮ. ಮನೆಯಲ್ಲಿ ತೇಯ್ದು ತಯಾರಿಸಿದ ಶ್ರೀಗಂಧದ ಲೇಪ ಕೂಡ ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT