ನಲವತ್ತರ ನಂತರ ಬಹತೇಕರನ್ನು ಕಾಡುವ ಸಮಸ್ಯೆ ಬೊಜ್ಜು. ಇದು ಆರೋಗ್ಯಕ್ಕೆ ಮಾರಕ. ದೇಹಕ್ಕೆ ಕೊಬ್ಬು ಅವಶ್ಯವಾದರೂ ವ್ಯಕ್ತಿಯ ಆರೋಗ್ಯದಲ್ಲಿ ವ್ಯತಯವನ್ನುಂಟು ಮಾಡುವಷ್ಟು ಕೊಬ್ಬು ಶೇಖರವಾಗುವುದನ್ನು ‘ಬೊಜ್ಜು’ ಎಂದು ಪರಿಗಣಿಸುತ್ತೇವೆ. ವ್ಯಕ್ತಿಯ ದೇಹತೂಕ ಆತನ ಎತ್ತರ ಮತ್ತು ವಯಸ್ಸಿಗೆ ಸಹಜವಾಗಿರದೆ ಹೆಚ್ಚಿದ್ದಾಗ ಅಧಿಕ ದೇಹತೂಕ ಎನ್ನಿಸಿಕೊಳ್ಳುತ್ತದೆ. ದೇಹ ದ್ರವ್ಯರಾಶಿ ಸೂಚ್ಯಂಕದ (‘ಬಾಡಿ ಮಾಸ್ ಇಂಡೆಕ್ಸ್’) ಆಧಾರದ ಮೇಲೆ ವ್ಯಕ್ತಿಯದು ಸಹಜ ತೂಕವೇ, ಅಧಿಕ ತೂಕವೇ ಅಥವಾ ‘ಬೊಜ್ಜೇ’ ಎಂದು ನಿರ್ಧರಿಸಬಹುದು. ದೇಹ ತೂಕವನ್ನು ಎತ್ತರದ (ಮೀಟರ್ನಲ್ಲಿ) ಚದರದಿಂದ ಭಾಗಿಸಿದಾಗ ಸಿಗುವ ಸಂಖ್ಯೆಯೇ ಅ ಸೂಚ್ಯಂಕ.

18.5-24.9 > ಸಹಜ ದೇಹತೂಕ
25.0-29.9 > ಅಧಿಕ ದೇಹತೂಕ
30.0 ಮತ್ತು ಹೆಚ್ಚು > ಬೊಜ್ಜು

ದೇಹದ ಇತರ ಭಾಗಗಳ ಚರ್ಮದ ಕೆಳಭಾಗದಲ್ಲಿ ಶೇಖರವಾಗುವ ಕೊಬ್ಬಿನಾಂಶಕ್ಕಿಂತಲೂ ಹೊಟ್ಟೆ ಹಾಗೂ ಸೊಂಟದ ಸುತ್ತ ಶೇಖರವಾಗುವ ಕೊಬ್ಬು ಅಪಾಯ. ಏಕೆಂದರೆ ಇದು ಆಂತರಿಕ ಅಂಗಾಂಗಗಳಾದ ಯಕೃತ್ತು, ಕರುಳು, ಗುಲ್ಮ, ಮೇದೋಜೀರಕ ಗ್ರಂಥಿಗಳ ಸುತ್ತಲೂ ಆವರಿಸಿಕೊಂಡು ಅವುಗಳ ಕ್ಷಮತೆಯನ್ನು ಗಣನೀಯವಾಗಿ ಕುಂಠಿತಗೊಳಿಸಬಲ್ಲದು. ಮುಖ್ಯವಾಗಿ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳಿಂದ ಇನ್ಸುಲಿನ್ನ ಉತ್ಪತ್ತಿ ಇಳಿಮುಖವಾಗತೊಡಗುತ್ತದೆ. ಉತ್ಪತ್ತಿಯಾದ ಅಲ್ಪಸ್ವಲ್ಪ ಇನ್ಸುಲಿನ್ನ ಕಾರ್ಯಕ್ಷಮತೆ ಕೂಡ ಕ್ಷೀಣಿಸತೊಡಗುತ್ತದೆ. ಇದು ಮಧುಮೇಹಕ್ಕೆ ಅಡಿಪಾಯ ಹಾಕಿದಂತಾಗುತ್ತದೆ. ಇದು ಮತ್ತಷ್ಟು ಮುಂದುವರೆದು ಪಿಷ್ಟ ಮತ್ತು ಕೊಬ್ಬಿನಾಂಶದ ಚಯಾಪಚಯಗಳಲ್ಲಿ ದೋಷ, ಅಧಿಕ ರಕ್ತದೊತ್ತಡ ಮತ್ತು ಅಂಗಾಂಶಗಳಲ್ಲಿ ಉರಿಯೂತದ ಸ್ಥಿತಿಗೂ ಕಾರಣವಾಗುತ್ತದೆ. ಈ ಸಂಕೀರ್ಣವನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಮೆಟಬಾಲಿಕ್ ಸಿಂಡ್ರೋಮ್’ ಎನ್ನುತ್ತೇವೆ. ಈ ಎಲ್ಲ ಅಂಶಗಳು ಹೃದಯ ಮತ್ತು ರಕ್ತನಾಳಗಳ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಒಟ್ಟಾರೆ ಸೂಚಿಸುವುದಾದರೆ ಬೊಜ್ಜು ಮುಖ್ಯವಾಗಿ ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹಾಗೂ ಕೆಲ ಬಗೆಯ ಕ್ಯಾನ್ಸರ್ಗಳಿಗೂ ಕಾರಣವಾಗಬಲ್ಲದು.

ವ್ಯವಸ್ಥೆಯಲ್ಲಿ ದೋಷ

ಶರೀರದಲ್ಲಿ ಶಕ್ತಿಯ ಬಳಕೆಯಲ್ಲಿನ ಅಸಮತೋಲನವೇ ಅಧಿಕ ದೇಹತೂಕ ಮತ್ತು ಬೊಜ್ಜಿಗೆ ಮುಖ್ಯ ಕಾರಣ. ಶೇಖರಗೊಂಡ ಕೊಬ್ಬಿನಾಂಶದಿಂದ ಉತ್ಪತ್ತಿಯಾಗುವ ‘ಲೆಪ್ಟಿನ್’ ಹಾಗೂ ಜಠರ, ಕರುಳುಗಳಿಂದ ಉತ್ಪತ್ತಿಯಾಗುವ ‘ಗ್ರೆಲಿನ್’ ಮತ್ತಿತರ ಅಂಶಗಳು ಮಿದುಳಿನ ಹೈಪೋಥೆಲಾಮಸ್ನ ಮೂಲಕ ಹಸಿವೆಯನ್ನು ನಿಯಂತ್ರಿಸುವಲ್ಲಿ ಹಾಗೂ ಶಕ್ತಿಯ ಬಳಕೆಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಈ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಾಗ ಶಕ್ತಿಯು ಸರಿಯಾಗಿ ಬಳಕೆಯಾಗದೆ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತಹೋಗುತ್ತದೆ.

ಕಾರಣಗಳೇನು?

• ಅನುವಂಶೀಯತೆ
• ರಸದೂತಗಳ ವ್ಯತ್ಯಾಸ ( ಥೈರಾಯ್ಡ್ ಮತ್ತು ಅಡ್ರೆನಲ್ ಗ್ರಂಥಿಯ ಕ್ಷಮತೆಯಲ್ಲಿ ವ್ಯತಯ)
• ಜಡವಾದ ಜೀವನಶೈಲಿ
• ಅಧಿಕ ಕ್ಯಾಲೊರಿಯುಕ್ತ ಆಹಾರಸೇವನೆ
• ಕೆಲವು ಮಾನಸಿಕ ಕಾಯಿಲೆಗಳು
• ಕೆಲವು ಔಷಧಗಳ ದೀರ್ಘಕಾಲಿಕ ಸೇವನೆ, ಮೊದಲಾದುವು

ಪರಿಣಾಮಗಳು

ಮಧುಮೇಹ, ರಕ್ತದ ಕೊಬ್ಬಿನಾಂಶದ ಹೆಚ್ಚಳ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಪಟ್ಟ ಇತರ ಸಮಸ್ಯೆಗಳು, ಪಾರ್ಶ್ವವಾಯು, ಯಕೃತ್ತಿನ ಸಮಸ್ಯೆಗಳು, ಪಿತ್ತಕೋಶದಲ್ಲಿ ಕಲ್ಲುಗಳು, ಸಂಧಿವಾತ ಮತ್ತು ಕೀಲುನೋವು, ನಿದ್ದೆಯಲ್ಲಿ ಉಸಿರಾಟದ ಸಮಸ್ಯೆ ಮೊದಲಾದುವು ಮುಖ್ಯವಾದ ಅಪಾಯದ ಪರಿಣಾಮಗಳು. ಬೊಜ್ಜು ಕ್ಯಾನ್ಸರ್ಗೂ ಕಾರಣವಾಗಬಲ್ಲದು.
ಅಧಿಕ ತೂಕ ಹೊಂದಿದವರಲ್ಲಿ ಅನ್ನನಾಳ, ಥೈರಾಯ್ಡ್, ಕರುಳು ಮತ್ತು ಮೂತ್ರಪಿಂಡದ ಕ್ಯಾನ್ಸರ್ ಸಂಭವ ಹೆಚ್ಚು. ಸ್ಥೂಲಕಾಯದ ಮಹಿಳೆಯರಲ್ಲಿ ಪಿತ್ತಕೋಶ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಸಂಭವ ಕೂಡ ಹೆಚ್ಚು ಎನ್ನುತ್ತವೆ, ಅಧ್ಯಯನಗಳು.

ಆರಂಭದಲ್ಲಿಯೇ ನಿಯಂತ್ರಿಸಿ

ಆಹಾರದಲ್ಲಿ ಪಿಷ್ಟಾಂಶ ಕಡಿಮೆಯಿರಲಿ. ‘ಬಿಳಿವಿಷ’ಗಳೆಂದೇ ಪರಿಗಣಿಸಲ್ಪಟ್ಟಿರುವ ಸಕ್ಕರೆ, ಉಪ್ಪು, ಅಕ್ಕಿ, ಮೈದಾ ಬಳಕೆಯನ್ನು ಮಿತಿಯಲ್ಲಿಡುವುದು ಒಳ್ಳೆಯದು.

ಪ್ರೊಟೀನ್ ಅಂಶ ಹೆಚ್ಚಿರುವ ಮೊಳಕೆ ಬರಿಸಿರುವ ಕಾಳು, ಮೊಟ್ಟೆ, ಮಾಂಸಾಹಾರ, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಸೊಪ್ಪು, ಹಸಿರು ತರಕಾರಿಗಳು, ಹಣ್ಣುಗಳ ಬಳಕೆ ಉತ್ತಮ.

ಸಂಸ್ಕರಿಸಿದ ಆಹಾರದಿಂದ ದೂರವಿರಿ. ಆದಷ್ಟೂ ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಹಾಗೂ ಪೌಷ್ಟಿಕ ಆಹಾರಕ್ಕೆ ಒತ್ತನ್ನು ಕೊಡಿ.

ನಿತ್ಯವೂ ಕಡ್ಡಾಯವಾಗಿ ವ್ಯಾಯಮ ಮಾಡಿ. ಸದಾ ಚಟುವಟಿಕೆಯಿಂದಿರಿ.

ದಿನಕ್ಕೆ ಆರರಿಂದ ಎಂಟು ತಾಸುಗಳ ಸಮರ್ಪಕ ನಿದ್ದೆಯೂ ಆರೋಗ್ಯಕ್ಕೆ ಅತ್ಯವಶ್ಯಕ

ನೀವು ಮಾನಸಿಕ ತುಮುಲಗಳಿಂದ ಹೊರಬರಲಾರದೆ ಅತಿಯಾದ ಆಹಾರಸೇವನೆ ಮಾಡುತ್ತಿದ್ದರೆ ಪರಿಹಾರ ಕಂಡುಕೊಳ್ಳಿ. ಅಗತ್ಯವಿದ್ದರೆ ಆಪ್ತಸಮಾಲೋಚಕರಲ್ಲಿ ಅಥವಾ ಮನೋವೈದ್ಯರಲ್ಲಿ ಸಲಹೆ ಪಡೆಯಿರಿ

ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು

ಬದಲಾದ ಜೀವನಶೈಲಿಯಿಂದ ಮಕ್ಕಳಲ್ಲಿಯೂ ಬೊಜ್ಜು ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಇದು ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮೊಬೈಲ್ ವ್ಯಸನ, ಕಡಿಮೆಯಾಗುತ್ತಿರುವ ಹೊರಾಂಗಣದ ಕ್ರೀಡೆಗಳು, ಜಂಕ್ ಆಹಾರದ ಹಾವಳಿ, ಚಟುವಟಿಕೆರಹಿತ ಜೀವನ ಮೊದಲಾದ ಅಂಶಗಳು ಈ ನಿಟ್ಟಿನಲ್ಲಿ ಕಾರಣ. ಪೋಷಕರು ಆರಂಭದಿಂದಲೇ ಮಕ್ಕಳ ಆಹಾರದ ಬಗ್ಗೆ ಗಮನವನ್ನು ವಹಿಸಬೇಕು. ನಿತ್ಯವೂ ವ್ಯಾಯಾಮ ಮಾಡಲು ಮತ್ತು ಆಟೋಟಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು.

ಪೂರ್ವಭಾವಿ ಮಧುಮೇಹ

ದೋಷಪೂರಿತ ಜೀವನಶೈಲಿಯ ಕಾರಣದಿಂದಾಗಿ ಪೂರ್ಣಪ್ರಮಾಣದ ಮಧುಮೇಹ ಕಾಣಿಸಿಕೊಳ್ಳುವ ಮೊದಲ ಹಂತವನ್ನು ‘ಪೂರ್ವಭಾವಿ ಮಧುಮೇಹ’ ಎನ್ನಲಾಗುತ್ತದೆ. ಈ ಹಂತದಲ್ಲಿ ಎಚ್ಚರವನ್ನು ವಹಿಸಿದರೆ ಮಧುಮೇಹ ಬರುವುದನ್ನು ತಪ್ಪಿಸಬಹುದು. ಆದರೆ ಕಟ್ಟುನಿಟ್ಟಿನ ಆಹಾರಶೈಲಿ, ನಿಯಮಿತ ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಂಡರೆ ಮಾತ್ರ ಅದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.