ಪಾರ್ಶ್ವವಾಯುಪೀಡಿತ ರೋಗಿಯಲ್ಲಿ ಮಾತನಾಡಲು ತೊಂದರೆ ಅಥವಾ ಸಂಪೂರ್ಣ ಮಾತು ನಿಂತು ಹೋಗಬಹುದು. ಕೆಲವರಲ್ಲಿ ದೃಷ್ಟಿ ಮಸುಕಾಗಬಹುದು ಅಥವಾ ವಸ್ತುಗಳು ಎರಡೆರಡಾಗಿ ಕಾಣಿಸಿಕೊಳ್ಳಬಹುದು. ತೀವ್ರವಾದ ಪಾರ್ಶ್ವವಾಯು ಕೋಮಾಸ್ಥಿತಿಗೂ ತಳ್ಳಬಹುದು.

ರಕ್ತನಾಳದೊಳಗೆ ರಕ್ತದ ಹೆಪ್ಪುಗಟ್ಟುವಿಕೆಯಿಂದ ಮಿದುಳಿಗೆ ರಕ್ತಸಂಚಾರ ಕಡಿತವಾಗಬಹುದು. ಕೆಲವೊಮ್ಮೆ ಮಿದುಳಿಗೆ ರಕ್ತ ಸಂಪರ್ಕ ಕಲ್ಪಿಸುವ ರಕ್ತನಾಳ ಒಡೆದು ಹೋಗಿ ರಕ್ತಸ್ರಾವವಾದಲ್ಲಿ ಮಿದುಳಿನ ನರಕೋಶಗಳಿಗೆ ರಕ್ತದ ಮೂಲಕ ಸಿಗುವ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಮಿದುಳಿಗೆ ಉಂಟಾಗುವ ಈ ಸಮಸ್ಯೆಯನ್ನು ನಾವು ‘ಪಾರ್ಶ್ವವಾಯು’ (Stroke) ಎಂದು ಕರೆಯುತ್ತೇವೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿರುವುದರಿಂದ ತಕ್ಷಣ ಚಿಕಿತ್ಸೆ ಸಿಗದಿದ್ದಲ್ಲಿ ಜೀವಕ್ಕೆ ಮಾರಕವಾಗುವ ಅಪಾಯವಿರುತ್ತದೆ.

ಮಿದುಳಿನ ಯಾವ ಭಾಗಕ್ಕೆ ರಕ್ತಸಂಪರ್ಕದ ಕಡಿತವಾಗಿದೆಯೆಂಬ ಆಧಾರದ ಮೇಲೆ ಪಾರ್ಶ್ವವಾಯು ರೋಗದ ವಿಭಿನ್ನ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಳ್ಳಬಹುದು. ಮಿದುಳಿನ ಪ್ರತಿಯೊಂದು ಭಾಗವು ದೇಹದ ವಿವಿಧ ಅಂಗಗಳ ಮೇಲೆ ಹಿಡಿತವನ್ನು ಹೊಂದಿರುತ್ತದೆ. ಮಾತು, ರುಚಿ, ಸ್ಪರ್ಶ, ಸ್ಮರಣೆ, ದೃಷ್ಟಿ ಮತ್ತು ಶ್ರವಣ ಸೇರಿದಂತೆ ಹಲವು ವಿಚಾರಗಳನ್ನು ಮಿದುಳಿನ ವಿವಿಧ ಭಾಗಗಳು ನಿಯಂತ್ರಿಸುತ್ತವೆ. ಸ್ಕ್ಯಾನಿಂಗ್ ಲಭ್ಯವಿಲ್ಲದ ಕಾಲಘಟ್ಟದಲ್ಲಿ ಹಳೆಯ ಕಾಲದ ನಿಪುಣ ವೈದ್ಯರು ರೋಗಿಯ ದೇಹವನ್ನು ಪರೀಕ್ಷೆ ಮಾಡಿ ಮಿದುಳಿನ ಇಂತಹ ನಿರ್ದಿಷ್ಟ ಭಾಗದಲ್ಲಿ ರಕ್ತಸಂಪರ್ಕ ಕಡಿತಗೊಂಡು ಪಾರ್ಶ್ವವಾಯು ಸಂಭವಿಸಿದೆಯೆಂದು ನಿಖರವಾಗಿ ಹೇಳುತ್ತಿದ್ದರು. ಪಾರ್ಶ್ವವಾಯು ಅಪಘಾತವಾದ ರೋಗಿಯಲ್ಲಿ ಮಾತನಾಡಲು ತೊಂದರೆ ಅಥವಾ ಸಂಪೂರ್ಣ ಮಾತು ನಿಂತು ಹೋಗಬಹುದು. ಕೆಲವರಲ್ಲಿ ಮಸುಕಾದ ಮಸುಕಾಗಬಹುದು ಅಥವಾ ವಸ್ತುಗಳು ಎರಡೆರಡಾಗಿ ಕಾಣಿಸಿಕೊಳ್ಳಬಹುದು. ತೀವ್ರವಾದ ಪಾರ್ಶ್ವವಾಯು ಕೋಮಾಸ್ಥಿತಿಗೂ ತಳ್ಳಬಹುದು. ಕೈ–ಕಾಲುಗಳ ಸ್ವಾಧೀನ ಕಳೆದುಕೊಳ್ಳುವುದು ಮತ್ತು ಮುಖದ ಸ್ನಾಯುಗಳು ಒಂದು ಭಾಗದಲ್ಲಿ ಸಡಿಲವಾಗುವ ಕಾರಣ ಮುಖ ಒಂದು ಕಡೆಗೆ ತಿರುಗಿಕೊಳ್ಳಬಹುದು. ವಾಂತಿ ಮತ್ತು ತಲೆನೋವು ಕೂಡ ಲಘುವಾಗಿ ಪಾರ್ಶ್ವವಾಯು ಬಂದಾಗ ಕಾಣಿಸಿಕೊಳ್ಳಬಹುದು.

ಮಿದುಳಿನ ರಕ್ತಸಂಪರ್ಕದ ಸಮಸ್ಯೆ ಸರಿಯಾಗುವ ತನಕ ಪಾರ್ಶ್ವವಾಯು ಇರುತ್ತದೆ. ರಕ್ತದ ಸಂಪರ್ಕ ಕಡಿತವಾಗಿರುವುದು ಸರಿಯಾಗದೆ ಆಮ್ಲಜನಕ ಕೊರತೆಯು ಹೆಚ್ಚು ಸಮಯ ಬಾಧಿಸಿದರೆ ಮಿದುಳಿನ ಕೋಶಗಳು ಸಾಯುತ್ತವೆ. ಒಂದು ಪ್ರದೇಶದಲ್ಲಿ ಸಾಕಷ್ಟು ಮಿದುಳಿನ ಕೋಶಗಳು ಸತ್ತರೆ,ಆಗ ದೇಹಕ್ಕೆ ಹಾನಿ ಶಾಶ್ವತವಾಗುತ್ತದೆ. ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು. ಮಿದುಳಿನೊಳಗೆ ರಕ್ತದ ಹರಿವನ್ನು ಪುನಃಸ್ಥಾಪಿಸುವುದರಿಂದ ಆ ಶಾಶ್ವತ ಹಾನಿಯನ್ನು ತಡೆಯಬಹುದು ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು. ಅದಕ್ಕಾಗಿಯೇ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಸಮಯವು ನಿರ್ಣಾಯಕವಾಗಿದೆ. ಪಾರ್ಶ್ವವಾಯು ರೋಗದ ಲಕ್ಷಣಗಳು ಕಾಣಿಸಿಕೊಂಡ ನಂತರದ ನಾಲ್ಕುವರೆ ಗಂಟೆಗಳ ಅವಧಿಯನ್ನು ‘Golden Hour’ ‘ಅತ್ಯಮೂಲ್ಯ ಅವಧಿ’ ಎಂದು ಕರೆಯುತ್ತಾರೆ. ಆ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ, ಮಿದುಳಿನ ನರಕೋಶಗಳು ಸಾಯಬಹುದು.

ಪಾರ್ಶ್ವವಾಯು ಸಂಭವಿಸುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಯ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ಪ್ರೀತಿಪಾತ್ರರಲ್ಲಿ ಪಾರ್ಶ್ವವಾಯುವಿನ ಎಚ್ಚರಿಕೆ ಚಿಹ್ನೆಗಳನ್ನು ಬೇಗ ಗುರುತಿಸಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಹಠಾತ್ ದೇಹದ ಸಮತೋಲನ ತಪ್ಪುವುದು, ದೃಷ್ಟಿ ಮಂಜಾಗುವುದು, ಮುಖ ಒಂದು ಕಡೆಗೆ ವಾಲುವುದು, ಮಾತು ತೊದಲುವುದು ಮತ್ತು ಕೈಕಾಲಿನ ಶಕ್ತಿ ಕುಂದಿದರೆ ಅವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರಲ್ಲಿ, ಧೂಮಪಾನದ ಅಭ್ಯಾಸವಿರುವವರಲ್ಲಿ ಮತ್ತು ಅನುವಂಶೀಯ ಕಾಯಿಲೆಗಳು ಇರುವವರಲ್ಲಿ ಪಾರ್ಶ್ವವಾಯು ಹೆಚ್ಚಾಗಿ ಕಂಡುಬರುತ್ತದೆ. ಭಾರತದ ದೊಡ್ಡ ನಗರಗಳಲ್ಲಿ ಮಾತ್ರ ನರರೋಗತಜ್ಞರು ಮತ್ತು ಮಿದುಳಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಬಲ್ಲ ತಜ್ಞರು ಲಭ್ಯವಿರುತ್ತಾರೆ. ಮಿದುಳಿನೊಳಗಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ತಿಳಿಯಲು ‘ಎಂ.ಆರ್. ಐ.’ ಸ್ಕ್ಯಾನಿಂಗ್ ಕೂಡ ಗ್ರಾಮೀಣ ಭಾಗದಲ್ಲಿ ಲಭ್ಯವಿರುವುದಿಲ್ಲ. ಪಾರ್ಶ್ವವಾಯು ಕಾಯಿಲೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರಕದಿದ್ದರೆ ಜೀವಹಾನಿ ಅಥವಾ ಅಂಗಾಂಗಗಳು ಶಾಶ್ವತವಾಗಿ ಊನವಾಗಬಹುದು. ತಡವಾಗಿ ಚಿಕಿತ್ಸೆ ದೊರಕಿದ ನಂತರ ದೇಹದ ಮಾಂಸಖಂಡಗಳಲ್ಲಿ ನಿಶ್ಶಕ್ತಿ ಕಂಡುಬರಬಹುದು. ಈ ಕಾರಣಗಳಿಂದಾಗಿ ಪಾರ್ಶ್ವವಾಯು ಪೀಡಿತ ಹೆಚ್ಚಿನ ರೋಗಿಗಳಿಗೆ ದೀರ್ಘಕಾಲದ ಫಿಸಿಯೋಥೆರಪಿಯ ಅಗತ್ಯವಿರುತ್ತದೆ.

ದೇಹದಲ್ಲಿ ಯಾವುದೇ ಅಸಹಜ ಸಮಸ್ಯೆಯ ಲಕ್ಷಣಗಳು ತೋರಿಕೊಂಡಾಗ ಅವನ್ನು ನಿರ್ಲಕ್ಷಿಸದೆ, ಕೂಡಲೇ ವೈದ್ಯರ ಸಲಹೆಯನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು.

ಭಾರತದಲ್ಲಿ ಪ್ರತಿ ನಲವತ್ತು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ತುತ್ತಾಗುತ್ತಾನೆ. ದೇಶದಾದ್ಯಂತ ಪಾರ್ಶ್ವವಾಯುವಿಗೆ ತುತ್ತಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದ ಕಾರಣ ಹಾಸಿಗೆ ಹಿಡಿದಿರುವ ಅಥವಾ ಫಿಸಿಯೋಥೆರಪಿ ಪಡೆಯುತ್ತಿರುವವರ ಸಂಖ್ಯೆಯು ದೊಡ್ಡದಿದೆ.

ಪಾರ್ಶ್ವವಾಯುವಿಗೆ ಕೆಲವೇ ಗಂಟೆ ಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಗಳು ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಇನ್ನೂ ಲಭ್ಯವಿಲ್ಲದಿರುವುದು ಆತಂಕದ ಸಂಗತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.