ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಕಾಣಿಸಿಕೊಂಡರೆ ಹುಟ್ಟುವ ಮಗುವಿನಲ್ಲಿ ದೈಹಿಕ ಬೆಳವಣಿಗೆಯಲ್ಲಿ ಕೊರತೆ ಮತ್ತು ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ‘ಲಾನ್ಸೆಟ್ ಡಯಾಬಿಟಿಸ್ ಆ್ಯಂಡ್ ಎಂಡೊಕ್ರಿನೊಲಜಿ’ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.

ಗರ್ಭಾವಸ್ಥೆಯ ಮಧುಮೇಹದಿಂದಾಗಿ ಮಕ್ಕಳಲ್ಲಿ ಶೇ 25 ರಷ್ಟು ಆಟಿಸಂ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಶೇ 30ರಷ್ಟು ಏಕಾಗ್ರತೆಯ ಕೊರತೆ ಸಮಸ್ಯೆ, ಸಂವಹನ ಮತ್ತು ಕಲಿಕೆಯಲ್ಲಿ ತೊಂದರೆ ಮತ್ತು ಶೇ 32ರಷ್ಟು ಬೌದ್ಧಿಕ ಅಸಮರ್ಥತೆ ಉಂಟಾಗುವ ಸಂಭವ ಇರುತ್ತದೆ ಎಂದು ಅಧ್ಯಯನದ ವರದಿ ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.
.ಗರ್ಭಾವಸ್ಥೆ ಮಧುಮೇಹ ನಿಯಂತ್ರಣ ಸರಳ.
ಚೀನಾದ ಸೆಂಟ್ರಲ್ ಸೌತ್ ಯುನಿವರ್ಸಿಟಿಯ ಸಂಶೊಧಕರು ಈ ಅಧ್ಯಯನ ನಡೆಸಿದ್ದಾರೆ.

ಇತ್ತೀಚೆಗೆ ಜಾಗತಿಕವಾಗಿ ಗರ್ಭಾವಸ್ಥೆಯಲ್ಲಿ ಟೈಪ್ –1 ಅಥವಾ ಟೈಪ್ 2 ಮಧುಮೇಹ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುತ್ತಿದೆ. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ, ಬೊಜ್ಜು, ಅಸಮರ್ಪಕ ಜೀವನಶೈಲಿ, 35 ವರ್ಷಗಳ ನಂತರ ಗರ್ಭಧಾರಣೆಯಾಗಿದೆ ಎಂದು ವರದಿ ಹೇಳಿದೆ.
.ಗರ್ಭಾವಸ್ಥೆ: ಸಂತಸದ ಸಮಯ ಎಚ್ಚರಿಕೆ ಸಮಯವೂ ಹೌದು.ಕಾಳಜಿ | ಗರ್ಭಿಣಿಯರಲ್ಲಿ ಮಧುಮೇಹ.
ಈ ಹಿಂದಿನ ಅಧ್ಯಯನಗಳಲ್ಲಿ ಮಧುಮೇಹದಿಂದಾಗಿ ಗರ್ಭದಲ್ಲಿರುವ ಶಿಶುವಿನ ಮಿದುಳಿನ ಬೆಳವಣಿಗೆ ಮೇಲೆ ಮತ್ತು ನರಗಳ ಅಭಿವೃದ್ಧಿ ಮೇಲೆ ದೀರ್ಘಾವಧಿಯ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಆಟಿಸಂ ಮತ್ತು ಎಡಿಎಚ್ಡಿ (ನಡತೆ, ಸ್ವ ನಿಯಂತ್ರಣ, ಏಕಾಗ್ರತೆ ಕೊರತೆಯಂತಹ ಸಮಸ್ಯೆ) ಸಮಸ್ಯೆ ಕಾಣಿಸಿಕೊಳ್ಳುತ್ತದೆ ತಿಳಿದುಬಂದಿದೆ.
.ಹೃದಯಾಘಾತ ತಗ್ಗಿಸುವಲ್ಲಿ ಮಧುಮೇಹ ನಿಯಂತ್ರಕ ಸೆಮಾಗ್ಲುಟೈಡ್ ಪರಿಣಾಮಕಾರಿ: ಅಧ್ಯಯನ.
ಈ ಹಿಂದೆ 5.8 ಲಕ್ಷ ತಾಯಂದಿರ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸಿ ಪ್ರಕಟವಾದ 200ಕ್ಕೂ ಹೆಚ್ಚು ವರದಿಗಳನ್ನು ಈ ಅಧ್ಯಯನಕ್ಕೆ ಬಳಸಿಕೊಂಡಾಗ, ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಎಷ್ಟು ಅಪಾಯದ್ದು ಎನ್ನುವುದು ತಿಳಿದುಬಂದಿದೆ.
.ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು? .
ಇದಕ್ಕೆ ಪರಿಹಾರ ಎಂದರೆ ಗರ್ಭ ಧರಿಸಿದ ದಿನದಿಂದ ನಿರಂತರ ವೈದ್ಯರ ತಪಾಸಣೆ, ಮಗುವಿನ ಬೆಳವಣಿಗೆ ಮೇಲೆ ನಿಗಾ ಇಡುವುದಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಸಂಶೋಧಕರು ಮುಂದಾಗಿದ್ದಾರೆ.
.ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ.ಸಂಗತ | ಮಧುಮೇಹ: ಮೂಡಲಿ ಜಾಗೃತಿ.ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?.COVID–19ಗೆ ಒಳಗಾದ ಮಕ್ಕಳಲ್ಲಿ ಟೈಪ್–1 ಮಧುಮೇಹ ಉಲ್ಬಣ ಸಾಧ್ಯತೆ ಹೆಚ್ಚು: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.