ಭಾರತವು ಉಷ್ಣವಲಯದಿಂದ ಕೂಡಿದ್ದು ಸೂರ್ಯನ ಬೆಳಕು ಹೇರಳವಾಗಿ ಕಂಡುಬಂದರೂ ಸಹ ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಪರೀಕ್ಷೆ ನಡೆಸಿದಾಗ ಎಲ್ಲಾ ವಯೋಮಾನದವರಲ್ಲೂ ಸಹ ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಕೊರತೆ ಇರುವುದು ತಿಳಿದುಬರುತ್ತಿದೆ. ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸುತ್ತಾರೆ.
.ಶೀತಗಾಳಿ: ಆರೋಗ್ಯ ಸಮಸ್ಯೆ ಹೆಚ್ಚಳ!.ಚಳಿಗಾಲದಲ್ಲಿ ‘ವಿಟಮಿನ್ ಡಿ’ ಕೊರತೆಗೆ ಕಾರಣವೇನು? ಹೆಚ್ಚಿಸಲು ಇಲ್ಲಿದೆ ಸಲಹೆ.
ಸಸ್ಯಾಹಾರಿಗಳೂ ಕೂಡ ಈ ಪೋಷಕಾಂಶ ದೊರೆಯುವ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ಅಣಬೆ, ಕಿತ್ತಳೆ, ಕಲ್ಲಂಗಡಿ, ಬಾಳೆಹಣ್ಣು, ಪೇರಳೆ, ನೆಲ್ಲಿಕಾಯಿ ಮತ್ತು ಪಪ್ಪಾಯಿಯಂತಹ ಹಣ್ಣುಗಳ ಮೂಲಕ ವಿಟಮಿನ್ ಡಿ ಅನ್ನು ಪಡೆಯಬಹುದು. ಬಾಳೆಹಣ್ಣು ಮೆಗ್ನೀಶಿಯಂನಿಂದ ಕೂಡಿದ್ದು, ದೇಹದಲ್ಲಿ ವಿಟಮಿನ್ ಡಿ ಸಕ್ರಿಯಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಊಟದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸವಿದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಗಳು ಚಿಕ್ಕ ಬಾಳೆಹಣ್ಣುಗಳನ್ನು ಸೇವಿಸುವುದು ಒಳಿತು. ಪ್ಯಾರಾಥೈರಾಯ್ಡ್ ಹಾರ್ಮೋನ್ ಅನ್ನು ನಿಯಂತ್ರಿಸಲು, ವಿಟಮಿನ್ ಡಿ ಅನ್ನು ಸಕ್ರಿಯಗೊಳಿಸಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಗ್ನೀಶಿಯಂ ಸಮೃದ್ಧ ಆಹಾರಗಳು ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳಿದರು.

ಶಿಶುಗಳಲ್ಲಿ ಮೂಳೆ ಬೆಳೆಯುವ ಹಂತದಲ್ಲಿರುತ್ತದೆ. ಮತ್ತು ವಯಸ್ಕರಲ್ಲಿ ಸ್ನಾಯು ಸೆಳೆತ ಜೊತೆಗೆ ಮೂಳೆ ಸವೆತದ ಸಮಸ್ಯೆಗಳು ಕಂಡುಬರುತ್ತದೆ. ಹೀಗಾಗಿ ಆಯಾ ವಯಸ್ಸಿನ ಹಂತಕ್ಕೆ ಅನುಗುಣವಾಗಿ ಅಗತ್ಯತೆಗಳು ವಿಭಿನ್ನವಾಗಿರುತ್ತವೆ. ವೃದ್ಧರಲ್ಲಿ ವಿಟಮಿನ್ ಡಿ ಕೊರತೆಯು ಕಡಿಮೆ ಕ್ಯಾಲ್ಸಿಯಂನಿಂದಾಗಿ ಮೂಳೆ ಬಾಗುವಿಕೆ ಮತ್ತು ದುರ್ಬಲ ಮೂಳೆ ರಚನೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹಣ್ಣುಗಳ ಮೂಲಕ ದೇಹಕ್ಕೆ ವಿಟಮಿನ್ ಡಿ ಅನ್ನು ಸೂಕ್ಷ್ಮ ಅಂಶಗಳಾಗಿ ಸೇರಿಸಬಹುದು. ಆದರೆ ಮಾಂಸಾಹಾರಿ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಮೀನು ಪ್ರಿಯರಲ್ಲಿ ಈ ಕೊರತೆ ಕಡಿಮೆಯಿರುತ್ತದೆ. ಏಕೆಂದರೆ ಮೀನು ಯಥೇಚ್ಚವಾದ ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಮಾಂಸ, ಕೋಳಿ ಮತ್ತು ಲಿವರ್ನಿಂದ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಡಿ ಲಭ್ಯವಿದ್ದು, ಹಾಲು, ಸೋಯಾ ಹಾಲಿನಂತಹ Fortified/ಫೋರ್ಟಿಫೈಡ್ ಆಹಾರಗಳಿಂದಲೂ ವಿಟಮಿನ್ ಡಿ ಅನ್ನು ಪಡೆಯಬಹುದು.

ವಿಟಮಿನ್ ಡಿ ಅನ್ನು ದೇಹಕ್ಕೆ ಪೂರೈಸಲು ಬೆಳಗಿನ ಸಮಯ ಕಾಫಿ ಬದಲಿಗೆ ಒಂದು ಚಿಟಿಕೆ ಅರಿಸಿನ, ಮೆಣಸು ಮತ್ತು ಬೆಲ್ಲವನ್ನು ಒಳಗೊಂಡಿರುವ ಅರಿಸಿನ ಹಾಲನ್ನು ಕುಡಿಯಬಹುದು. ಇದು ಕ್ಯಾಲ್ಸಿಯಂ ಸಮತೋಲನಕ್ಕೆ ಅಡ್ಡಿಪಡಿಸುವ ಕೆಫೀನ್ಗಿಂತ ಉತ್ತಮ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ಆರೋಗ್ಯಕ್ಕೆ ಪೂರಕವಾಗಿ ಅರಿಸಿನ ಮತ್ತು ಮೆಣಸು ಕಾರ್ಯನಿರ್ವಹಿಸುತ್ತದೆ. ಜೀರಿಗೆ ನೀರು, ಚಿಯಾ ಬೀಜದ ನೀರು, ಪುದೀನಾ ನೀರು ಅಥವಾ ಹಣ್ಣು-ಬೆರೆಸಿದ ಗ್ರೀನ್ ಟೀ ಸೇವನೆಯೊಂದಿಗೆ ದಿನವನ್ನು ಆರಂಭಿಸಬಹುದು. ಗ್ರೀನ್ ಟೀಯಲ್ಲಿರುವ ನಿಂಬೆ ಪದಾರ್ಥವು ಹೊಟ್ಟೆ ಭಾಗದಲ್ಲಿರುವ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಎನ್ನುತ್ತಾರೆ ತಜ್ಞರು.

ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದಲ್ಲಿ ವಿಟಮಿನ್ ಡಿ ಪಾತ್ರ

ಪ್ರತಿರಕ್ಷಣಾ ಕೋಶಗಳನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು, ಮಲ್ಟಿಪಲ್ ಸ್ಕ್ಲೆರೋಸಿಸ್, ಸಂಧಿವಾತ ಮತ್ತು ಕೆಲವು ಉಸಿರಾಟದ ಸೋಂಕುಗಳಂತಹ ಸ್ವಯಂ ನಿರೋಧಕ ಅಸ್ವಸ್ಥತೆಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಡಿ ಪಾತ್ರ ಹೆಚ್ಚಿದೆ. ವಿಟಮಿನ್ ಡಿ ಕೊರತೆಯು ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಲಿದೆ. ಅನೇಕ ಯುವ ವಯಸ್ಕರು ವಿಶೇಷವಾಗಿ ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುತ್ತಿರುವವರು ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ದಿನಕ್ಕೆ 5-10 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಮತ್ತು ಉಸಿರಾಟ ಹಾಗೂ ವಿಸರ್ಜನಾ ಕ್ರಿಯೆಗೆ ಸಹಕರಿಸುತ್ತದೆ ಎಂದು ಡಾ. ಸುನಿತಾ ತಿಳಿಸಿದರು.

ನಿಮ್ಮ ದೈನಂದಿನ ಆಹಾರ ಸೇವನೆಯ ಒಂದು ಭಾಗ ವಿಟಮಿನ್ ಡಿ ಯ ಸೂಕ್ಷ್ಮ ಪ್ರಮಾಣವನ್ನು ಹೊಂದಿರುವ ಹಣ್ಣಿನಿಂದ ಕೂಡಿರಬೇಕು. ಸಂಜೆ ಸಮಯ ಚಹಾದ ಬದಲಿಗೆ ಬಾದಾಮಿ ಹಾಲು ಅಥವಾ ಅರಿಸಿನ ಹಾಲನ್ನು ಸೇವಿಸುವುದು ಸೂಕ್ತ. ಹಾಲಿನ ಪದಾರ್ಥಗಳಿಂದ ಅಲರ್ಜಿ ಹೊಂದಿರದವರು ಚಪಾತಿ ಹಿಟ್ಟಿನಲ್ಲಿ ಹಾಲನ್ನು ಸೇರಿಸಿ ಅಥವಾ ಪ್ರೋಬಯಾಟಿಕ್ಸ್ ನೀಡುವ ಮಜ್ಜಿಗೆಯನ್ನು ಸೇವಿಸಬಹುದು ಎನ್ನುತ್ತಾರೆ ತಜ್ಞೆ ಡಾ. ಸುನಿತಾ.

ವಿಟಮಿನ್ ಡಿ ಕೊರತೆಯಿಂದಾಗುವ ಸಮಸ್ಯೆಗಳು

ದೇಹದಲ್ಲಿ ವಿಟಮಿನ್ ಡಿ ಮಟ್ಟ ತುಂಬಾ ಕಡಿಮೆಯಾದಾಗ ಮೂಳೆಗಳು ಸರಿಯಾಗಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೂಳೆಯ ಬಲ ಅಭಿವೃದ್ಧಿಯಾಗಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಲು ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಅತ್ಯಗತ್ಯ. ಬೆಳಗಿನ ಉಪಹಾರವನ್ನು ತ್ಯಜಿಸುವವರು ಒಂದು ಬಾಳೆಹಣ್ಣು, ಪೇರಳೆ ಅಥವಾ ಸೇಬು ಹಣ್ಣನ್ನು ಸೇವಿಸಬಹುದು ಎಂದು ಆಹಾರ ತಜ್ಞೆ ಡಾ. ಸುನಿತಾ ಸಲಹೆ ನೀಡಿದರು.

(ಲೇಖಕರು: ಡಾ. ಸುನಿತಾ, ಆಹಾರ ತಜ್ಞರು, ವಾಸವಿ ಆಸ್ಪತ್ರೆ ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.