ಶುಕ್ರವಾರ, ಮೇ 7, 2021
20 °C

ಲಸಿಕೆ ತೆಗೆದುಕೊಂಡವರು ಓದಲೇಬೇಕಿದು: ಏನಿದು ಪೆಲ್ಟ್ಸ್‌ಮನ್ ಪರಿಣಾಮ?

ಡಾ|| ಸ್ಮಿತಾ ಜೆ ಡಿ Updated:

ಅಕ್ಷರ ಗಾತ್ರ : | |

Representative image/Credit: Reuters Photo

ಕೋವಿಡ್-19 ಮಹಾಮಾರಿಯು ಪ್ರಪಂಚಕ್ಕೆ ಲಗ್ಗೆಯಿಟ್ಟು ಒಂದು ವರ್ಷ ಕಳೆದರೂ ಸಹ ಎರಡನೆಯ ಅಲೆ, ಮೂರನೆಯ ಅಲೆ ಎಂಬಂತೆ ಪ್ರಪಂಚವನ್ನು ಆವರಿಸುತ್ತಿದೆ. ಇದನ್ನು ತಹಬಂದಿಗೆ ತರಲು ಕೋವಿಡ್ ಲಸಿಕೆಯನ್ನು ಕಂಡುಹಿಡಿಯಲಾದರೂ ನಿರೀಕ್ಷಿತ ಪ್ರಮಾಣದಲ್ಲಿ ಈ ಮಾಹಾಮಾರಿಯನ್ನು ಹಿಡಿತಕ್ಕೆ ತರಲು ಹೆಣಗಾಡುವಂತಾಗಿದೆ. ಏನಿರಬಹುದು ಇದಕ್ಕೆ ಕಾರಣ ಎಂತಾದರೆ ಹೊಳೆಯುವುದು 'ಪೆಲ್ಟ್ಸ್‌ಮನ್ ಪರಿಣಾಮ' ( PELTZMAN EFFECT ).

ಏನಿದು ಪೆಲ್ಟ್ಸ್‌ಮನ್ ಪರಿಣಾಮ:

ಯಾವ ಒಂದು ಸನ್ನಿವೇಶದಲ್ಲಿ ಸಮಾಜವನ್ನು ಕಾಪಾಡಲು ಹರಸಾಹಸ ಮಾಡಿ ಕೋವಿಡ್ ಲಸಿಕೆಯನ್ನು ಆವಿಷ್ಕರಿಸಲಾಯಿತಾದರೂ ಅದನ್ನು ಪಡೆದ ಜನರು ತಾವು ಸುರಕ್ಷಿತ ಎಂಬ ತಪ್ಪು ಕಲ್ಪನೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳದೆ ಇನ್ನು ಹೆಚ್ಚಿನ ತೊಂದರೆಯನ್ನು ತಂದುಕೊಳ್ಳುವುದನ್ನು ಪೆಲ್ಟ್ಸ್‌ಮನ್ ಪರಿಣಾಮ ಎನ್ನಬಹುದಾಗಿದೆ.

ಇದರ ಪರಿಣಾಮವಾಗಿ ಜನರು ಹೋಟೆಲ್‌ಗಳಿಗೆ, ಮಾಲ್‌ಗಳಿಗೆ, ಪಿಕ್‌ನಿಕ್‌ಗಳಿಗೆ, ಪ್ರವಾಸಗಳಿಗೆ ತೆರಳುತ್ತಿರುವುದು ಅಪಾಯಕಾರಿಯಾಗಬಹುದಾಗಿದೆ. ಕೋವಿಡ್ ಲಸಿಕೆಯನ್ನು ತೆಗೆದುಕೊಂಡ ಬಳಿಕ ಅದು ಸಂಪೂರ್ಣವಾಗಿ ಈ ಸೋಂಕನ್ನು ತಡೆಯಲಾರದೆ ಹೋದರು ಸಹ ಅದರಿಂದಾಗುವ ಸಂಕೀರ್ಣತೆಗಳನ್ನು ಕಡಿಮೆ ಮಾಡಬಹುದಾಗಿದ್ದು. ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದೇ ಹೊರತು ಸೋಂಕು ಬರಲಾರದು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.

ಸಾಮಾನ್ಯವಾಗಿ ಈ ಪೆಲ್ಟ್ಸ್‌ಮನ್ ಪರಿಣಾಮವನ್ನು ಮುಂಚೂಣಿ ಕಾರ್ಯಕರ್ತರು ಹಾಗೂ ಆಸ್ಪತ್ರೆ ಸಿಬ್ಬಂದಿಯಲ್ಲಿ ಕಾಣಬಹುದಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಎಲ್ಲಾ ಮುಂಜಾಗರೂಕ ಕ್ರಮವನ್ನು ಅನುಸರಿಸುವುದು ಅಗತ್ಯ ಎಂಬುದನ್ನು ಮನಗೊಳ್ಳಬೇಕಾಗಿದೆ.

ಮಾಸ್ಕ್ ಧರಿಸದೇ ಇರುವುದು, ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಇರುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವುದು ಸೋಂಕಿನಿಂದ ಬಳಲುವಂತೆ ಮಾಡಬಹುದಾಗಿದೆ. ಹೆಚ್ಚು ಜನರು ಕೋವಿಡ್ ಲಸಿಕೆಯನ್ನು ಪಡೆದ ನಂತರ ಅದು ಹರ್ಡ್ ಇಮ್ಯೂನಿಟಿಗೆ ಕಾರಣವಾಗಬಹುದಾದರೂ ತೆಗೆದುಕೊಳ್ಳಬೇಕಾದ ಕೋವಿಡ್-19 ರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.

ಲಸಿಕೆಯನ್ನು ಪಡೆದರೂ ಸಹ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ರೋಗವನ್ನು ದೂರ ಇಡಲು ಅತ್ಯಂತ ಅವಶ್ಯಕ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು