ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟು ಬದಲಿಗೆ ಬಂದಿದೆ ಇ-ಸಿಗರೇಟು: ಇದು ಸುಡಲಿದೆ ನಿಮ್ಮ ದೇಹವನ್ನು

Published 30 ಮೇ 2023, 11:37 IST
Last Updated 30 ಮೇ 2023, 11:37 IST
ಅಕ್ಷರ ಗಾತ್ರ

ಮೇ. 31 ವಿಶ್ವ ತಂಬಾಕು ಮುಕ್ತ ದಿನ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಹರಡಲಿದೆ ಎಂಬುದು ಸಾಬೀತಾಗಿದ್ದರೂ ಇಂದಿನ ಯುವಜನರು ಹೆಚ್ಚಾಗಿ ಇದಕ್ಕೆ ವ್ಯಸನಿಗಳಾಗುತ್ತಿರುವುದು ವಿಪರ್ಯಾಸ. ಪ್ರಸ್ತುತ ವಿಶ್ವದಾದ್ಯಂತ 100 ಮಿಲಿಯನ್ ವಯಸ್ಕರು ಧೂಮಪಾನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಇ-ಸಿಗರೇಟ್‌ (ವ್ಯಾಪಿಂಗ್‌) ಹೆಚ್ಚು ಪ್ರಸ್ತುತಿಗೆ ಬಂದಿದ್ದು, ಇಂದಿನ ಯುವಕ-ಯುವತಿಯರು ಇದಕ್ಕೆ ಬಲಿಯಾಗುತ್ತಿದ್ದಾರೆ. 2.8 ಮಿಲಿಯನ್ ವಯಸ್ಕರು ವ್ಯಾಪಿಂಗ್‌ ಬಳಸುತ್ತಿದ್ದರೆ, 12.5 ಮಿಲಿಯನ್ನಷ್ಟು ವಯಸ್ಕರು ಹುಕ್ಕಾ ವ್ಯಸನಿಗಳಾಗಿದ್ದಾರೆ.

ಏನಿದು ಇ-ಸಿಗರೇಟು? ಇ-ಸಿಗರೇಟು ಅಥವಾ ವ್ಯಾಪಿಂಗ್‌ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಿಂದೆಲ್ಲಾ, ಹೊಗೆಸೊಪ್ಪು ತುಂಬಿದ ಸಿಗರೇಟು ಸೇವನೆ ಸಾಮಾನ್ಯವಾಗಿತ್ತು. ಕಾಲಬದಲಾದಂತೆ, ಸಿಗರೇಟಿನರ ರೂಪವೂ ಬದಲಾಗಿದೆ ವ್ಯಾಪಿಂಗ್‌ ಬಂದಿದೆ. ಪ್ರಾರಂಭದಲ್ಲಿ ವ್ಯಾಪಿಂಗ್‌ ಅಷ್ಟಾಗಿ ಆರೋಗ್ಯಕ್ಕೆ ಹಾನಿಯಲ್ಲ ಎನ್ನಲಾಗಿತ್ತು. ಆದರೆ, ಅದು ಸುಳ್ಳು. ವೇಪ್ ದ್ರವಗಳಲ್ಲಿಯೂ ನಿಕೋಟಿನ್ ಇರಲಿದೆ. ಇದು ನಮ್ಮ ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವ್ಯಸನಿಯಾಗಿದೆ. ಪ್ರತಿದಿನ ನಿರಂತರವಾಗಿ ವ್ಯಾಪಿಂಗ್ ಮಾಡುವುದರಿಂದ ನಿಕೋಟಿನ್ ಚಟ ಅಂಟಿಕೊಳ್ಳುವ ಅಪಾಯವಿದೆ.

ಧೂಮಪಾನದ ಹೊಗೆ ಕ್ಯಾನ್ಸರ್‌ಗೆ ಮಾರಕ: ಧೂಮಪಾನದ ಹೊಗೆಯು ಕಾರ್ಸಿನೋಜೆನ್‌ಗಳನ್ನು ಹೊಂದಿರುತ್ತದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಜೊತೆಗೆ, ಅಬ್ಸ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (COPD) ಅಪಾಯವೂ ಇದೆ. ಹೀಗಾಗಿ ದೀರ್ಘಕಾಲದ ಧೂಮಪಾನ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪುರುಷರಲ್ಲಿ ವೀರ್ಯಾಣು ಕುಂಟಿತವಾಗಬಹುದು: ಕೇವಲ ಕ್ಯಾನ್ಸರ್‌ ಅಷ್ಟೇ ಅಲ್ಲ, ಇದರಿಂದ ಪುರುಷರ ವೀರ್ಯಾಣು ಪ್ರಮಾಣವು ಕಡಿಮೆಯಾಗಬಹುದು. ಗುಣಮಟ್ಟದ ವೀರ್ಯಾಣು ಬಿಡುಗಡೆಯಾಗದೇ ಮಕ್ಕಳಾಗದೇ ಇರುವ ಸಮಸ್ಯೆ, ಪುರುಷ ಬಂಜೆತನ ಬರಬಹುದು. ಇನ್ನು, ಮಹಿಳೆಯರಿಗೂ ಧೂಮಪಾನ ಹೆಚ್ಚು ಅಪಾಯಕಾರಿ.

ಸಿಗರೇಟಿಗಿಂದ ಹುಕ್ಕಾ ಅಪಾಯಕಾರಿ

ಇಂದು ಸಾಕಷ್ಟು ಜನು ಹುಕ್ಕಾ ಎಂಬ ಫ್ಯಾಷನ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ನೋಡಲು ಆಕರ್ಷಿಕವಾಗಿ ಕಂಡರೂ, ಇದೂ ಸಹ ಹೊಗೆಯಿಂದ ಕೂಡಿದ ಧೂಮಪಾನದ ಮತ್ತೊಂದು ವಿಧ. ಹುಕ್ಕಾ ಹೊಗೆಯಲ್ಲೂ ನಿಕೋಟಿನ್, ಕಾರ್ಬನ್ ಮಾನಾಕ್ಸೈಡ್ ಸೇರಿಂದತೆ ಹಾನಿಕಾರಕ ರಾಸಾಯನಿಕವನ್ನು ಒಳಗೊಂಡಿರಲಿದೆ. ಸಿಗರೇಟಿಗೆ ಹೋಲಿಸಿದರೆ, ಹುಕ್ಕಾ ಹೊಗೆಯ ಪ್ರಮಾಣ ದ್ವಿಗುಣವಾಗಿರಲಿದ್ದು, ಇದು ಸೆಕೆಂಡರಿ ಸ್ಮೂಕರ್‌ಗೂ ಹೆಚ್ಚು ಅಪಾಯಕಾರಿ. ಹುಕ್ಕಾದಿಂದ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

ತಂಬಾಕು ತ್ಯಜಿಸಲು ಈ ಸಲಹೆ ಪಾಲಿಸಿ:

ತಂಬಾಕು ವ್ಯಸನಿಗಳಿಗೆ ತಂಬಾಕು ತ್ಯಜಿಸುವುದು ಅತ್ಯಂತ ಕಷ್ಟಕರ. ಆದರೆ, ಇದರ ಬಳಕೆ ಅವಶ್ಯಕವಾಗಿ ನಿಲ್ಲಿಸಬೇಕು. ಕೆಲವರಿಗೆ ಬಿಡಬೇಕು ಎಂದುಕೊಂಡರೂ ಅದು ಕಷ್ಟವೆ. ಹೀಗಾಗಿ ಕೆಲವು ಟಿಪ್ಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ರಮೇಣ ಇದನ್ನು ತ್ಯಜಿಸಬಹುದು.

*ಕುಟುಂಬದೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಿ: ಇದರಿಂದ ನಿಮ್ಮ ಕುಟುಂಬದವರು ನಿಮ್ಮ ಮೇಲೆ ಎಷ್ಟು ಅವಲಂಬಿತವಾಗಿದ್ದಾರೆ ಎಂಬುದು ಮನವರಿಯಾಗಲಿದೆ.

*ನಿಮ್ಮ ಜೊತೆ ತಂಬಾಕು ಸೇವನೆಗೆ ಇರುವ ಸ್ನೇಹಿತರಿಂದ ದೂರವಿರಿ

* ತಂಬಾಕು ಸೇವನೆ ಬದಲು, ಯಾವುದಾದರೊಂದು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಿ

* ತಂಬಾಕು ಬಿಡಲು ಇರುವ ಕೆಲವು ಚೂಯಿಂಗಂಗಳನ್ನು ಬಳಸಬಹುದು

* ನಿಮಗೆ ಇಷ್ಟವಾಗುವ ದೈಹಿಕ ಚಟುವಟಿಕೆ ಪ್ರಾರಂಭಿಸಿ: ಜಾಕಿಂಗ್‌, ವಾಕಿಂಗ್‌, ಸ್ವಿಮ್ಮಿಂಗ್‌, ಶೆಟ್ಟಲ್‌ ಸೇರಿದಂತೆ ಇತರೆ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ

* ಆಪ್ತಸಮಾಲೋಚನೆ ತೆಗೆದುಕೊಳ್ಳಿ

– ಡಾ. ಪದ್ಮ ಸುಂದರಂ, ಸಲಹೆಗಾರರು - ಪಲ್ಮನಾಲಜಿ & ಇಂಟರ್ವೆನ್ಷನಲ್ ಪಲ್ಮನಾಲಜಿ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT