ಔರಾದ್ (ಬೀದರ್ ಜಿಲ್ಲೆ): ಇ-ಸ್ವತ್ತು ಮಾಡಿಕೊಡಲು ಹಣ ನೀಡುವಂತೆ ಒತ್ತಾಯ ಮಾಡಿದ ಧೂಪತಮಹಗಾಂವ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅನಿತಾ ರಾಠೋಡ್ ₹12 ಸಾವಿರ ಹಣ ಪಡೆಯುವಾಗ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜೀರ್ಗಾ (ಬಿ) ಗ್ರಾಮದ ರಾಜಕುಮಾರ ಪಾಟೀಲ ಅವರು ತಮ್ಮ ನಿವೇಶನ ಸಂಖ್ಯೆ 5 ಹಾಗೂ 6ಕ್ಕೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದರು. ಇದಕ್ಕಾಗಿ ಪಿಡಿಒ ಅನಿತಾ ರಾಠೋಡ್ ಅವರು ಅವರ ಪತಿ ದಯಾನಂದ ರಾಠೋಡ್ ಮೂಲಕ ಹಣದ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.

ದೂರು ಆಧರಿಸಿ ಬುಧವಾರ ಧೂಪತಮಹಾಗಾಂವ್ ಪಂಚಾಯಿತಿ ಕಚೇರಿಗೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯಪ್ಪ ಹಾಗೂ ಸಿಬ್ಬಂದಿ ಅರ್ಜಿದಾರರಿಂದ ಹಣ ಪಡೆಯವ ವೇಳೆ ಪಿಡಿಒ ಅನಿತಾ ರಾಠೋಡ್ ಹಾಗೂ ಅವರ ಪತಿ ದಯಾನಂದ ರಾಠೋಡ್ ಅವರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.