13ನೇ ಜಾಗದ ಬಳಿ ವಿದ್ಯುತ್ ಮಾರ್ಗ ಹಾದು ಹೋಗಿತ್ತು. ಮೂರು ವಿದ್ಯುತ್ ಕಂಬಗಳಿದ್ದವು. ಆ ಜಾಗ ಕಿರು ಅಣೆಕಟ್ಟೆಯಿಂದ ಸುಮಾರು 15 ಮೀಟರ್ ದೂರದಲ್ಲಿದೆ. ಹಾಗಾಗಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಬಳಸಿ ನೆಲದಡಿಯ ಸಂಚರನೆ ತಿಳಿದು ನೆಲ ಅಗೆಯುವ ಕಾರ್ಯ ನಡೆಸಲಾಯಿತು. ‘ಈ ಜಾಗದಲ್ಲಿ ಜಿಪಿಆರ್ ಬಳಸಿದ್ದು ಅಲ್ಲಿ ನೆಲದಡಿಯ ಸಂಚರನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು. ಅಲ್ಲಿ ಅಗೆದರೂ ಯಾವುದೇ ಅಪಾಯ ಇಲ್ಲ ಎಂಬುದನ್ನು ಖಾತರಿಯಾದ ಬಳಿಕ ಕಾರ್ಯ ಆರಂಭಿಸಲಾಯಿತು. ಅಲ್ಲಿ ಮೃತದೇಹದ ಕುರುಹು ಸಿಕ್ಕಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.