ಮುಂಬೈ: ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಸಂಜೆ ಮುಂಬೈಗೆ ಮರಳಿದ್ದಾರೆ ಎಂದು ಶಿಂದೆ ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.

ನೂತನ ಸರ್ಕಾರ ರಚನೆಗೊಳ್ಳುತ್ತಿರುವುದರ ಬಗ್ಗೆ ಶಿಂದೆ ಅವರು ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಶುಕ್ರವಾರ ಶಿಂದೆ ಅವರು ತಮ್ಮ ಸ್ವಗ್ರಾಮ ಡಾರೆಗೆ ತೆರಳಿದ್ದರು. ಅಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು.

‘ಶಿಂದೆ ಅವರಿಗೆ ಜ್ವರ ಮತ್ತು ಗಂಟಲು ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ ಅವರು ಚೇತರಿಸಿಕೊಳ್ಳಲಿದ್ದು, ಭಾನುವಾರ ಮುಂಬೈಗೆ ಮರಳಲಿದ್ದಾರೆ’ ಎಂದು ಕುಟುಂಬದ ವೈದ್ಯರಾದ ಆರ್.ಎಮ್.ಪರ್ತೆ ಅವರು ಮಾಧ್ಯಮಗಳಿಗೆ ಹೇಳಿದ್ದರು.

ಹವಾಮಾನ ಬದಲಾವಣೆಯಿಂದ ಶನಿವಾರ ಶಿಂದೆ ಅವರಿಗೆ ಜ್ವರ ಕಾಣಿಸಕೊಂಡಿತ್ತು. ಈಗ ಚೇತರಿಕೊಂಡಿದ್ದು, ಇಂದು ಸಂಜೆ ಮುಂಬೈಗೆ ಮರಳಲಿದ್ದಾರೆ ಎಂದು ಶಿವಸೇನಾ(ಶಿಂದೆ ಬಣ) ಮೂಲಗಳು ತಿಳಿಸಿವೆ.

ಡಿಸೆಂಬರ್ 5ರ ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ರಾಜ್ಯ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಶನಿವಾರ ತಿಳಿಸಿದ್ದಾರೆ. ಅದಾಗ್ಯೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದನ್ನು ಮಹಾಯುತಿ ಮೈತ್ರಿಕೂಟ ಘೋಷಣೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.