ವಿಬಿ ಜಿ ರಾಮ್‌ಜಿ ಕಾಯ್ದೆಯು ಸಂವಿಧಾನ ವಿರೋಧಿ. ಈ ಕಾಯ್ದೆಯನ್ನು ಜಾರಿ ಮಾಡಲು ಸಂವಿಧಾನ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಇದು ಮನುವಾದಿ, ಮನುಸ್ಮೃತಿ ಪ್ರತೀಕವಾದ ಕಾಯ್ದೆ. ಬಡವರು, ಮಹಿಳೆಯರು, ದಲಿತರುಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುವ ಉದ್ದೇಶದ ಕಾಯ್ದೆಯಾಗಿದೆ. ಇದಕ್ಕೆ ರಾಮನ ಹೆಸರಿಟ್ಟು ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡತನ ಹೆಚ್ಚಾಗಿದೆ.
– ಶರತ್ ಬಚ್ಚೇಗೌಡ, ಕಾಂಗ್ರೆಸ್
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಒಂದೂ ಹೊಸ ಕಾರ್ಯಕ್ರಮ ಜಾರಿ ಮಾಡಿಲ್ಲ. ಮನಮೋಹನ್ ಸಿಂಗ್ ಅವರ ಕಾರ್ಯಕ್ರಮಗಳಿಗೆ ಬೇರೆ ಹೆಸರಿಟ್ಟು ತಮ್ಮದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನರೇಗಾ ಮೂಲಕ ಬಡವರನ್ನು ಮೇಲಕ್ಕೆತ್ತಲು ಮನಮೋಹನ್ ಸಿಂಗ್ ಪ್ರಯತ್ನಿ ಸಿದ್ದರು. ವಿಬಿ ಜಿ ರಾಮ್ ಜಿ ಮೂಲಕ ಬಿಜೆಪಿಯವರು ಬಡವರ ಹಕ್ಕನ್ನು ಕಸಿದುಕೊಂಡಿದ್ದಾರೆ
– ಬಸವರಾಜ ರಾಯರಡ್ಡಿ, ಕಾಂಗ್ರೆಸ್
ನರೇಗಾ ದೋಷ ಪೂರಿತ ಕಾಯ್ದೆಯಾಗಿತ್ತು. ಇದು ವ್ಯಾಪಕ ಭ್ರಷ್ಟಾಚಾರಕ್ಕೆ ಮೂಲವಾಗಿತ್ತು. ವಿಬಿ ಜಿರಾಮ್ ಜಿ ಕಾಯ್ದೆಯು ಎಲ್ಲ ಹಂತಗಳ ಭ್ರಷ್ಟಾಚಾರಕ್ಕೆಡಿವಾಣ ಹಾಕುತ್ತದೆ. ಗ್ರಾಮೀಣ ಮಟ್ಟದಲ್ಲಿ ಎಲ್ಲ ಅರ್ಹರಿಗೂ ಉದ್ಯೋಗ ದೊರಕುತ್ತದೆ. ಹಿಂದಿನಂತೆ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ದುಡ್ಡ ಹೊಡೆಯಲು ಆಗಲ್ಲ. ಇದು ಕಾಂಗ್ರೆಸ್‌ನ ಚಿಂತೆಗೆ ಕಾರಣ. ಈ ಕಾಯ್ದೆ ತಂದಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸುತ್ತೇನೆ.
– ಬಸನಗೌಡಪಾಟೀಲ ಯತ್ನಾಳ,ಬಿಜೆಪಿ ಉಚ್ಛಾಟಿತ ಶಾಸಕ
ನಮ್ಮದು ಹೇ ರಾಮ್ ಸಂಸ್ಕೃತಿ. ಜೀ ರಾಮ್ ಎಂದರೆ, ಅದೊಂದು ಗುಲಾಮಗಿರಿಯ ಪ್ರತೀಕದಂತೆ. ನಾವು ಹೇ ರಾಮ್ ಎನ್ನುವುವರು. ನಮ್ಮ ಶ್ರೀರಾಮ ಸೌಮ್ಯ, ಸೌಜನ್ಯದ ಮೂರ್ತಿ. ಮೊದಲು ಶ್ರೀ ರಾಮನಲ್ಲಿ ಆಯುಧ ಇರಲಿಲ್ಲ. ಹನುಮಂತನಲ್ಲಿಯೂ ಇರಲಿಲ್ಲ. ಈಗ ಸೌಜ್ಯನಮಯಿ ರಾಮನ ಕೈಯಲ್ಲಿಯೂ ಆಯುಧ ನೀಡಿದ್ದೀರಿ.