ಶಿವಮೊಗ್ಗ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ ಗಾಮ್ ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಜುನಾಥ್ ಇಲ್ಲಿನ ವಿಜಯನಗರದ ಮೂರನೇ ಕ್ರಾಸ್ ನಿವಾಸಿ. ಪತ್ನಿ ಪಲ್ಲವಿ ಹಾಗೂ ಎಂಟು ವರ್ಷದ ಪುತ್ರನೊಂದಿಗೆ ಏ.19ರಂದು ಕಾಶ್ಮೀರಕ್ಕೆ ತೆರಳಿದ್ದರು. ಪತ್ನಿ ಹಾಗೂ ಪುತ್ರ ಸುರಕ್ಷಿತವಾಗಿದ್ದಾರೆ.

ಪಲ್ಲವಿ ಮ್ಯಾಮ್ಕೋಸ್ ಬೀರೂರು ಶಾಖೆಯಲ್ಲಿ ಉದ್ಯೋಗಿ.

'ಜಮ್ಮು-ಕಾಶ್ಮೀರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಮಂಜುನಾಥ ಅವರ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ತರಲು ಪ್ರಯತ್ನ ಅರಂಭಿಸಲಿದ್ದೇವೆ' ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
.ಜಮ್ಮು & ಕಾಶ್ಮೀರ | ಭಯೋತ್ಪಾದಕ ದಾಳಿ: ಹಲವು ಮಂದಿ ಸಾವು; 20 ಜನರಿಗೆ ಗಾಯ.ನೈಗರ್ | ಮಸೀದಿ ಮೇಲೆ ಇಸ್ಲಾಮಿಸ್ಟ್ ಉಗ್ರರ ದಾಳಿ: 44 ಮಂದಿ ಸಾವು, ಹಲವರಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.