ಬೀಜಿಂಗ್: ಪಹಲ್ಗಾಮ್ ದಾಳಿಯ ನಂತರ ಭಾರತವು 1960ರ ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿ ಇಟ್ಟ ಬೆನ್ನಲ್ಲೇ ಪಾಕಿಸ್ತಾನದ ಸಾರ್ವಕಾಲಿಕ ಪಾಲುದಾರ ಚೀನಾ ದೇಶವು ಪಾಕಿಸ್ತಾನದ ಅಣೆಕಟ್ಟೆ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ ಘೋಷಣೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ಡಾರ್ ಬೀಜಿಂಗ್ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ ಹೊತ್ತಿನಲ್ಲೇ ಅಣೆಕಟ್ಟೆ ಕಾಮಗಾರಿ ವೇಗದ ನಿರ್ಧಾರ ಹೊರಬಿದ್ದಿದೆ.

ಚೀನಾ ಸರ್ಕಾರಿ ಒಡೆತನದ ಎನರ್ಜಿ ಎಂಜಿನಿಯರಿಂಗ್ ಕಾರ್ಪೊರೇಷನ್ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ 2019ರಿಂದ ಮೊಹಮ್ಮದ್ ಜಲ ವಿದ್ಯುತ್ ಯೋಜನೆ ಕಾಮಗಾರಿ ನಡೆಸುತ್ತಿದೆ. ಮುಂದಿನ ವರ್ಷ ಈ ಕಾಮಗಾರಿ ಮುಗಿಯಬೇಕಿದೆ.

ಅಣೆಕಟ್ಟೆಗೆ ಕಾಂಕ್ರೀಟ್ ಭರ್ತಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಇಲ್ಲಿನ ಸಿಸಿಟಿವಿ ವಾಹಿನಿಯು ಶನಿವಾರ ವರದಿ ಮಾಡಿದೆ. ಇದೊಂದು ಮೈಲಿಗಲ್ಲಿನ ನಿರ್ಮಾಣ ಕಾಮಗಾರಿ. ಪಾಕಿಸ್ತಾನದ ಈ ರಾಷ್ಟ್ರೀಯ ಜಲ ಯೋಜನೆಯು ಅಲ್ಲಿನ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದು ಹಾಂಗ್ಕಾಂಗ್ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

800 ಮೆಗಾ ವಾಟ್ ವಿದ್ಯುತ್ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಾಗಿ ಪಾಕಿಸ್ತಾನ ಈ ಅಣೆಕಟ್ಟೆ ವಿನ್ಯಾಸಗೊಳಿಸಿದೆ. ಸಿಂಧೂ ನದಿ ಒಪ್ಪಂದದಂತೆ ಸಿಂಧೂ, ಝೇಲಂ, ಚೆನಾಬ್ ನದಿಗಳ ನೀರನ್ನು ಪಾಕಿಸ್ತಾನ ಪಡೆಯಬಹುದು. ರಾವಿ, ಸಟ್ಲೆಜ್ ಮತ್ತು ಬಿಯಾಸ್ ನದಿ ನೀರನ್ನು ಭಾರತ ಬಳಸಬಹುದು.

ಈ ನದಿಗಳ ನೀರು ಪಾಕಿಸ್ತಾನದ ಶೇಕಡಾ 80ರಷ್ಟು ಕುಡಿಯುವ ಮತ್ತು ನೀರಾವರಿ ಅಗತ್ಯವನ್ನು ಪೂರೈಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.