ನವದೆಹಲಿ: ಟಿಬೆಟ್ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ‘ಗ್ರ್ಯಾಮಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಆಡಿಯೊ ಪುಸ್ತಕ, ನಿರೂಪಣೆ ಹಾಗೂ ಕಥೆ ಹೇಳುವಿಕೆ, ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ‘ಗ್ರ್ಯಾಮಿ’ಯನ್ನು ಗುರುತಿಸಲಾಗಿದೆ.

ಲಾಸ್ ಏಂಜಲೀಸ್ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಎಂಬ ಆಡಿಯೊ ಬುಕ್ಗಾಗಿ ಪ್ರಶಸ್ತಿ ಘೋಷಣೆ ಮಾಡಲಾಯಿತು.

ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ದಲೈ ಲಾಮಾ, ‘ಇದು ವೈಯಕ್ತಿಕ ಸಾಧನೆಯಲ್ಲ, ಜಾಗತಿಕ ಹೊಣೆಗಾರಿಕೆ ಹಾಗೂ ಸಹಾನುಭೂತಿಗೆ ಸಂದ ಮನ್ನಣೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಈ ಪ್ರಶಸ್ತಿಯನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಶಾಂತಿ, ಸಹಾನುಭೂತಿ, ಪರಿಸರ ಬಗ್ಗೆ ಕಾಳಜಿ, ಮಾನವೀಯತೆಯ ಏಕತೆ ಮತ್ತು ಎಂಟು ಶತಕೋಟಿ ಜನರ ಯೋಗಕ್ಷೇಮ ಅತ್ಯಗತ್ಯ ಎಂದು ನಾನು ನಂಬಿಕೊಂಡಿದ್ದೇನೆ. ಈ ಸಂದೇಶವನ್ನು ಇನ್ನಷ್ಟು ಪಸರಿಸಲು ಗ್ರ್ಯಾಮಿ ಪ್ರಶಸ್ತಿ ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.

ನೇರಳೆ ಬಣ್ಣದ ನಿಲುವಂಗಿ, ದೊಡ್ಡದಾದ ಕನ್ನಡಕ ಮತ್ತು ಸಾಮಾನ್ಯ ಚಪ್ಪಲಿ ಧರಿಸುವ ದಲೈ ಲಾಮಾ ಜಾಗತಿಕ ಸೆಲಬ್ರಿಟಿಗಳಿಂದ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

1959ರಲ್ಲಿ ಚೀನಾ ಸೇನೆಯ ಅತಿಕ್ರಮಣದಿಂದ ಜೀವಭಯಕ್ಕೆ ಒಳಗಾಗಿ ತನ್ನ 23ನೇ ವಯಸ್ಸಿಗೆ ಟಿಬೆಟ್ನ ರಾಜಧಾನಿ ಲಹಸಾದಿಂದ ದಲೈಲಾಮಾ ಅವರು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು. ಅಲ್ಲಿಂದ ಅವರು ಮರಳಿ ತನ್ನ ದೇಶಕ್ಕೆ ತೆರಳಿಲ್ಲ.

ಲಾಮಾಗೆ ಪ್ರಶಸ್ತಿ: ಚೀನಾ ಆಕ್ಷೇಪ

ಬೀಜಿಂಗ್ : ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿದ್ದನ್ನು ಚೀನಾ ಖಂಡಿಸಿದೆ. ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಲಿನ್ ಜಿಯಾನ್ ‘ಧರ್ಮದ ಹೆಸರಿನಲ್ಲಿ ದಲೈಲಾಮಾ ಅವರು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಮಾ ಅವರು ಸಂಪೂರ್ಣ ಧಾರ್ಮಿಕ ವ್ಯಕ್ತಿಯಲ್ಲ’ ಎಂದು ಹೇಳಿದ್ದಾರೆ. ‘ದಲೈ ಲಾಮಾ ಅವರು ಚೀನಾ ವಿರೋಧಿ ಚಟುವಟಿಕೆಗಳಿಗೆ ಮಾನ್ಯತೆ ನೀಡುವುದನ್ನು ವಿರೋಧಿಸುತ್ತೇವೆ’ ಎಂದು ಜಿಯಾನ್ ಹೇಳಿದ್ದಾರೆ.
.ಭಾರತದಲ್ಲಿ ಟಿಬೆಟ್ ಪರಂಪರೆ ಜೀವಂತ: ದಲೈ ಲಾಮಾ .ಬೌದ್ಧ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡುವಂತೆ ಬಿಜೆಪಿ ಸಂಸದ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.