ಸೋಲ್: ಉತ್ತರ ಕೊರಿಯಾ, ಹೆಚ್ಚುವರಿಯಾಗಿ 3,000 ಯೋಧರನ್ನು ಈ ವರ್ಷ ರಷ್ಯಾಗೆ ಕಳುಹಿಸಿದೆ. ಹಾಗೆಯೇ, ಉಕ್ರೇನ್ ವಿರುದ್ಧ ಹೋರಾಟ ನಡೆಸಲು ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನೂ ಮುಂದುವರಿಸಿದೆ ಎಂದು ದಕ್ಷಿಣ ಕೊರಿಯಾ ಗುರುವಾರ ಆರೋಪಿಸಿದೆ.

ರಷ್ಯಾ ಸೇನೆ, 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಾಗಿನಿಂದ, ಉತ್ತರ ಕೊರಿಯಾ ಹಾಗೂ ರಷ್ಯಾ ಮತ್ತಷ್ಟು ಹತ್ತಿರವಾಗಿವೆ ಎಂದೂ ದೂರಿದೆ.

ಸೈನಿಕರ ನಿಯೋಜನೆ ಬಗ್ಗೆ ರಷ್ಯಾ ಆಗಲೀ, ಪ್ಯಾಂಗಾಂಗ್ ಆಗಲೀ ದೃಢಪಡಿಸಿಲ್ಲ. ಆದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉತ್ತರ ಕೊರಿಯಾಗೆ ಅಪರೂಪದ ಭೇಟಿ ನೀಡಿದ ಸಂದರ್ಭದಲ್ಲಿ, ಪರಸ್ಪರ ರಕ್ಷಣಾ ಸಹಕಾರ ಸೇರಿದಂತೆ ಮಿಲಿಟರಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ್ದವು.

'ರಷ್ಯಾ ಸೇನೆಯ ಬಲ ಹೆಚ್ಚಿಸುವ ಸಲುವಾಗಿ ಉತ್ತರ ಕೊರಿಯಾ, 2025ರ ಜನವರಿಯಿಂದ ಫೆಬ್ರುವರಿ ನಡುವೆ ಸುಮಾರು 3,000 ಯೋಧರನ್ನು ಕಳುಹಿಸಿದೆ ಎಂದು ಅಂದಾಜಿಸಲಾಗಿದೆ' ಎಂದಿರುವ ದಕ್ಷಿಣ ಕೊರಿಯಾ ಸೇನೆ ಜಂಟಿ ಮುಖ್ಯಸ್ಥರು, 'ಕ್ಷಿಪಣಿಗಳು, ಫಿರಂಗಿಗಳು ಮತ್ತು ಮದ್ದುಗುಂಡುಗಳನ್ನು ಪೂರೈಸುವುದನ್ನು ಮುಂದುವರೆಸಿದೆ' ಎಂದು ಕಿಡಿಕಾರಿದ್ದಾರೆ.

ರಷ್ಯಾಗೆ ಈವರೆಗೆ ಉತ್ತರ ಕೊರಿಯಾ ಕಳುಹಿಸಿರುವ 11,000 ಯೋಧರಲ್ಲಿ 4,000 ಮಂದಿ ಹತ್ಯೆಯಾಗಿದ್ದಾರೆ ಎಂದು ಅಂದಾಜಿಸಿರುವುದಾಗಿಯೂ ಹೇಳಿದ್ದಾರೆ.
.ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ ಉ.ಕೊರಿಯಾ: ಖುದ್ದು ಮೇಲ್ವಿಚಾರಣೆ ನಡೆಸಿದ ಕಿಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.