ಕೇಪ್ ಕೆನವರೆಲ್: ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಸಿಲುಕಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಲೋರ್ ಅವರು 4 ಗಗನಯಾನಿಗಳೊಂದಿಗೆ ನಿಗದಿಯಂತೆ ಬುಧವಾರ ನಸುಕಿನ ಜಾವ 3.27ಕ್ಕೆ (ಭಾರತೀಯ ಕಾಲಮಾನ) ವೇಳೆಗೆ ಅಮೆರಿಕದ ಫ್ಲೋರಿಡಾದಲ್ಲಿ ಬಂದಿಳಿದಿದ್ದಾರೆ.

ಬುಧವಾರ ಬೆಳಗಿನ ಜಾವ 3.27ಕ್ಕೆ ಫ್ಲೋರಿಡಾ ಸಮುದ್ರದ ಮೇಲೆ ಪ್ಯಾರಾಚೂಟ್ನಲ್ಲಿ ಬಂದಿಳಿದಿದ್ದಾರೆ. ಅದರ ವಿಡಿಯೊಗಳನ್ನು ಸ್ಪೇಸ್ ಎಕ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಸುನಿತಾ ವಿಲಿಯಮ್ಸ್, ಬುಚ್ ವಿಲ್ಲೋರ್, ರಷ್ಯಾದ ಅಲೆಕಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಹೊತ್ತ ಸ್ಟೇಸ್ಎಕ್ಸ್ನ ಕ್ಯೂ ಡ್ರಾಗನ್ ನೌಕೆ ಭಾರತೀಯ ಕಾಲಮಾನ ಮಂಗಳವಾರ 10 ಗಂಟೆ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಬೇರ್ಪಟ್ಟು ಭೂಮಿಯತ್ತ ಪ್ರಯಾಣ ಬೆಳೆಸಿತ್ತು. ಬರೋಬ್ಬರಿ 17 ಗಂಟೆಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.
.9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ: ಸುರಕ್ಷಿತವಾಗಿ ಭುವಿಗಿಳಿದ ಸುನಿತಾ, ಬುಚ್.ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ಫೋಟೊಗೆ ಪೋಸ್ ಕೊಟ್ಟ ಸುನಿತಾ, ಬುಚ್.
ಹೊಸ ದಾಖಲೆ: 8 ದಿನಗಳ ತುರ್ತು ಕೆಲಸಕ್ಕೆಂದು ಕಳೆದ ವರ್ಷ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನಿತಾ ಮತ್ತು ಬುಚ್ ಭೂಮಿಗೆ ಮರಳಲು ಸೂಕ್ತ ನೌಕೆಯ ಕೊರತೆಯಿಂದಾಗಿ 9 ತಿಂಗಳು ಬಾಹ್ಯಾಕಾಶದಲ್ಲಿಯೇ ಉಳಿದಿದ್ದರು. ಈ ಅವಧಿಯಲ್ಲಿ ಸುನಿತಾ ಅವರು ಒಟ್ಟು 62 ಗಂಟೆಗಳ ಅವಧಿಯಷ್ಟು ಬಾಹ್ಯಾಕಾಶ ನಡಿಗೆ ಮಾಡಿ ಹಲವು ದುರಸ್ತಿ ಕಾರ್ಯ ಮಾಡಿದ್ದರು. ಈ ಮೂಲಕ ಅತ್ಯಂತ ಹೆಚ್ಚಿನ ಅವಧಿಯ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳೆ ಎಂಬ ದಾಖಲೆಗೂ ಸುನಿತಾ ಪಾತ್ರರಾಗಿದ್ದಾರೆ.
. 3ನೇ ಅಂತರಿಕ್ಷಯಾನ ಆರಂಭಿಸಿದ ಸುನಿತಾ ವಿಲಿಯಮ್ಸ್.ಇಲಾನ್ ಮಸ್ಕ್–ಟ್ರಂಪ್ ಮಾತುಕತೆ: ಸುನಿತಾ, ವಿಲ್ಮೋರ್ ಶೀಘ್ರವೇ ಭೂಮಿಗೆ ವಾಪಸ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.