ಬೆಕ್ಕಣ್ಣ ಕಳೆದ ವರ್ಷದಿಂದ ಹಲವು ಬಗೆಯ ಕೋಡಿಂಗ್, ಡೇಟಾ ಅನಾಲಿಸಿಸ್ ಕಲಿಯುತ್ತಿತ್ತು.

‘ಏನು ಕಲೀತ ಇದ್ದೀಯ’ ಎಂದು ಕೇಳಿದರೆ, ‘ಕೆಲಸ ಸಿಕ್ಕು ಸಾಧನೆ ಮಾಡಿದ ಮೇಲೆ ಹೇಳತೀನಿ’ ಎಂದು ಮುಗುಮ್ಮಾಗಿ ಹೇಳುತ್ತಿತ್ತು.

ಮೊನ್ನೆಯಿಂದ ಲ್ಯಾಪ್ಟಾಪ್ ಮುಟ್ಟದೇ ಹ್ಯಾಪುಮೋರೆ ಮಾಡಿ ಕೂತಿತ್ತು. ‘ಏನಾತಲೇ… ಎದಕ್ಕೆ ಬೇಜಾರಾಗೈತೆ?’ ಎಂದು ಕಾಳಜಿಯಿಂದ ಕೇಳಿದೆ.

‘ಯಾವುದಾರ ಐ.ಟಿ ಕಂಪನಿ ಸೇರಿ, ಎಚ್–1ಬಿ ವೀಸಾದಡಿ ಅಮೆರಿಕಕ್ಕೆ ಹೋಗೂಣು ಅಂತ ಹೋದವರ್ಸದಿಂದ ತಯಾರಿ ನಡೆಸಿದ್ದೆ. ಹೊಸದಾಗಿ ಎಚ್–1ಬಿ ವೀಸಾದಡಿ ಬರೋವ್ರಿಗೆ ಟ್ರಂಪಣ್ಣ ತೊಂಬತ್ತು ಲಕ್ಷ ರೂಪಾಯಿ ಶುಲ್ಕ ವಸೂಲು ಮಾಡ್ತಾನಂತೆ. ನನ್ನ ಕನಸೆಲ್ಲ ಠುಸ್ ಅಂತು’ ಎಂದು ಬೆಕ್ಕಣ್ಣ ನಿಟ್ಟುಸಿರು ಬಿಟ್ಟಿತು.

‘ಮೋದಿ ಮಾಮಾ–ಟ್ರಂಪಣ್ಣ ಭಾಯಿ ಭಾಯಿ ಅಂತ ಕುಣಿತಿದ್ಯಲ್ಲ ಮತ್ತೆ’ ಎಂದು ಛೇಡಿಸಿದೆ.

‘ಭಾಯಿ ಭಾಯಿ ಇದ್ದವರು ಅವಗಾವಾಗ ಬಾಯ್–ಬಾಯ್ ಅಂತಾರೆ! ಅಷ್ಟಕೊಂದು ವರ್ಸ ಕಾಂಗಿಗಳು ನಮ್ ದೇಶ ಆಳಿದ್ರಲ್ಲ… ಅವರಿಂದಾಗಿನೇ ಇಂಥಾ ಪರಿಸ್ಥಿತಿ ಬಂದಿದ್ದು’ ಎಂದು ಬೆಕ್ಕಣ್ಣ ಗುರುಗುಟ್ಟಿತು.

‘ಅಲ್ಲಲೇ… ಟ್ರಂಪಣ್ಣನ ಇಂದಿನ ಕಿತಾಪತಿಗಳಿಗೂ ಅಂದಿನ ಕಾಂಗಿಗಳನ್ನು ಹೊಣೆ ಮಾಡಿದ್ರೆ ಹೆಂಗೆ?’
ಎಂದು ಬೆಕ್ಕಣ್ಣನನ್ನು ಪ್ರಶ್ನಿಸಿದೆ.

‘ಸ್ವಾತಂತ್ರ್ಯ ಸಿಕ್ಕ ಕೂಡ್ಲೇ ಜಾಗತೀಕರಣ ಮಾಡಿ, ಆವಾಗೇ ಮೇಕ್ ಇನ್ ಇಂಡಿಯಾ ಘೋಷಣೆ ಮಾಡಬೇಕಿತ್ತು. ಇಷ್ಟೊತ್ತಿಗೆ ನಾವು ಅಗದಿ ಭಯಂಕರ ಆತ್ಮನಿರ್ಭರ ಆಗತಿದ್ದೆವು’ ಎಂದು ಅಲವತ್ತುಕೊಂಡಿತು.

‘ಮೋದಿ ಮಾಮಾರು ಬಂದು ಹದಿನಾಕು ವರ್ಸದ ಮ್ಯಾಲೆ ಆತಲ್ಲ… ಹಂಗಾರೆ ಆತ್ಮನಿರ್ಭರ ಆಗಬೇಕಿತ್ತಲ್ಲವಾ?’

‘ಅದಕ್ಕೆ ಕನಿಷ್ಠ ಕಾಲು ಶತಮಾನವಾದ್ರೂ ಬೇಕು! ಇನ್ನೊಂದು ಹತ್ ವರ್ಷ ಮೋದಿ ಮಾಮಾರೇ ಪ್ರಧಾನಿಯಾಗಿ ಮುಂದುವರಿಬೇಕು. ಆವಾಗ ಅಮೆರಿಕದ ಐ.ಟಿ ಮಂದಿನೇ ನೀವು ಹೇಳಿದಷ್ಟು ಶುಲ್ಕ ತುಂಬತೀವಿ, ನಿಮ್ಮ ದೇಶದಲ್ಲಿ ಕೆಲಸ ಮಾಡಕ್ಕೆ ವೀಸಾ ಕೊಡ್ರೀ ಅಂತ ಕ್ಯೂ ನಿಂದರತಾರೆ!’ ಬೆಕ್ಕಣ್ಣ ಹೊಸ ಕನಸಿಗೆ ಜಾರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.