ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಭಾರತದ ಆಟಗಾರರ ಸಾಧನೆ ಕ್ರೀಡಾಪ್ರಿಯರ ಸಹಜ ಸಂಭ್ರಮಕ್ಕೆ ಕಾರಣವಾಗಬೇಕಿತ್ತು. ಆದರೆ, ಉಭಯ ದೇಶಗಳ ನಡುವಣ ಸಂಘರ್ಷವನ್ನು ಆಟಗಾರರು ಕ್ರೀಡಾಂಗಣಕ್ಕೆ ತರುವ ಮೂಲಕ ‘ಸಜ್ಜನರ ಆಟ’ ಎಂದು ಹೆಸರಾದ ಕ್ರಿಕೆಟ್ನ ಘನತೆಗೆ ಹಾಗೂ ಕ್ರೀಡಾಸ್ಫೂರ್ತಿಗೆ ಮಸಿ ಬಳಿದಿದ್ದಾರೆ. ಆಟದಲ್ಲಿ ಗೆಲುವು ಸಾಧಿಸಿದರೂ, ಕ್ರೀಡಾಸ್ಫೂರ್ತಿ ನೇಪಥ್ಯಕ್ಕೆ ಸರಿದಿರುವುದು, ‘ಶಸ್ತ್ರಚಿಕಿತ್ಸೆ ಯಶಸ್ವಿ, ರೋಗಿಯ ಸಾವು’ ಎನ್ನುವ ಮಾತನ್ನು ನೆನಪಿಸುವಂತಿದೆ. ಪಂದ್ಯಾವಳಿಯ ಆರಂಭದಿಂದಲೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡವಳಿಕೆಯನ್ನು ಎರಡೂ ತಂಡಗಳ ಆಟಗಾರರು ಪೈಪೋಟಿಗೆ ಬಿದ್ದವರಂತೆ ಪ್ರದರ್ಶಿಸಿದ್ದಾರೆ. ಪಾಕಿಸ್ತಾನದ ಬ್ಯಾಟ್ಸ್ಮನ್ ಸಾಹಿಬ್ಜಾದಾ ಫರ್ಹಾನ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬ್ಯಾಟನ್ನು ಎಕೆ–47 ರೀತಿಯಲ್ಲಿ ಹಿಡಿದು ಗುಂಡಿನ ಮೊರೆತಗೈಯು
ವಂತಹ ಸಂಜ್ಞೆ ಮಾಡಿದರು. ಮತ್ತೊಬ್ಬ ಆಟಗಾರ ಹ್ಯಾರಿಸ್ ರವೂಫ್, ‘ಆರು’ ಹಾಗೂ ‘ಸೊನ್ನೆ’ ಎಂದು ಬೆರಳುಗಳಿಂದ ಇಶಾರೆ ಮಾಡಿದರು. ಅವರ ಇಶಾರೆ, ಆಪರೇಷನ್ ಸಿಂಧೂರ ಸಂಘರ್ಷದಲ್ಲಿ ಭಾರತದ ಆರು ವಿಮಾನಗಳನ್ನು ನಾಶಗೊಳಿಸಿದ್ದೇವೆ ಎನ್ನುವ ಪಾಕಿಸ್ತಾನದ ಹೇಳಿಕೆಯನ್ನು ಸೂಚಿಸುವಂತಿತ್ತು. ಇದೇ ರವೂಫ್ ಫೈನಲ್ನಲ್ಲಿ ಔಟಾದಾಗ ಭಾರತದ ಜಸ್ಪ್ರೀತ್ ಬೂಮ್ರಾ ವಿಮಾನ ಪತನದ ಚಿಹ್ನೆಯನ್ನು ಬೆರಳುಗಳಿಂದ ಪ್ರದರ್ಶಿಸಿದರು. ಆಟದ ಮೂಲಕ ಗಮನಸೆಳೆಯಬೇಕಾದ ಆಟಗಾರರು ಚೇಷ್ಟೆಗಳ ಮೂಲಕ ಸುದ್ದಿಯಾಗುವುದು ದುರದೃಷ್ಟಕರ.
.ಸಂಪಾದಕೀಯ Podcast: ಮಂಗಳವಾರ, 30 ಸೆಪ್ಟೆಂಬರ್ 2025.
ಆಟದ ಹೊರತಾದ ಕಾರಣ ಗಳಿಂದಾಗಿ ಕ್ರಿಕೆಟಿಗರು ಸುದ್ದಿಯಲ್ಲಿ ಇರುವುದು ಆಯಾ ದೇಶಗಳ ಸರ್ಕಾರ ಗಳಿಗೆ ಕಳವಳ ಹುಟ್ಟಿಸಬೇಕಾಗಿತ್ತು. ಆದರೆ, ಆಟಗಾರರ ಮುಖವಾಡ ತೊಟ್ಟು ರಾಜಕೀಯ ಮುಖಂಡರೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರುವಂತಿದೆ. ವಿಷಾದದ ಸಂಗತಿಯೆಂದರೆ, ಆಟಗಾರರ ವರ್ತನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಸಮರ್ಥಿಸಿ ಕೊಂಡಿದ್ದಾರೆ. ಆಟಗಾರರನ್ನು ಅಭಿನಂದಿಸಿರುವ ಅವರು, ‘ಆಪರೇಷನ್ ಸಿಂಧೂರ’ ಮೈದಾನದಲ್ಲೂ ಮುಂದು ವರಿದಿದೆ; ಭಾರತದ ಗೆಲುವಿನ ಮೂಲಕ ಫಲಿತಾಂಶ ಪುನರಾವರ್ತನೆಗೊಂಡಿದೆ ಎಂದು ಹೇಳಿದ್ದಾರೆ. ಜಸ್ಪ್ರೀತ್ ಬೂಮ್ರಾ ಅವರ ಅನುಚಿತ ವರ್ತನೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಪಾಕಿಸ್ತಾನಕ್ಕಾದ ಶಿಕ್ಷೆಯ ರೂಪದಲ್ಲಿ ಕಾಣಿಸಿದೆ. ಪ್ರಧಾನಿ ಮತ್ತು ಸಚಿವರ ಅಭಿಪ್ರಾಯಗಳು, ಆಟದ ಜೊತೆಗೆ ರಾಜಕಾರಣವನ್ನು ಬೆರೆಸುವ ಪ್ರಯತ್ನದಂತಿವೆ. ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಯಾವ ರೀತಿಯ ಸಂಬಂಧವೂ ಬೇಡ ಎನ್ನುವುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದ್ದಲ್ಲಿ, ಏಷ್ಯಾ ಕಪ್ ಪಂದ್ಯಾವಳಿ ಯಲ್ಲಿ ಭಾಗವಹಿಸದಿರುವಂತೆ ಬಿಸಿಸಿಐಗೆ ಸೂಚಿಸಬಹುದಿತ್ತು. ಆಡಲು ಅವಕಾಶ ಕಲ್ಪಿಸಿಕೊಟ್ಟ ಮೇಲೆ ಆಟದ ಚೌಕಟ್ಟಿಗೆ ಬದ್ಧವಾಗಿರುವುದು ಹಾಗೂ ಕ್ರೀಡಾಸ್ಫೂರ್ತಿಯಿಂದ ವರ್ತಿಸು ವುದು ಅಗತ್ಯ. ಪಾಕಿಸ್ತಾನದ ಸಚಿವರಾದ ಮೊಹ್ಸಿನ್ ನಕ್ವಿ ಅವರು ಅಧ್ಯಕ್ಷರಾಗಿರುವಏಷ್ಯಾ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿದ ಕ್ಷಣವೇ, ಅವರೊಂದಿಗೆ ತಾಂತ್ರಿಕವಾಗಿ ಹಸ್ತಲಾಘವ ಮಾಡಿದಂತಾಗಿದೆ. ನಂತರದ ನಡವಳಿಕೆಗಳು ಅಪ್ರಬುದ್ಧವಾಗಿವೆ. ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿರುವ ಭಾರತ ತಂಡದ ನಿರ್ಧಾರವೂ ಆಟದ ಅಂಗಳದಲ್ಲಿ ರಾಜಕೀಯದ ಜಿದ್ದನ್ನು ಪ್ರದರ್ಶಿಸುವ ಹಾಗೂ ಕ್ರೀಡೆಯ ಉತ್ಸಾಹವನ್ನು ಕುಗ್ಗಿಸುವ ನಡವಳಿಕೆಯಾಗಿದೆ. ಕ್ರಿಕೆಟ್ ಪಂದ್ಯದ ಗೆಲುವನ್ನು ಆಪರೇಷನ್ ಸಿಂಧೂರದ ಜೊತೆಗೆ ಸಮೀಕರಿಸಿರುವ ಮೋದಿ ಅವರ ಮಾತಿಗೆ, ಕ್ರೀಡೆಯಲ್ಲಿ ಯುದ್ಧವನ್ನು ಎಳೆದುತರುವುದು ನಿಮ್ಮ ಹತಾಶೆಯನ್ನು ಬಹಿರಂಗಪಡಿಸುತ್ತದೆ ಎಂದು ಮೊಹ್ಸಿನ್ ಪ್ರತಿಕ್ರಿಯಿಸಿದ್ದಾರೆ. ಯುದ್ಧವು ನಿಮ್ಮ ಹೆಮ್ಮೆಯ ಸಂಕೇತವಾಗಿದ್ದರೆ, ಪಾಕಿಸ್ತಾನದಿಂದ ನೀವು ಅನುಭವಿಸಿದ ಅವಮಾನಕರ ಸೋಲುಗಳನ್ನು ಇತಿಹಾಸವು ಈಗಾಗಲೇ ದಾಖಲಿಸಿದೆ ಎಂದೂ ಹೇಳಿದ್ದಾರೆ. ಮೊಹ್ಸಿನ್ ಅವರ ಪ್ರತಿಕ್ರಿಯೆಯಲ್ಲೂ ಹತಾಶೆಯಿದೆ, ಕ್ರೀಡೆಯೊಂದಿಗೆ ರಾಜಕಾರಣವನ್ನು ತಳಕು ಹಾಕುವ ಪ್ರಯತ್ನವಿದೆ. ತಮ್ಮ ತಂಡದ ಆಟಗಾರರ ಅನುಚಿತ ವರ್ತನೆಯನ್ನು ಖಂಡಿಸದೆ, ಎದುರಾಳಿ ತಂಡದ ತಪ್ಪುಗಳ ಬಗ್ಗೆ ಮಾತನಾಡುವುದೂ ಕೆಟ್ಟ ಮಾದರಿಯ ರಾಜಕಾರಣವೇ ಆಗಿದೆ.

ಭಾರತದ ಆಟಗಾರರು ಆಟದ ಘನತೆಗೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಪ್ರತಿಭಟನೆ ಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಹುದಿತ್ತು. ಟ್ರೋಫಿ ನಿರಾಕರಣೆಗಿಂತಲೂ, ಟ್ರೋಫಿಯನ್ನು ಪಡೆದ ನಂತರದ ಸಂದರ್ಶನಗಳಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸ ಬಹುದಾಗಿತ್ತು. ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ ವಿಶ್ವಕ್ಕೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಿತ್ತು. ಈ ಮೂಲಕ ಆಟದ ಗೆಲುವಿನೊಂದಿಗೆ ಕ್ರೀಡಾಸ್ಫೂರ್ತಿಯೂ ಉಳಿದಂತಾಗಿ, ಭಾರತದ ಆಟಗಾರರ ಪ್ರತಿಭಟನೆ ವಿಶ್ವದ ಗಮನಸೆಳೆಯುತ್ತಿತ್ತು. ಘನತೆಯಿಂದ ಪ್ರತಿಭಟಿಸುವ ಅವಕಾಶಗಳನ್ನು ಕೈಬಿಟ್ಟು, ಭಾರತದ ಕ್ರಿಕೆಟಿಗರು ಬಾಲಿಶವಾಗಿ ವರ್ತಿಸಿದ್ದಾರೆ; ಆಟಗಾರರೆನ್ನುವುದನ್ನು ಮರೆತು ಅಣಕು ಕಲಾವಿದರಂತೆ ವರ್ತಿಸಿದ್ದಾರೆ. ಈ ಹುಚ್ಚಾಟ ಕ್ರೀಡಾ ಇತಿಹಾಸದಲ್ಲಿ ಕೆಟ್ಟ ಮಾದರಿಯಾಗಿ ಉಳಿಯಲಿದೆ. ಆಟ ಮುಗಿದ ನಂತರ ಚಾಂಪಿಯನ್ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ, ಟ್ರೋಫಿಯ ಚಿತ್ರವಲ್ಲ ಎಂಬ ಭಾರತ ತಂಡವನ್ನು ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಹೇಳಿಕೆಯೂ ಅಸಂಬದ್ಧವಾದುದು.
ಜನರ ಮನಸ್ಸಿನಲ್ಲಿ ಉಳಿಯಲಿಕ್ಕೆ ಗೆಲುವಿನ ಜೊತೆಗೆ ನೈತಿಕ ನಡವಳಿಕೆಯೂ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.