ಶಿಕಾರಿಪುರ: ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯಗಳಾಗಿವೆ.
ರಾತ್ರಿ ಸುರಿದ ಮಳೆಗೆ ಕಪ್ಪನಹಳ್ಳಿ ಗ್ರಾಮದ ನಿವಾಸಿ ಶಿವಮೂರ್ತಿ ಮನೆ ಗೋಡೆ ಕುಸಿದಿದೆ. ರಾತ್ರಿ ಸಂದರ್ಭದಲ್ಲಿ ಕುಟುಂಬದವರೆಲ್ಲರೂ ಮಲಗಿದ ಸಂದರ್ಭದಲ್ಲಿ ಮನೆ ಕುಸಿದಿದೆ. ತಂದೆ ಶಿವಮೂರ್ತಿ(40) ತಾಯಿ ಚೇತನಾ(35),ಮಕ್ಕಳಾದ ಯುವರಾಜ(13) ಕೃಷ್ಣ(11) ಗಾಯಗೊಂಡಿದ್ದಾರೆ.
ತಕ್ಷಣ ಗ್ರಾಮಸ್ಥರು ಗೋಡೆ ಕುಸಿದ ಮಣ್ಣನ್ನು ತೆಗೆದು ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ರೀತಿ ನಾಗರಾಜಪ್ಪ ಮನೆ ಗೋಡೆ ಕುಸಿದಿದೆ. ಆದರೆ ಮನೆಯಲ್ಲಿ ಯಾರು ಇರಲಿಲ್ಲ.