ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ | ಇರಾನ್‌ನ ಹಡಗು ವಶಕ್ಕೆ: ಭಾರತೀಯ ಕರಾವಳಿ ಪಡೆ

Published 6 ಮೇ 2024, 15:57 IST
Last Updated 6 ಮೇ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಇರಾನ್ ಮೂಲದ ವ್ಯಕ್ತಿಗೆ ಸೇರಿದ ಹಡಗು ಮತ್ತು ಅದರಲ್ಲಿದ್ದ ಭಾರತ ಮೂಲದ ಆರು ಮಂದಿ ನಾವಿಕರನ್ನು ಕೇರಳದ ಕರಾವಳಿ ಭಾಗದಲ್ಲಿ ಭಾನುವಾರ ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ಕರಾವಳಿ ಪಡೆ (ಐಸಿಜಿ) ಸೋಮವಾರ ತಿಳಿಸಿದೆ. 

ಈ ಹಡಗು ಇರಾನ್ ಉದ್ಯಮಿಯೊಬ್ಬರಿಗೆ ಸೇರಿದಾಗಿದ್ದು, ತಮಿಳುನಾಡು ಮೂಲದ ಮೀನುಗಾರರಿಗೆ ಗುತ್ತಿಗೆ ನೀಡಿದ್ದರು. ಆದರೆ, ಈ ಮೀನುಗಾರರಿಗೆ ಅಗತ್ಯ ಸೌಕರ್ಯಗಳನ್ನು ನಿರಾಕರಿಸಲಾಗಿತ್ತು. ಜೊತೆಗೆ ಅವರ ಪಾಸ್‌ಪೋರ್ಟ್ ಅನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅದೇ ಹಡಗಿನಲ್ಲಿ ಇರಾನ್‌ನಿಂದ ತಾಯ್ನಾಡು ಭಾರತ ತಲುಪಲು ಮೀನುಗಾರರು ಬರುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿದುಬಂದಿದೆ. 

ಮತ್ತಷ್ಟು ವಿಚಾರಣೆಗಾಗಿ ಹಡಗನ್ನು ಕೇರಳದ ಕೊಚ್ಚಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT