ಭದೋಹಿ: ಮೊಹರಂ ತಿಂಗಳ ಚಂದ್ರ ದರ್ಶನದ ಬಳಿಕ ನಡೆದ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ, ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
‘ಕೆಲ ಯುವಕರು ಅನುಮತಿ ಪಡೆಯದೆ ಮಾಧೋಸಿಂಗ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಲಾಗಿತ್ತು’ ಎಂದು ಔರಾಯಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಚ್ಚಿದಾನಂದ ಪಾಂಡೆ ಹೇಳಿದರು.
‘ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿ, ಸಾಹಿಲ್ ಅಲಿಯಾಸ್ ಬಾದ್‌ಶಾ ಮತ್ತು ಗೋರಖ್ ಎಂಬವರನ್ನು ಆರೋಪಿಗಳೆಂದು ಗುರುತಿಸಲಾಯಿತು. ಸಾಹಿಲ್ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಗೋರಖ್ ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ’ ಎಂದರು.