ಶನಿವಾರ, ಏಪ್ರಿಲ್ 17, 2021
33 °C

ಕೊಹ್ಲಿ ಸೊನ್ನೆ: ವಾಹನ ಸವಾರರಿಗೆ ಪೊಲೀಸರಿಂದ ಏಕಾಗ್ರತೆ ಪಾಠ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದನ್ನು ಉದಾಹರಣೆಯಾಗಿ ತೆಗೆದುಕೊಂಡಿರುವ ಉತ್ತರಾಖಂಡ ಪೊಲೀಸರು ವಾಹನ ಸವಾರರಿಗೆ ಏಕಾಗ್ರತೆಯ ಪಾಠ ಮಾಡಿದ್ದಾರೆ.

ಶುಕ್ರವಾರ ಭಾರತ ಮತ್ತು ಇಂಗ್ಲೆಂಡ್‌ ನಡುವೆ ಮೊದಲ ಟಿ–20 ಕ್ರಿಕೆಟ್‌ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದನ್ನು ಉದಾಹರಣೆಯಾಗಿ ತೆಗೆದುಕೊಂಡಿರುವ ಉತ್ತರಾಖಂಡ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿಯ ಪಾಠ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪೊಲೀಸರು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ದರಿಸಿದರೆ ಸಾಲದು, ಏಕಾಗ್ರತೆಯಿಂದ, ಜಾಗರೂಕರಾಗಿ ವಾಹನ ಚಲಾವಣೆ ಮಾಡಬೇಕು. ಇಲ್ಲವಾದಲ್ಲಿ ವಿರಾಟ್‌ ಕೊಹ್ಲಿಯಂತೆ ಶೂನ್ಯಕ್ಕೆ ಔಟ್‌ ಆಗಬೇಕಾಗುತ್ತದೆ ಎಂಬ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಔಟ್‌ ಆಗಿ ನಿರ್ಗಮಿಸುತ್ತಿರುವ ಫೋಟೊವನ್ನು ಬಳಸಿ ಈ ಮೇಲಿನ ಸಾಲುಗಳನ್ನು ಟ್ವೀಟ್‌ ಮಾಡಲಾಗಿದೆ.

ಉತ್ತರಾಖಂಡ ಪೊಲೀಸರ ಈ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಪರ ಮತ್ತು ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ.

ನಿನ್ನೆ ನೆಡೆದ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು