ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಜನ್ಮಭೂಮಿ | ಹೋರಾಟ, ರಾಜಕಾರಣ, ನ್ಯಾಯಾಲಯ ತೀರ್ಪು...

ಸಂಕಲನ
Last Updated 30 ಸೆಪ್ಟೆಂಬರ್ 2020, 10:21 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಶತಮಾನದಹಿನ್ನೆಲೆಯಿದೆ. ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳ ಹಿಂದಿನ ವ್ಯಾಜ್ಯ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ನೇತೃತ್ವದಲ್ಲಿ ನಡೆದಿದ್ದ ರಥಯಾತ್ರೆ, ಬಾಬರಿ ಮಸೀದಿ ಧ್ವಂಸ ಪ್ರಕರಣ, ಇದರ ನಂತರದ ಘಟನಾವಳಿಗಳು... ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವ ಈ ಸಂದರ್ಭದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಈವರೆಗಿನ ಪ್ರಮುಖ ಬೆಳವಣಿಗೆಗಳ ಸುದ್ದಿ, ವಿಶ್ಲೇಷಣೆ, ಲೇಖನಗಳ ಸಂಕಲನ ಇಲ್ಲಿದೆ.

ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದದ ತೀರ್ಪು 2019ರ ನವೆಂಬರ್ 9ರಂದು ಪ್ರಕಟವಾಗಿತ್ತು. ಆ ಸಂದರ್ಭ, ಅಯೋಧ್ಯೆ ವಿವಾದದ ಹಿನ್ನೆಲೆ ಕಟ್ಟಿಕೊಟ್ಟ ಬರಹವಿದು.

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪಿನಲ್ಲಿ ಏನು ಹೇಳಲಾಗಿದೆ?

ಮೊಘಲ್ ದೊರೆ ಬಾಬರ್ 1528ರಲ್ಲಿ ಅಯೋಧ್ಯೆಯಲ್ಲಿದ್ದ ಮಂದಿರವನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮಸೀದಿ ನಿರ್ಮಿಸಿದ ಎನ್ನುವುದು ಹಿಂದೂಗಳ ಪ್ರತಿಪಾದನೆ. ಬ್ರಿಟಿಷರ ಆಳ್ವಿಕೆಯಲ್ಲಿ ಮಂದಿರ–ಮಸೀದಿ ವಿಚಾರ ಮುನ್ನೆಲೆಗೆ ಬಂದ ನಂತರದ ಬೆಳವಣಿಗೆಗಳು ಇಲ್ಲಿವೆ

ವಿವಾದಿತ ರಾಮ ಜನ್ಮಭೂಮಿ ತೀರ್ಪು ಹೊರಬರುತ್ತಿದ್ದಹಿನ್ನೆಲೆಯಲ್ಲಿ ದೇಶದ ಜನರ ಗಮನ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿತ್ತು. ಜನರ ಸುದೀರ್ಘ ಕಾತರ, ಕುತೂಹಲಗಳೀಗಅಂತ್ಯವಾಗಿವೆ.ಇಂತಹ ಸಂದರ್ಭದಲ್ಲಿ ಅಯೋಧ್ಯೆ ತೀರ್ಪು ನೀಡಿದಐದು‌ ನ್ಯಾಯಮೂರ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ

ರಾಮ ಮಂದಿರ ಹೋರಾಟದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಪಾತ್ರ ಹಿರಿದು. ಅಡ್ವಾಣಿ ಅವರ ಹೋರಾಟಕ್ಕೆ ಸಂಬಂಧಸಿದ ಪೂರ್ಣ ಚಿತ್ರಣ ಕಟ್ಟಿಕೊಡುವ ಬರಹ ಇಲ್ಲಿದೆ

ರಾಮ ಮಂದಿರ ನಿರ್ಮಾಣ ಕುರಿತಂತೆ 2019ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಉಲ್ಲೇಖಿಸಿತ್ತು. ಅಯೋಧ್ಯೆ ವಿವಾದ ಮತ್ತು ಬಿಜೆಪಿ ನಂಟೂ ಹತ್ತಾರು ವರ್ಷಗಳ ಹಿಂದಿನದ್ದು. 1989ರಿಂದಲೂಬಿಜೆಪಿ ತನ್ನ ಪ್ರಣಾಳಿಕೆಗಳಲ್ಲಿ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇತ್ತು.

ರಾಮ ಮಂದಿರ ಹೋರಾಟಕ್ಕೂ ಉಡುಪಿಯ ಪೇಜಾವರ ಮಠಾಧೀಶ, ಕೃಷ್ಣೈಕ್ಯ ವಿಶ್ವೇಶತೀರ್ಥರಿಗೂ ಅವಿನಾಭಾವ ಸಂಬಂಧವಿದೆ. ಆ ಬಗ್ಗೆಅಯೋಧ್ಯೆಗೆ ಕರ ಸೇವಕರಾಗಿ ತೆರಳಿದ್ದ ಮೈಸೂರಿನ ರವಿಚಂದ್ರ ಬಲ್ಲಾಳ್‌ ನೆನಪು ಹಂಚಿಕೊಂಡಿದ್ದಾರೆ

ಅಯೋಧ್ಯೆ ವಿವಾದದ ಬೀಗ ತೆರೆದಿದ್ದು, ವಿವಾದಕ್ಕೆರಾಜಕಾರಣದ ಆಯಾಮ ಕಲ್ಪಿಸಿದ್ದುಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯೇ?ಅಯೋಧ್ಯೆ ನಿವೇಶನ ವಿವಾದದ ದಿಕ್ಕನ್ನು ಬದಲಿಸಲು ಕಾರಣವಾದ 1985ರ ಸುಪ್ರೀಂ ಕೋರ್ಟ್ತೀರ್ಪು ಯಾವುದು? ಇಲ್ಲಿದೆ

ಅಯೋಧ್ಯೆ ಬಗ್ಗೆ ಪುರಾತತ್ವ ಇಲಾಖೆಯೂ ಸಂಶೋಧನೆ ನಡೆಸಿದೆ. ಉತ್ಖನನವನ್ನೂ ನಡೆಸಲಾಗಿದೆ.2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಸಂಸ್ಥೆಯು ಬಾಬರಿ ಮಸೀದಿ ಇದ್ದ ಜಾಗ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಉತ್ಖನನ ನಡೆಸಿದಾಗ, ಸುಟ್ಟ ಇಟ್ಟಿಗೆಯ ಕಿರುಗೋಡೆಗಳು, ದೈವದಂಪತಿಯ ಶಿಲ್ಪಗಳು, ಕಮಲದ ಹೂವಿನ ರಚನೆಗಳು ಅಲ್ಲಿ ಪತ್ತೆಯಾಗಿವೆ. ಇವೆಲ್ಲವೂ ಭಾರಿ ಕಟ್ಟಡವೊಂದರ ಭಾಗಗಳಾಗಿದ್ದು, ಈ ಕಟ್ಟಡದ ವಿನ್ಯಾಸವು ಉತ್ತರ ಭಾರತದ ದೇವಾಲಯಗಳ ವಿನ್ಯಾಸವನ್ನು ಹೋಲುತ್ತದೆ ಎಂದು ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ವರದಿ ಹೇಳಿತ್ತು.

ಬಾಬರಿ ಮಸೀದಿ ಧ್ವಂಸ ಹಾಗೂ ರಾಮಮಂದಿರ ನಿರ್ಮಾಣ ಚಳವಳಿ ಮೂಲಕ ಹಿಂದುತ್ವವಾದಿಗಳು ಹಾಗೂ ಬಿಜೆಪಿಯ ಹಲವು ನಾಯಕರು ಮುನ್ನೆಲೆಗೆ ಬಂದರು. ಅಡ್ವಾಣಿ ಅವರ ಜತೆಗೆ ಉಮಾ ಭಾರತಿ, ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್ ಅಂತಹವರು ರಾಜಕೀಯವಾಗಿ ಶಕ್ತಿಯಾಗಿ ಬೆಳೆದರು.

ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 30 (ಬುಧವಾರ) ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಿಸಿದ್ದು, ಪ್ರಕರಣದ ಎಲ್ಲ ಆರೋಪಿಗಳು ದೋಷಮುಕ್ತ ಎಂದು ಹೇಳಿದೆ.ವಿಶೇಷ ನ್ಯಾಯಾಲಯದ ಸುತ್ತಲೂ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ಅವರು ತೀರ್ಪು ಪ್ರಕಟಿಸಿದರು. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಪ್ರಕರಣದ ಎಲ್ಲ 32 ಆರೋಪಿಗಳೂ ನಿರ್ದೋಷಿಗಳು ಎಂದು ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ಅಯೋಧ್ಯೆ ಸಂಬಂಧಿತ ಇನ್ನಷ್ಟು ಸುದ್ದಿ, ವಿಶ್ಲೇಷಣ, ಬರಹ, ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/ayodhya-verdict

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT