ಮಂಗಳವಾರ, ಮಾರ್ಚ್ 2, 2021
23 °C

ಹಕ್ಕಿಜ್ವರ ಭೀತಿ: ಮಹಾರಾಷ್ಟ್ರದಲ್ಲಿ 2,000 ಪಕ್ಷಿಗಳನ್ನು ಕೊಲ್ಲಲು ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್‌: ಮಹಾರಾಷ್ಟ್ರದ ಪರ್ಭನಿ ಮತ್ತು ಬೀಡ್‌ ಜಿಲ್ಲೆಗಳ ಎರಡು ಗ್ರಾಮಗಳಲ್ಲಿ ಮೃತಪಟ್ಟ ಕೋಳಿಗಳಿಗೆ ‘ಹಕ್ಕಿ ಜ್ವರ’ ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶನಿವಾರ 2,000ಕ್ಕೂ ಅಧಿಕ ಪಕ್ಷಿಗಳನ್ನು ಕೊಲ್ಲಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

‘ಪರ್ಭನಿ ಜಿಲ್ಲೆಯ ಕುಪ್ತಾ ಗ್ರಾಮ ಮತ್ತು ಬೀಡ್‌ ಜಿಲ್ಲೆಯ ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿ ಮೃತಪಟ್ಟ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸದ್ಯ ಈ ಗ್ರಾಮಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇಲ್ಲಿ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ. ಅಲ್ಲದೆ ಈ ಪ್ರದೇಶದಲ್ಲಿ ಕೋಳಿ ಉತ್ಪನ್ನಗಳ ಸಾಗಣೆಯನ್ನು ಕೂಡ ನಿಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

‘ಕು‍ಪ್ತಾ ಗ್ರಾಮದಲ್ಲಿ ಶನಿವಾರ ಸುಮಾರು 468 ಪಕ್ಷಿಗಳನ್ನು ಸಾಯಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದೀಪಕ್‌ ಮುಗ್ಲಿಕರ್‌ ಅವರು ತಿಳಿಸಿದರು.

ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿ 1,600 ಪಕ್ಷಿಗಳನ್ನು ಕೊಲ್ಲಲಾಗುವುದು. ಇದಕ್ಕಾಗಿ  ತಂಡವನ್ನು ಕೂಡ ರಚಿಸಲಾಗಿದೆ. ‍2 ಮೀಟರ್‌ ಆಳದ ತಗ್ಗು ಅಗೆಯಲಾಗಿದ್ದು, ಅದರಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಸಿಂಪಡಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ. ರವಿ ಸುರೇವಾಡ ಅವರು ಮಾಹಿತಿ ನೀಡಿದರು.

‘ಮಹಾರಾಷ್ಟ್ರದಲ್ಲಿ ಜನವರಿ 8 ರಿಂದ ಒಟ್ಟು 3,949 ಪಕ್ಷಿಗಳ ಕಳೇಬರ ಪತ್ತೆಯಾಗಿವೆ’ ಎಂದು ಅಧಿಕಾರಿಗಳು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು