ಕಾಂಗ್ರೆಸ್‌ನಿಂದ ಅಂಬೇಡ್ಕರ್ ಸ್ಮರಣೆ: ಯೂಟ್ಯೂಬ್ ಚಾನಲ್‌ಗೆ ಚಾಲನೆ

ನವದೆಹಲಿ: ಪರಿನಿರ್ವಾಣ ದಿನ ಹಿನ್ನೆಲೆಯಲ್ಲಿ ಮಂಗಳವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ, ವ್ಯಕ್ತಿತ್ವವನ್ನು ಸ್ಮರಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡರು, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪಕ್ಷದ ಪರಿಶಿಷ್ಟ ಜಾತಿ, ಪಂಗಡ ವಿಭಾಗ ಇದೇ ವೇಳೆ ಯೂಟ್ಯೂಬ್ ಚಾನಲ್‌ಗೆ ಚಾಲನೆ ನೀಡಿತು. ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಸೋನಿಯಾಗಾಂಧಿ, ಅಧೀರ್ ರಂಜನ್ ಚೌಧರಿ ಪುಷ್ಪನಮನ ಸಲ್ಲಿಸಿದರು.
ಪರಿನಿರ್ವಾಣ ದಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಖರ್ಗೆ ಅವರು, ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯ ಚಿಂತನೆಗಳನ್ನು ಕುರಿತಂತೆ ಜನತೆ ಸಂಕಲ್ಪ ತೊಡಬೇಕು‘ ಎಂದು ಹೇಳಿದ್ದಾರೆ.
ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು, ‘ನಾವು ಮೊದಲಿಗೆ ಮತ್ತು ಅಂತಿಮವಾಗಿ ಭಾರತೀಯರು. ಎಲ್ಲರೂ ಸಮಾನರು. ಇದಕ್ಕೆ ವಿರುದ್ಧವಾದ ಯಾವುದನ್ನೂ ಒಪ್ಪಲಾಗದು’ ಎಂದಿದ್ದಾರೆ.
ಪಕ್ಷವು ‘ಅಂಬೇಡ್ಕರ್ ಅವರು ತಮ್ಮ ಬದುನ್ನು ಹಿಂದುಳಿದವರ ಸ್ವಾತಂತ್ರ್ಯ, ಏಳಿಗೆಗಾಗಿ ಮುಡಿಪಿಟ್ಟರು’ ಎಂದು ಟ್ವೀಟ್ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.