Covid-19 India Update: ಕೇರಳದಲ್ಲಿ 61 ಸಾವಿರ ಸಕ್ರಿಯ ಪ್ರಕರಣಗಳು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 5,229 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 6,776 ಮಂದಿ ಗುಣಮುಖರಾಗಿದ್ದು, 127 ಮಂದಿ ಸಾವಿಗೀಡಾಗಿದ್ದಾರೆ.
ಒಟ್ಟು 18,42,587 ಪ್ರಕರಣಗಳು ದಾಖಲಾಗಿದ್ದು, 17,10,050 ಮಂದಿ ಗುಣಮುಖರಾಗಿದ್ದಾರೆ ಹಾಗೂ 47,599 ಮಂದಿ ಸಾವಿಗೀಡಾಗಿದ್ದಾರೆ.
ಕೇರಳದಲ್ಲಿ 5,718 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 61,401ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 4,067 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 3,206 ಪ್ರಕರಣಗಳು, ಮಧ್ಯ ಪ್ರದೇಶದಲ್ಲಿ 1,324 ಪ್ರಕರಣಗಳು, ಹರಿಯಾಣದಲ್ಲಿ 1,602, ತಮಿಳುನಾಡಿನಲ್ಲಿ 1,391, ರಾಜಸ್ಥಾನದಲ್ಲಿ 1,934 ಕೋವಿಡ್–19 ಪ್ರಕರಣಗಳು ದಾಖಲಾಗಿವೆ.
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,594 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 95,71,559 ಕ್ಕೆ ಏರಿಕೆಯಾಗಿದೆ. ಆ ಪೈಕಿ 1,39,188 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ದೇಶದಲ್ಲಿ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಿದ್ದು, ಇದುವರೆಗೆ 90,16,289 ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,16,082 ಸಕ್ರಿಯ ಪ್ರಕರಣಗಳಿವೆ.
ಡಿ.4ರವರೆಗೆ 14,47,27,749 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
With 36,594 new #COVID19 infections, India's total cases rise to 95,71,559
With 540 new deaths, toll mounts to 1,39,188. Total active cases at 4,16,082
Total discharged cases at 90,16,289 with 42,916 new discharges in the last 24 hrs pic.twitter.com/lOpCRoNQrv
— ANI (@ANI) December 4, 2020
Total number of samples tested up to 3rd December is 14,47,27,749 including 11,70,102 samples tested yesterday: Indian Council of Medical Research (ICMR) pic.twitter.com/yyjOOsrpZk
— ANI (@ANI) December 4, 2020
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.