ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದವರಲ್ಲೂ ಸೋಂಕು ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಡೆಲ್ಟಾ: ಅಧ್ಯಯನ

Last Updated 19 ಆಗಸ್ಟ್ 2021, 5:09 IST
ಅಕ್ಷರ ಗಾತ್ರ

ಚೆನ್ನೈ: ಲಸಿಕೆ ಪಡೆದ, ಪಡೆಯದವರಲ್ಲಿ ಸೋಂಕು ಉಂಟು ಮಾಡುವ ಸಾಮರ್ಥ್ಯವನ್ನು ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ‘ಡೆಲ್ಟಾ’ ಹೊಂದಿದೆ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಚೆನ್ನೈನಲ್ಲಿ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಆದರೆ, ಡೆಲ್ಟಾ ಕಾರಣದಿಂದ ಸಂಭವಿಸುವ ಸಾವಿನ ಸಾಧ್ಯತೆ ಲಸಿಕೆ ಪಡೆದವರಲ್ಲಿ ಕಡಿಮೆ ಎಂಬುದು ತಿಳಿದು ಬಂದಿದೆ.

ಡೆಲ್ಟಾ (B.1.617.2) ರೂಪಾಂತರದ ಪರಿಣಾಮಗಳು ಲಸಿಕೆ ಪಡೆದವರು, ಪಡೆಯದವರಲ್ಲಿ ಭಿನ್ನವಾಗಿರುವುದಿಲ್ಲ ಎಂಬುದು ಐಸಿಎಂಆರ್‌ ಅಧ್ಯಯನದಲ್ಲಿ ಉಲ್ಲೇಖವಾಗಿದೆ. ಕೊರೊನಾ ವೈರಸ್‌–ಡೆಲ್ಟಾ ಜಾಗತಿಕವಾಗಿ ಅತಿವೇಗವಾಗಿ ಹರಡುವ ಪ್ರಬಲ ಸಾಮರ್ಥ್ಯ ಹೊಂದಿದೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ಲದೇ ಇದನ್ನು ಆತಂಕಕಾರಿ ಮಾದರಿ ಎಂದೂ ಕರೆದಿದೆ.

ಇದೇ ವೇಳೆ, ಲಸಿಕೆಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳಲು ಡೆಲ್ಟಾ ಮಾದರಿಗೆ ಸಾಧ್ಯವೂ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT